ಅಜೀಂ ಪ್ರೇಮ್‌ಜಿ ಹೆಲ್ತ್ ಈಕ್ವಿಟಿ ಫೆಲೋಶಿಪ್

Health

ನಮ್ಮ ಫೆಲೋಶಿಪ್‌ಗಳು ಯುವ ವೈದ್ಯಕೀಯ ವೃತ್ತಿಪರರಿಗೆ ಆರೋಗ್ಯ ಸೇವೆಗಳ ಲಭ್ಯತೆಯು ಅಷ್ಟೇನೂ ಚೆನ್ನಾಗಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸುತ್ತವೆ. ಈ ಅವಧಿಯಲ್ಲಿ ಆಳವಾದ ಸಮುದಾಯ ಪರಿಣತಿ ಹೊಂದಿರುವ ಮಾರ್ಗದರ್ಶಕರು ಅವರಿಗೆ ಮಾರ್ಗದರ್ಶನ ನೀಡುತ್ತಾರೆ.

ಆರೋಗ್ಯ ಕ್ಷೇತ್ರದ ಒಂದು ಅತಿ ಮುಖ್ಯ ಸಮಸ್ಯೆ ಎಂದರೆ ‍ಗ್ರಾಮೀಣ ಮತ್ತು ತಲುಪಲು ದುಸ್ತರವಾದ ಸ್ಥಳಗಳಲ್ಲಿ ಇರುವ ಅತ್ಯಂತ ದುರ್ಬಲ ವರ್ಗಗಳಿಗೆ ಸೇರಿದವರೊಂದಿಗೆ ಕೆಲಸ ಮಾಡುವ ಸವಾಲನ್ನು ಸ್ವೀಕರಿಸುವ ಆರೋಗ್ಯ ಸೇವಾ ವೃತ್ತಿಪರರ ತೀವ್ರ ಕೊರತೆ.

ಅಜೀಂ ಪ್ರೇಮ್‌ಜಿ ಹೆಲ್ತ್ ಈಕ್ವಿಟಿ ಫೆಲೋಶಿಪ್, ಸಂಪನ್ಮೂಲಗಳ ಕೊರತೆಯಿರುವ ತಲುಪಲು ದುಸ್ತರವಾದ ಪ್ರದೇಶಗಳಲ್ಲಿ ಇರುವ ಆರೋಗ್ಯ ಸೇವೆಯ ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುತ್ತಾ, ಅಂತಹ ಪ್ರದೇಶಗಳಲ್ಲಿ ವೈದ್ಯಕೀಯ ವೃತ್ತಿಯನ್ನು ನಿರ್ವಹಿಸುವಲ್ಲಿನ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಒಂದು ಅಪರೂಪದ ಮತ್ತು ಅತ್ಯಮೂಲ್ಯವಾದ ಅವಕಾಶವನ್ನು ನೀಡುತ್ತದೆ.

ಈ ಫೆಲೋಶಿಪ್‌ಗಳನ್ನು ಪಾಲುದಾರ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಗುತ್ತದೆ — ಇವು ಸಾಮಾನ್ಯವಾಗಿ ಲಾಭೋದ್ದೇಶವಿಲ್ಲದ ಸಂಸ್ಥೆಗಳು (NGOs), ಆಸ್ಪತ್ರೆಗಳು ಅಥವಾ ಗ್ರಾಮೀಣ, ಆದಿವಾಸಿ ಮತ್ತು ಇತರ ನಿರ್ಲಕ್ಷಿತ ಸಮುದಾಯಗಳಿಗೆ ಸೇವೆ ಸಲ್ಲಿಸುವ ಆರೋಗ್ಯ ಕೇಂದ್ರಗಳಾಗಿರುತ್ತವೆ.

ಫೆಲೋಗಳು, ಸವಾಲಿನ ಮತ್ತು ವಿಶಿಷ್ಟ ಪರಿಸರಗಳಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವವಿರುವ ಮಾರ್ಗದರ್ಶಕರಿಂದ ನೇರವಾಗಿ ಕಲಿಯುತ್ತಾರೆ. ಈ ಮಾರ್ಗದರ್ಶಕರು ಸೀಮಿತ ಸಂಪನ್ಮೂಲಗಳ ನಡುವೆಯೇ ಕೆಲಸ ಮಾಡುತ್ತಾರೆ, ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಹತ್ತಾರು ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ ಮತ್ತು ಇಡೀ ಸಮುದಾಯದ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಸೇವೆಯನ್ನು ಒಂದು ಸಮಗ್ರ ದೃಷ್ಟಿಕೋನದಿಂದ ನೋಡುತ್ತಾರೆ.

ವೈದ್ಯಕೀಯ ಕ್ಷೇತ್ರದ ಕೆಲಸವನ್ನು ಸೇವಾ ಮನೋಭಾವದಿಂದ ನೋಡುವ ಹಾಗೂ ಗ್ರಾಮೀಣ ಭಾರತದ ನೈಜ ಪರಿಸ್ಥಿತಿ ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಉತ್ಸುಕರಾಗಿರುವ ವ್ಯಕ್ತಿಗಳನ್ನು ನಾವು ಹುಡುಕುತ್ತಿದ್ದೇವೆ. ಇಂತಹ ಪರಿಸರದಲ್ಲಿ ಜೀವನ ಮತ್ತು ಕೆಲಸ ನಿಜವಾಗಿಯೂ ಹೇಗಿರುತ್ತದೆ ಎಂಬುದನ್ನು ಅನುಭವದ ಮೂಲಕ ತಿಳಿಸಿಕೊಡಲು ಈ ಫೆಲೋಶಿಪ್ ಒಂದು ವ್ಯವಸ್ಥಿತ ಮಾರ್ಗವನ್ನು ಕಲ್ಪಿಸಿಕೊಡುತ್ತದೆ.

ಇದರೊಂದಿಗೆ, ಫೆಲೋಗಳಿಗೆ ನಮ್ಮ ಆಸ್ಪತ್ರೆಗಳಲ್ಲಿ ಅಥವಾ ನಮ್ಮ ಸಹವರ್ತಿ ಆಸ್ಪತ್ರೆಗಳಲ್ಲಿ ದೀರ್ಘಾವಧಿಯ ಉದ್ಯೋಗಗಳನ್ನು ಪಡೆಯುವ ಅವಕಾಶವೂ ಇರಲಿದೆ.

ನಾವು ಸ್ನಾತಕೋತ್ತರ ಪದವಿ ಮುಗಿಸಿದ ವೈದ್ಯರಿಗೆ ಮತ್ತು ಯುವ ಎಂಬಿಬಿಎಸ್ ವೈದ್ಯರಿಗಾಗಿ ಪ್ರತ್ಯೇಕ ಫೆಲೋಶಿಪ್ ಕಾರ್ಯಕ್ರಮವನ್ನು ಹೊಂದಿದ್ದೇವೆ. ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರಿಗಾಗಿ ಮುಂಬರುವ ಫೆಲೋಶಿಪ್ ಅವಕಾಶಗಳ ಬಗ್ಗೆ ಮಾಹಿತಿ ಪಡೆಯಲು, ಇಲ್ಲಿ ಸೈನ್ ಅಪ್ ಮಾಡಿ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.