ಆರೋಗ್ಯ

Health

ಉತ್ತಮ ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ಪ್ರತಿ ಕುಟುಂಬಕ್ಕೂ ಇರುವ ಹಕ್ಕು ಎಂದು ನಾವು ನಂಬುತ್ತೇವೆ.

ಆರೋಗ್ಯ ಎನ್ನುವುದು ಎಲ್ಲರಿಗೂ ಸಿಗಬೇಕಾದ ಒಂದು ಸಾರ್ವಜನಿಕ ಸೌಲಭ್ಯ ಎಂಬುದು ನಮ್ಮ ನಿಲುವು. ಈ ಕಾರಣದಿಂದಲೇ ನಾವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು – ಸಮುದಾಯದ ಮೊದಲ ಸಂಪರ್ಕದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ದ್ವಿತೀಯ ಹಂತದ ಆಸ್ಪತ್ರೆಗಳವರೆಗೂ – ಬಲಪಡಿಸಲು ಶ್ರಮಿಸುತ್ತಿದ್ದೇವೆ. ಈ ವ್ಯವಸ್ಥೆಯ ಪ್ರತಿಯೊಂದು ಭಾಗವೂ ಸರಿಯಾಗಿ ಕೆಲಸ ಮಾಡಿದಾಗ, ಆರೈಕೆ ಜನರಿಗೆ ಸುಲಭವಾಗಿ ಸಿಗುತ್ತದೆ, ವಿಶ್ವಾಸಾರ್ಹವಾಗುತ್ತದೆ ಮತ್ತು ಹೆಚ್ಚು ಮಾನವೀಯವಾಗುತ್ತದೆ.

ಈ ಕ್ಷೇತ್ರದಲ್ಲಿ ನಮ್ಮ ಪಯಣ 2022ರಲ್ಲಿ ಆರಂಭವಾದಾಗಿನಿಂದಲೂ ನಿರಂತರವಾಗಿ ಬೆಳೆಯುತ್ತಿದೆ. ಈ ಪಯಣಯಲ್ಲಿ, ಕೆಲವು ಮುಖ್ಯ ತತ್ತ್ವಗಳು ನಮಗೆ ದಾರಿದೀಪವಾಗಿವೆ:

  • ವ್ಯಕ್ತಿಗಳು ಮತ್ತು ಕುಟುಂಬಗಳ ಆರೋಗ್ಯಕರ ಜೀವನ ಎನ್ನುವುದು ಕೇವಲ ವೈದ್ಯಕೀಯ ಸೇವೆಗಳನ್ನು ಪಡೆಯುವುದಷ್ಟಕ್ಕೇ ಸೀಮಿತವಾಗಿಲ್ಲ — ರೋಗ ತಡೆಗಟ್ಟವುದು, ಆರೋಗ್ಯದ ಬಗ್ಗೆ ಅರಿವು ಮತ್ತು ಒಟ್ಟಾರೆ ಯೋಗಕ್ಷೇಮವೂ ಅಷ್ಟೇ ಮುಖ್ಯ.

  • ತಳಮಟ್ಟದಲ್ಲಿ ಗಟ್ಟಿಯಾದ ಸಮುದಾಯ ಆರೋಗ್ಯ ವ್ಯವಸ್ಥೆ ಇರುವುದು ಅತ್ಯಗತ್ಯ. ಪರಿಣಾಮಕಾರಿಯಾದ ಪ್ರಾಥಮಿಕ ಮತ್ತು ಎರಡನೇ ಹಂತದ ಆರೈಕೆ ವ್ಯವಸ್ಥೆಯ ಬೆಂಬಲವೂ ಬಹಳ ಮುಖ್ಯ.

  • ಒಂದು ಸದೃಢ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮಾತ್ರ ದೀರ್ಘಾವಧಿಯಲ್ಲಿ ಪ್ರತಿಯೊಬ್ಬರಿಗೂ ಕೈಗೆಟುಕುವ ಮತ್ತು ಸುಸ್ಥಿರವಾದ ಆರೋಗ್ಯ ಸೇವೆಯನ್ನು ನೀಡಲು ಸಾಧ್ಯ.

ನಾವು ಗ್ರಾಮೀಣ ಭಾಗಗಳಲ್ಲಿ ನಮ್ಮ ಕ್ಷೇತ್ರ ಸಂಸ್ಥೆಗಳ ಮೂಲಕ ಮತ್ತು ಬೆಂಗಳೂರಿನಲ್ಲಿ ಒಂದು ಪ್ರಮುಖ ಉಪಕ್ರಮದ ಮೂಲಕ ನೇರವಾಗಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಸಮುದಾಯಗಳಿಗೆ ಚಿಕಿತ್ಸೆಯ ಲಭ್ಯತೆಯನ್ನು ವಿಸ್ತರಿಸಲು, ನಾವು ಒಂದು ವೈದ್ಯಕೀಯ ಕಾಲೇಜು ಸೇರಿದಂತೆ 30 ಆಸ್ಪತ್ರೆಗಳನ್ನು ಸ್ಥಾಪಿಸುತ್ತಿದ್ದೇವೆ. ಇವು, ಅವಶ್ಯ ಸೇವೆಗಳನ್ನು ಅಗತ್ಯವಿರುವವರಿಗೆ ಇನ್ನಷ್ಟು ಹತ್ತಿರವಾಗಿಸಲಿದೆ. ಜೊತೆಗೆ, ಶಿಕ್ಷಣ ಮತ್ತು ತರಬೇತಿಯ ಮೂಲಕ ಆರೋಗ್ಯ ಕ್ಷೇತ್ರದ ಕಾರ್ಯಪಡೆಯನ್ನು ಬಲಪಡಿಸುತ್ತೇವೆ.

ನಾವು ತಲುಪಲು ದುಸ್ತರವಾದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಸಂಸ್ಥೆಗಳೊಂದಿಗೆ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದೇವೆ; ಅವರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಅವರು ತಮ್ಮ ಕೆಲಸದಲ್ಲಿ ಆಳವಾಗಿ ತೊಡಗಿಸಿಕೊಳ್ಳಲು ಅನುದಾನಗಳ ಮೂಲಕ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಹಾಗೆಯೇ, ಕೈಗೆಟುಕುವ ದರದ ಚಿಕಿತ್ಸೆಯು ಹೆಚ್ಚಿನ ಸಮುದಾಯಗಳನ್ನು ತಲುಪುವಂತೆ ಮಾಡಲು, ನಾವು ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಆಸ್ಪತ್ರೆಗಳ ದೇಶವ್ಯಾಪಿ ಜಾಲವನ್ನು ನಿರ್ಮಿಸುತ್ತಿದ್ದೇವೆ.

ಆರೋಗ್ಯಕ್ಕೆ ಸಂಬಂಧಿಸಿದ ನಮ್ಮ ಕ್ಷೇತ್ರ ಅಧ್ಯಯನಗಳು ಮತ್ತು ಸಂಶೋಧನಾ ಅನುದಾನಗಳು, ಸಾರ್ವಜನಿಕ ಆರೋಗ್ಯದಲ್ಲಿ ಎದುರಾಗುವ ತಳಮಟ್ಟದ ಸವಾಲುಗಳ ಮೇಲೆ ಗಮನ ಹರಿಸುತ್ತವೆ. ನಮ್ಮ ಫೆಲೋಶಿಪ್‌ಗಳ ಮೂಲಕ, ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ಸೂಕ್ತ ಸೌಲಭ್ಯಗಳಿಲ್ಲದ ಸಮುದಾಯಗಳೊಂದಿಗೆ ನೇರವಾಗಿ ಕೆಲಸ ಮಾಡುವ ಅಮೂಲ್ಯವಾದ ಪ್ರಾಯೋಗಿಕ ಅನುಭವವನ್ನು ನಾವು ಒದಗಿಸುತ್ತೇವೆ.

ಕೊನೆಯದಾಗಿ, ‘ದಿ ಹೆಲ್ತ್ ವರ್ಕರ್‘ ಪತ್ರಿಕೆಯು, ಸಾರ್ವಜನಿಕ ಆರೋಗ್ಯದ ವಿಷಯಗಳ ಕುರಿತು ವಿಶ್ವಾಸಾರ್ಹ ಹಾಗೂ ಎಲ್ಲರ ಕೈಗೆಟುಕುವ ಧ್ವನಿ. ಇದು ತಳಸ್ತರದಿಂದ ಉಪಯುಕ್ತ ಒಳನೋಟಗಳು, ಕಲಿಕೆಗಳು ಮತ್ತು ನೈಜ ಕಥೆಗಳನ್ನು ನಮ್ಮ ಮುಂದೆ ತರಲು ಪ್ರಯತ್ನಿಸುತ್ತದೆ.

ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ

ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ

ಸಾರ್ವಜನಿಕ ಸೇವೆಗಳ ಲಭ್ಯತೆಯು ತೀರಾ ಕಡಿಮೆಯಿರುವ ಪ್ರದೇಶಗಳೂ ಸೇರಿದಂತೆ, ನಾವು ಭಾರತದ ಆರು ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಬೆಂಬಲ ನೀಡುತ್ತಿದ್ದೇವೆ
ಹೆಚ್ಚಿನ ಓದಿಗೆ

ಬೆಂಗಳೂರಿನಲ್ಲಿ ನಮ್ಮ ಕೆಲಸ

ಬೆಂಗಳೂರಿನಲ್ಲಿ ನಮ್ಮ ಕೆಲಸ

ಒಂದು ಸಮಗ್ರ ಕಾರ್ಯಕ್ರಮದ ಮೂಲಕ ನಾವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ನಗರ ಸಮುದಾಯಗಳ ಆರೋಗ್ಯ ಮತ್ತು ಯೋಗಕ್ಷೇಮದ ಕಡೆಗೆ ಗಮನ ಹರಿಸುತ್ತಿದ್ದೇವೆ
ಹೆಚ್ಚಿನ ಓದಿಗೆ

ಆಸ್ಪತ್ರೆಗಳು

ಆಸ್ಪತ್ರೆಗಳು

ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ನಮ್ಮ ಆಸ್ಪತ್ರೆಗಳ ಜಾಲವು ಆರೋಗ್ಯ ಕ್ಷೇತ್ರದಲ್ಲಿರುವ ಪ್ರಮುಖ ಕೊರತೆಗಳನ್ನು ನೀಗಿಸಲು ಪ್ರಯತ್ನಿಸಲಿವೆ
ಹೆಚ್ಚಿನ ಓದಿಗೆ

ವೈದ್ಯಕೀಯ ಕಾಲೇಜು ಮತ್ತು ಆರೋಗ್ಯ ಶಿಕ್ಷಣ

ವೈದ್ಯಕೀಯ ಕಾಲೇಜು ಮತ್ತು ಆರೋಗ್ಯ ಶಿಕ್ಷಣ

ತರಬೇತಿ ಮತ್ತು ಶಿಕ್ಷಣದ ಮೂಲಕ ಭಾರತದ ಆರೋಗ್ಯ ಕ್ಷೇತ್ರದ ಕಾರ್ಯಪಡೆಯನ್ನು ಬಲಪಡಿಸಲು ಪ್ರಯತ್ನಿಸುತ್ತೇವೆ
ಹೆಚ್ಚಿನ ಓದಿಗೆ

ಆರೋಗ್ಯ ಅನುದಾನಗಳು

ಆರೋಗ್ಯ ಅನುದಾನಗಳು

ನಾವು ನಮ್ಮ ಸಹವರ್ತಿ ಸಂಸ್ಥೆಗಳ ಕೆಲಸವನ್ನು ಅನುದಾನಗಳ ಮೂಲಕ ಬೆಂಬಲಿಸುತ್ತೇವೆ
ಹೆಚ್ಚಿನ ಓದಿಗೆ

ಆರೋಗ್ಯ ಸಂಶೋಧನೆ

ಆರೋಗ್ಯ ಸಂಶೋಧನೆ

ಸಾರ್ವಜನಿಕ ಆರೋಗ್ಯದ ಕುರಿತಾದ ನಮ್ಮ ಸಂಶೋಧನೆಗಳು, ಸಾರ್ವಜಿನಿಕ ಸೌಲಭ್ಯಗಳಿಂದ ವಂಚಿತರಾದ ಸಮುದಾಯಗಳ ವಾಸ್ತವವನ್ನು ಪರಿಚಯಿಸುತ್ತವೆ
ಹೆಚ್ಚಿನ ಓದಿಗೆ

ಆರೋಗ್ಯ ಫೆಲೋಶಿಪ್‌ಗಳು

ಆರೋಗ್ಯ ಫೆಲೋಶಿಪ್‌ಗಳು

ನಾವು ಯುವ ವೈದ್ಯಕೀಯ ವೃತ್ತಿಪರರಿಗೆ ಸೂಕ್ತ ಸೌಲಭ್ಯಗಳಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ನೇರವಾಗಿ ಕೆಲಸ ಮಾಡುವ ಅನುಭವವನ್ನು ನೀಡುತ್ತೇವೆ
ಹೆಚ್ಚಿನ ಓದಿಗೆ

ಪೌಷ್ಟಿಕತೆ

ಪೌಷ್ಟಿಕತೆ

ನಾವು ಭಾರತದಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇರುವ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳಿಗೆ ಸುರಕ್ಷಿತ ವಾತಾವರಣ, ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆಗಳನ್ನು ನೀಡುತ್ತೇವೆ
ಹೆಚ್ಚಿನ ಓದಿಗೆ

ದಿ ಹೆಲ್ತ್ ವರ್ಕರ್

ದಿ ಹೆಲ್ತ್ ವರ್ಕರ್

ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ತಳಮಟ್ಟದ ಕಥನಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳಲು ಇರುವ ಒಂದು ವೇದಿಕೆ
ಹೆಚ್ಚಿನ ಓದಿಗೆ

ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಗಳು

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಸಮುದಾಯ ಆರೋಗ್ಯ ಸೇವೆಗಳನ್ನು ಸುಧಾರಿಸುವಲ್ಲಿ ನಿಮಗೆ ತೀವ್ರ ಆಸಕ್ತಿಯಿದ್ದರೆ, ನಿಮ್ಮ ಬಗ್ಗೆ ಹೆಚ್ಚು ತಿಳಿಯಲು ಉತ್ಸುಕರಾಗಿದ್ದೇವೆ. ಬನ್ನಿ, ನಮ್ಮೊಂದಿಗೆ ಕೈಜೋಡಿಸಿ!

ಆರೋಗ್ಯ ಅನುದಾನಗಳು

ಭಾರತದ ತಲುಪಲು ಅತ್ಯಂತ ದುಸ್ತರವಾದ ಪ್ರದೇಶಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ನಾವು ನೆರವು ನೀಡುತ್ತೇವೆ. ಅನುದಾನಕ್ಕಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.