ಸೂಚನೆಗಳು ಮತ್ತು ಎಚ್ಚರಿಕೆಗಳು

noticeandAlerts

ಆನ್ಲೈನ್‌ ಹಗರಣಗಳು/ ವಂಚನೆಯ ಉದ್ದೇಶದ ಮೇಲ್‌ ಗಳ ಕುರಿತು ಎಚ್ಚರಿಕೆ

ಅಜೀಂ ಪ್ರೇಮ್‌ ಜಿ ಫೌಂಡೇಶನ್‌, ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯ, ಫಿಲಾಂತ್ರೊಪಿ (ಸಾಮೂಹಿಕವಾಗಿ ʻʻಫೌಂಡೇಶನ್ʼʼ ಎಂದು ಕರೆಯಲಾಗುತ್ತದೆ) ಅಥವಾ ನಮ್ಮ ಯಾವುದೇ ಪದಾಧಿಕಾರಿಗಳು ಅಥವಾ ಸಂಸ್ಥಾಪಕರು ಎಂದು ಹೇಳಿಕೊಂಡು ವಂಚನೆಯ ಉದ್ದೇಶದಿಂದ ನಡೆಯಬಹುದಾದ ಅನೇಕ ಸಂಭಾವ್ಯ ಹಗರಣಗಳು ನಮ್ಮ ಗಮನಕ್ಕೆ ಬಂದಿವೆ.

ಫೌಂಡೇಶನ್‌ ಅಥವಾ ಇದರ ಯಾವುದೇ ಪದಾಧಿಕಾರಿಗಳು ಅಥವಾ ಸಂಸ್ಥಾಪಕರು ಅಥವಾ ಇವರೊಂದಿಗೆ ಗುರುತಿಸಿಕೊಂಡವರು ಎಂದು ಹೇಳಿಕೊಂಡು ವೆಬ್‌, ಇಮೇಲ್‌, ಅಂಚೆ ಪತ್ರ, ಫ್ಯಾಕ್ಸ್‌ ಮತ್ತು ದೂರವಾಣಿ ಕರೆಯ ಮೂಲಕ ವಿವಿಧ ರೀತಿಯ ಮೋಸದ ಪತ್ರ ವ್ಯವಹಾರ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಈ ಇಮೇಲ್‌ ಗಳು ಅಥವಾ ಇತರ ಪತ್ರ ವ್ಯವಹಾರಗಳು, ಫೌಂಡೇಶನ್‌ ನ ಲೋಗೊ, ಛಾಯಾಚಿತ್ರಗಳು, ಲಿಂಕ್‌ ಗಳು, ಹಿರಿಯ ಅಧಿಕಾರಿಗಳ ಹೆಸರುಗಳು ಅಥವಾ ಫೌಂಡೇಶನ್‌ ನ ಅಧಿಕೃತ ವೆಬ್‌ ಸೈಟ್‌ ನಿಂದ ನೇರವಾಗಿ ತೆಗೆದುಕೊಳ್ಳಲಾದ ಮಾಹಿತಿ ಮತ್ತು ಹಣ ಅಥವಾ ಸೂಕ್ಷ್ಮ ವೈಯಕ್ತಿಕ ಮಾಹಿತಿಗಾಗಿ ಸಲ್ಲಿಸಿದ ವಿನಂತಿ ಇತ್ಯಾದಿಗಳನ್ನು ಒಳಗೊಂಡಿರುತ್ತವೆ.

ಅಂತಹ ಚಟುವಟಿಕೆಗಳ ಕೆಲವು ಉದಾಹರಣೆಗಳು ಇಲ್ಲಿವೆ:

  • ಫೌಂಡೇಶನ್‌ ವತಿಯಿಂದ ದೇಣಿಗೆಗಾಗಿ ಬೇಡಿಕೆ ಇಡುವುದು
  • ಫೌಂಡೇಶನ್‌ ವತಿಯಿಂದ ನಿರ್ದಿಷ್ಟ ವ್ಯಕ್ತಿಗೆ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಸುಳ್ಳು ಹೇಳಿ, ಶುಲ್ಕವನ್ನು ಪಾವತಿಸಿದರೆ ಅಥವಾ ನಿರ್ದಿಷ್ಟ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸಿದರೆ ಮಾತ್ರವೇ ಅನು ದಾನವನ್ನುನೀಡಲಾಗುತ್ತದೆ ಎಂದು ಹೇಳುವುದು
  • ಫೌಂಡೇಶನ್‌ ನ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಣ ನೀಡಬೇಕೆಂದು ಜನರಲ್ಲಿ ಬೇಡಿಕೆಯನ್ನಿಡುವುದು

ಫೌಂಡೇಶನ್‌ ಅಥವಾ ಫೌಂಡೇಶನ್‌ ನ ಉದ್ಯೋಗಿಗಳು, ದೇಣಿಗೆಯನ್ನು ಸ್ವೀಕರಿಸುವವರು ಅಥವಾ ಸಹಯೋಗಿ ಸಂಸ್ಥೆಗಳು ಈ ಕೆಳಗೆ

  • ತಿಳಿಸಿದ ಚಟುವಟಿಕೆಗಳನ್ನು ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸಲಾಗಿದೆ:
  • ಅನುದಾನದ ಅವಕಾಶಗಳನ್ನು ಒದಗಿಸುತ್ತೇವೆ ಎಂದು ಹೇಳಿ ಜನರಲ್ಲಿ ಪ್ರಸ್ತಾಪವನ್ನಿಡುವುದ
  • ಅನುದಾನವನ್ನು ನೀಡುವಾಗ ಯಾವುದೇ ರೀತಿಯ ಆಡಳಿತಾತ್ಮಕ, ಸದಸ್ಯತ್ವ, ನಿರ್ವಹಣೆ ಅಥವಾ ಇತರ ಶುಲ್ಕಗಳನ್ನು ವಿಧಿಸುವುದು
  • ಇಮೇಲ್‌, ಅಂಚೆ ಪತ್ರ, ದೂರವಾಣಿ, ಫ್ಯಾಕ್ಸ್‌, ಅಥವಾ ನೇವಾಗಿ ಯಾವುದೇ ರೀತಿಯ ಬಹುಮಾನಗಳನ್ನು
  • ನೀಡುವುದು ಸಮ್ಮೇಳನಗಳು ಅಥವಾ ಶೃಂಗಸಭೆಗಳಿಗಾಗಿ ನೋಂದಣಿ ಶುಲ್ಕಗಳನ್ನು
  • ವಿನಂತಿಸುವುದು ಹೂಡಿಕೆ ಅವಕಾಶಗಳಿಗಾಗಿ ವ್ಯಕ್ತಿಗಳು ಅಥವಾ ಇತರರಿಗೆ ಮನವಿ ಮಾಡುವುದು ಯಾವುದೇ ಸಂದರ್ಭದಲ್ಲಿ ದೇಣಿಗೆಯನ್ನು
  • ವಿನಂತಿಸುವುದು ಬ್ಯಾಂಕ್‌ ಖಾತೆ ಅಥವಾ ಇತರ ಖಾಸಗಿ ವಿಷಯದ ಕುರಿತು ಮಾಹಿತಿಯನ್ನು ವಿನಂತಿಸುವುದು

ಒಂದು ವೇಳೆ ನಿಮ್ಮೊಂದಿಗೆ ಯಾರಾದರೂ ಇಂತಹ ಯಾವುದೇ ಪತ್ರ ವ್ಯವಹಾರವನ್ನು ನಡೆಸಿದರೆ ಅಥವಾ ಅಂತಹ ವಂಚಕರು ನಿಮ್ಮನ್ನು ಸಂಪರ್ಕಿಸಿದರೆ ಅಥವಾ ಅನಧಿಕೃತ ಇಮೇಲ್‌ ವಿಳಾಸಗಳು ಮತ್ತು ಡೊಮೇನ್‌ ಹೆಸರುಗಳಿಂದ ನಡೆಸಲಾದ ಅಂತಹ ವಂಚನೆಗಳು ನಿಮ್ಮ ಅರಿವಿಗೆ ಬಂದರೆ, ದಯವಿಟ್ಟು [email protected] ಇಮೇಲ್‌ ವಿಳಾಸಕ್ಕೆ ಸಂಪರ್ಕಿಸಿರಿ.

ಇದು, ಸಂಭಾವ್ಯ ವಂಚನೆಯ ಕುರಿತು ಫೌಂಡೇಶನ್‌ ಅನ್ನು ಎಚ್ಚರಿಸುತ್ತದೆ ಹಾಗೂ ತಕ್ಕುದಾದ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಯಾವುದೇ ಅನಧಿಕೃತ ಮೇಲ್‌ ವಿಳಾಸ ಅಥವಾ ಫೌಂಡೇಶನ್‌ ನ ಅಧಿಕೃತ ಪ್ರತಿನಿಧಿ ಎಂದು ಹೇಳಿಕೊಳ್ಳುವ ಯಾವುದೇ ವ್ಯಕ್ತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಪ್ರತಿಕ್ರಿಯೆ ನೀಡಬಾರದೆಂದು ನಾವು ಈ ಮೂಲಕ ನಿಮ್ಮನ್ನು ವಿನಂತಿಸುತ್ತೇವೆ.

ಫೌಂಡೇಶನ್‌ ನ ಹೆಸರಿನ ಕಾನೂನುಬಾಹಿರ ಅಥವಾ ದುರುದ್ದೇಶಪೂರಿತ ಬಳಕೆಯ ಕಾರಣ ಉಂಟಾಗುವ ಹಾನಿಗಳಿಗೆ ಫೌಂಡೇಶನ್‌ ಯಾವುದೇ ರೀತಿಯ ಜವಾಬ್ದಾರಿಯನ್ನು ವಹಿಸುವುದಿಲ್ಲ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.