ಇತಿಹಾಸ ಹಾಗೂ ಕಾಲಾನುಕ್ರಮ ಬೆಳವಣಿಗೆಗಳು

Who we are

ನಮ್ಮ ಇತಿಹಾಸ

ನಮ್ಮ ಸಂಸ್ಥೆಯನ್ನು ಔಪಚಾರಿಕವಾಗಿ ಮಾರ್ಚ್ 9ನೇ ತಾರೀಕು 2001 ರಲ್ಲಿ (1956 ರ ಇಂಡಿಯನ್ ಕಂಪನಿ ಆ್ಯಕ್ಟ್ ನ 25ನೇ ಕಲಮಿನ ಅಡಿಯಲ್ಲಿ) ಸ್ಥಾಪಿಸಲಾಯಿತು. ಅಂದಿನಿಂದ ಜನವರಿ 2023 ರವರೆಗೂ ಶ್ರೀಯುತ ಅಜೀಂ ಪ್ರೇಮ್‌ಜಿ ತಮ್ಮ ಸಂಪತ್ತಿನ ಒಂದು ಗಣನೀಯವಾದ ಭಾಗವನ್ನು, ಅಂದರೆ ಸುಮಾರು 2,40,000 ಕೋಟಿ ರೂಪಾಯಿ (29 ಬಿಲಿಯನ್ ಅಮೆರಿಕನ್ ಡಾಲರ್) ಮೌಲ್ಯದ ಹಣವನ್ನು ಲೋಕೋಪಕಾರಿ ದತ್ತಿನಿಧಿಯನ್ನು ಸೃಷ್ಟಿಸಲು ಕೊಡುಗೆ ನೀಡಿದ್ದಾರೆ. ಈ ದತ್ತಿನಿಧಿಯು, ಸಂಸ್ಥೆಯ ಹಲವಾರು ಉಪಕ್ರಮ(ಮುಂದೊಡಗು)ಗಳಿಗೆ ನೆರವು ನೀಡುವ ಆರ್ಥಿಕ ಮೂಲಧನವಾಗಿ ಕೆಲಸ ಮಾಡುತ್ತಿದೆ.

ಅಜೀಂ ಪ್ರೇಮ್‌ಜಿ ಹಾಗೂ ನಮ್ಮ ಸಂಸ್ಥೆಯ ಸ್ಥಾಪಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ(ಸಿಇಒ) ದಿಲೀಪ್ ರಂಜೇಕರ್ ಅವರ ಮಧ್ಯದ ಸುಧೀರ್ಘವಾದ ಚರ್ಚೆಗಳು ನಮ್ಮ ಸಂಸ್ಥೆಯ ಹುಟ್ಟಿಗೆ ಕಾರಣವಾದದ್ದನ್ನು ಗುರುತಿಸಬಹುದು. ಈ ಮಾತುಕತೆಗಳು ಒಂದು ಶ್ವೇತಪತ್ರವನ್ನು ತಯಾರು ಮಾಡುವಲ್ಲಿ ಕೊನೆಗೊಂಡಿದ್ದು, ಅದು ಸಂಸ್ಥೆಯ ಗುರಿಯನ್ನು ರೂಪಿಸಲು ತಳಹದಿಯನ್ನು ಹಾಕಿತು. ಅಭಿವೃದ್ಧಿಗೆ ಸಂಬಂಧಿಸಿದಂತಹ ಹಲವಾರು ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ, ಪ್ರಾಥಮಿಕ ಶಿಕ್ಷಣವು ಸಂಸ್ಥೆಯ ಪ್ರಯತ್ನಗಳ ಕೇಂದ್ರ ವಿಷಯವಾಗಿ ಹೊರಹೊಮ್ಮಿತು. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳನ್ನು ತೊಡೆದು ಹಾಕುವಲ್ಲಿ, ದೂರಗಾಮಿ ಪರಿಣಾಮಗಳನ್ನು ಹೊಂದಿರುವ ಶಿಕ್ಷಣವು ಒಂದು ಪ್ರಮುಖವಾದ ಸವಾಲು ಎಂಬುದನ್ನು ನಾವು ಗುರುತಿಸುತ್ತೇವೆ. ಅಲ್ಲದೆ ಶಿಕ್ಷಣ ಕ್ಷೇತ್ರವು ನಮ್ಮ ಪ್ರಯಾಣದ ಹಾದಿಯಾಗಿ ಮುಂದುವರೆದಿದೆ.

historyandtimeline

ಪ್ರಾರಂಭದಿಂದಲೂ ಸಹ ನಾವು ನಮ್ಮ ಉದ್ದೇಶವನ್ನು ತಲುಪಲು ಸರ್ಕಾರದ ಉಪಕ್ರಮಗಳೊಂದಿಗೆ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಪರಿಣಾಮಕಾರಿಯಾದ, ಹಾಗೂ ವ್ಯಾಪಕ ನೆಲೆಯಲ್ಲಿ ಅನುಷ್ಠಾನಗೊಳಿಸಬಹುದಾದ ಹಾಗೂ ಪುನರಾವರ್ತಿಸಬಹುದಾದ ಬದಲಾವಣೆಯ ಮಾದರಿಗಳನ್ನು ಪರಿಚಯಿಸುವ ಮೂಲಕ ನಾವು ಇಂದಿನವರೆಗೂ ಸರ್ಕಾರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಿದ್ದೇವೆ ಹಾಗೂ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರುತ್ತಿದ್ದೇವೆ.

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಕರಿಗಾಗಿ ಉತ್ತಮ ಗುಣಮಟ್ಟದ ಶಿಕ್ಷಕರ ಶಿಕ್ಷಣಕ್ಕೂ ಸಹ ನಾವು ಬೆಲೆ ಕೊಡುತ್ತೇವೆ. ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯ ಒಳಗಡೆಯೇ ಹಲವಾರು ಕಾರ್ಯಕ್ರಮಗಳು ಹಾಗೂ ಮಧ್ಯಪ್ರವೇಶಗಳ ಮೂಲಕ, ನಾವು ಶಿಕ್ಷಕರು ಹಾಗೂ ಬೋಧನೆಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ, ಅವರು ತಮ್ಮ ಜ್ಞಾನ ಹಾಗೂ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳುವ ಹಾಗೂ ವಿಸ್ತರಿಸಿಕೊಳ್ಳುವ ಪ್ರಯತ್ನಕ್ಕೆ ನಮ್ಮ ಬೆಂಬಲವನ್ನು ಮುಂದುವರೆಸುತ್ತಿದ್ದೇವೆ.

ಕಾಲಾನುಕ್ರಮ ಬೆಳವಣಿಗೆಗಳು

2023

ಭೋಪಾಲ್‌ನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ

AzimPremjiUniversityBhopal ಭೋಪಾಲ್‌ನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವನ್ನು 2023ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳು ಹಾಗೂ ಡಿಪ್ಲೊಮಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಹೆಚ್ಚಿನ ಓದಿಗಾಗಿ
2022

ಆರೋಗ್ಯ ಹಾಗೂ ಜೀವನೋಪಾಯ ನಿರ್ವಹಣಾ ಕ್ಷೇತ್ರಗಳಿಗೆ ವಿಸ್ತರಣೆ

Expansion into Health and Livelihoods ಭೋಪಾಲ್‌ನಲ್ಲಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸ್ನಾತಕೋತ್ತರ ಕಾರ್ಯಕ್ರಮವನ್ನು (ಎಮ್‌ ಪಿ ಎಚ್) ಆರಂಭಿಸಿರುವುದರ ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸವನ್ನು ಪ್ರಾರಂಭಿಸಿದ್ದೇವೆ. ದುರ್ಬಲ ಸಮುದಾಯಗಳಿಗೆ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡಲು ಆಸ್ಪತ್ರೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ (ಎನ್ ಜಿ ಒ) ಜೊತೆಗೆ ಕೆಲಸ ಮಾಡಲು ನಾವು ಬಯಸುತ್ತೇವೆ.
2020

ಕೋವಿಡ್ -19ಕ್ಕೆ ನಮ್ಮ ಪ್ರತಿಕ್ರಿಯೆ

COVID19responseಭಾರತದಲ್ಲಿ ಕೋವಿಡ್ -19ರ ಸ್ಫೋಟದಿಂದಾಗಿ ಉಂಟಾದ ಆರೋಗ್ಯ ಹಾಗೂ ಮಾನವತೆಯ ತೀವ್ರವಾದ ಬಿಕ್ಕಟ್ಟಿನ ಸಂದರ್ಭದಲ್ಲಿ, ಈ ಸಾಂಕ್ರಾಮಿಕ ಪಿಡುಗಿನ ಪರಿಣಾಮಗಳನ್ನು ಎದುರಿಸಲು ನಾಗರಿಕ ಸಮಾಜಕ್ಕೆ ನೆರವಾಗುವ ಉದ್ದೇಶದಿಂದ ಕಾರ್ಯಪ್ರವೃತ್ತರಾದೆವು.
2014

ಅನುದಾನಗಳು

ಅನುದಾನಗಳುಚಿತ್ರ ಕೃಪೆ – ಪುರುಷೋತ್ತಮ್‌ ಠಾಕೂರ್‌
ಲಾಭೋದ್ದೇಶರಹಿತ ಹಾಗೂ ನಾಗರಿಕ ಸಮಾಜದ ಸಂಸ್ಥೆಗಳಿಗೆ ನಾವು ನೀಡುತ್ತಿರುವ ಆರ್ಥಿಕ ಅನುದಾನಗಳು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವುಗಳಿಗೆ ನೆರವು ನೀಡುತ್ತಿವೆ. ದುರ್ಬಲರು ಹಾಗೂ ಅಂಚಿಗೆ ತಳ್ಳಲ್ಪಟ್ಟವರ ಜೀವನವನ್ನು ಸುಧಾರಿಸುವ ನಮ್ಮ ಧ್ಯೇಯವನ್ನು ಇದು ದೃಢೀಕರಿಸುತ್ತದೆ. ಪ್ರಸ್ತುತ, ನಾವು ಎಂಟು ನೂರಕ್ಕೂ ಹೆಚ್ಚು ಇಂತಹ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದೇವೆ. ಹೆಚ್ಚಿನ ಓದಿಗಾಗಿ
2012

ಅಜೀಂ ಪ್ರೇಮ್‌ಜಿ ಶಾಲೆಗಳು

AzimPremjiSchoolsಮೊದಲನೇ ಅಜೀಂ ಪ್ರೇಮ್‌ಜಿ ಶಾಲೆಯನ್ನು 2012ರಲ್ಲಿ ಪ್ರಾರಂಭಿಸಲಾಯಿತು. ಇದು ದೇಶದಲ್ಲಿ ಕಿಂಡರ್ ಗಾರ್ಟನ್ ಇಂದ - 12ನೇ ತರಗತಿವರೆಗಿನ ಶಿಕ್ಷಣದ ಗುಣಮಟ್ಟದ ನಮ್ಮ ಅಭಿವ್ಯಕ್ತಿಯಾಗಿದೆ. ಈಗ ನಾವು ನಾಲ್ಕು ರಾಜ್ಯಗಳಲ್ಲಿ ಇಂತಹ ಒಂಬತ್ತು ಶಾಲೆಗಳನ್ನು ನಡೆಸುತ್ತಿದ್ದೇವೆ. ಅವು ಮಕ್ಕಳಿಗೆ ಸುರಕ್ಷಿತವಾದ, ಒಳಗೊಳ್ಳುವ ಹಾಗೂ ಸಮೃದ್ಧಮಯವಾದ ತಾಣಗಳಾಗಿವೆ. ಹೆಚ್ಚಿನ ಓದಿಗಾಗಿ
2010

ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ

AzimPremjiSchoolsಶಿಕ್ಷಣ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅರ್ಹತೆಯುಳ್ಳ, ಅಗತ್ಯ ಜ್ಞಾನ ಹೊಂದಿದ ವೃತ್ತಿಪರರನ್ನು ಪೋಷಿಸುವ ಹಾಗೂ ತರಬೇತಿ ನೀಡುವ ತಾಣವಾಗಿ, 2010ರಲ್ಲಿ ನಮ್ಮ ಮೊದಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಹೆಚ್ಚಿನ ಓದಿಗಾಗಿ

ಕ್ಷೇತ್ರ ಸಂಸ್ಥೆಗಳು​

FieldInstitutesಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವತ್ತ ನಮ್ಮ ಕ್ಷೇತ್ರ ಕಾರ್ಯವು ಗಮನಹರಿಸುತ್ತದೆ. ಈ ಪ್ರಯತ್ನದಲ್ಲಿ ದೇಶದ ಹೆಚ್ಚು ಅವಕಾಶವಂಚಿತ ಪ್ರದೇಶಗಳಿಗೆ ಒತ್ತನ್ನು ನೀಡಲಾಗುತ್ತದೆ.ಹೆಚ್ಚಿನ ಓದಿಗಾಗಿ
2001-2009

ಶಾಲಾ ಶಿಕ್ಷಣದಲ್ಲಿ ಕಾರ್ಯಕ್ರಮಗಳ ಮೂಲಕ ಮಧ್ಯಪ್ರವೇಶ

ProgrammaticInterventions

ಶಾಲೆಗಳಿಗೆ ಮಕ್ಕಳ ಪ್ರವೇಶಾತಿ, ನೋಂದಣಿ ಹಾಗೂ ಶಾಲೆಗಳಲ್ಲಿ ಮಕ್ಕಳು ಉಳಿದುಕೊಳ್ಳುವುದನ್ನು ವಿಸ್ತರಿಸುವುದು ಹಾಗೂ ಕಾರ್ಯಕ್ರಮಗಳ ಮೂಲಕ ಮಧ್ಯಪ್ರವೇಶಗಳನ್ನು ಮಾಡುತ್ತಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಂಸ್ಥೆಯು ತೊಡಗಿಕೊಂಡಿತು. ಹೆಚ್ಚಿನ ಓದಿಗಾಗಿ

2001

ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಔಪಚಾರಿಕ ಸ್ಥಾಪನೆ

FormalLaunchದೇಶದ ಅಭಿವೃದ್ಧಿಗೆ ಗಣನೀಯ ಮತ್ತು ದೀರ್ಘಕಾಲೀನ ಕೊಡುಗೆ ನೀಡುವ ಕಾಣ್ಕೆ ಹಾಗೂ ಧ್ಯೇಯದೊಂದಿಗೆ 2001ರಲ್ಲಿ ಅಜೀಂ ಪ್ರೇಮ್‌ಜಿ ಅವರು ಫೌಂಡೇಷನ್‌ ಅನ್ನು ಹುಟ್ಟು ಹಾಕಿದರು.
2024

Launch of Azim Premji Scholarship

An initiative to support girl students in their pursuit of college education.Know more

Partnership with CMC Vellore (Health)

Partnership with CMC Vellore

Christian Medical College Vellore, in partnership with Azim Premji Foundation, will set up a new medical college and a teaching hospital on its Chittoor campus to offer value-based healthcare and medical education, primarily for the disadvantaged.

Know more

Partnership with Karnataka government (Health)

Azim Premji Foundation entered a Memorandum of Understanding (MoU) with the Government of Karnataka on 20 July 2024 to support the nutritional enrichment of the mid-day meal programme in government and government-aided schools for three years.Know more
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.