ಫೌಂಡೇಷನ್‌ನಿಂದ ಅನುದಾನವನ್ನು ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಲು ಆಸಕ್ತಿ ತೋರಿದ ನಿಮಗೆ ಧನ್ಯವಾದಗಳು
ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ದಯವಿಟ್ಟು ಕೆಳಗೆ ನೀಡಿರುವ ಮಾಹಿತಿಯನ್ನು ಓದಿರಿ. ನಮ್ಮ ಸಮಾಜದ ಅತ್ಯಂತ ದುರ್ಬಲ ಹಿನ್ನೆಲೆಯುಳ್ಳ ಜನರೊಂದಿಗೆ ಕೆಲಸ ಮಾಡುತ್ತಿರುವ ಲಾಭೋದ್ದೇಶರಹಿತ ಸಂಸ್ಥೆಗಳಿಗೆ ನಾವು ಬಹು-ವಾರ್ಷಿಕ ಅನುದಾನಗಳನ್ನು ನೀಡುತ್ತೇವೆ.
ಅನುದಾನಕ್ಕಾಗಿ ನಾವು ಅನುಸರಿಸುವ ವಿಧಾನ ಮತ್ತು ಕ್ಷೇತ್ರಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಲು ಇಲ್ಲಿ ಇಲ್ಲಿ ಕ್ಲಿಕ್
ಅರ್ಜಿ ಸಲ್ಲಿಸುವ ಬಗೆ
- ನಿಮ್ಮ ಸಂಸ್ಥೆಯ ಕುರಿತ ಸಂಕ್ಷಿಪ್ತ ವಿವರ ಮತ್ತು ಸಂಪರ್ಕ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಾಗಿ ದಯವಿಟ್ಟು NGO Registration Form ಅನ್ನು ಬಳಸಿರಿ.
- ಒಂದು ವೇಳೆ ನಿಮ್ಮ ಸಂಸ್ಥೆಯ ವಿವರಗಳನ್ನು ಸರಿಯಾಗಿ ನಮೂದಿಸಿದ್ದರೆ ಹಾಗೂ ನಿಮ್ಮ ಇಮೇಲ್ ವಿಳಾಸವು ಸರಿಯಾಗಿದ್ದರೆ, ಮೂರು ಕೆಲಸದ ದಿನಗಳೊಳಗಾಗಿ ನಮ್ಮ ಅನುದಾನ ನಿರ್ವಹಣೆ ಪೋರ್ಟಲ್‌ನಿಂದ ಲಾಗಿನ್ ವಿವರಗಳನ್ನು ನೀವು ಪಡೆಯಲಿದ್ದೀರಿ.

ಚಿತ್ರ ಕ್ರೆಡಿಟ್: ಪಾಲುದಾರ ಸಂಸ್ಥೆ, ಅಜೀಂ ಪ್ರೇಮ್‌ಜಿ ಫೌಂಡೇಶನ್
- ಈ ಪ್ರಕ್ರಿಯೆಯ ಕುರಿತು ನಿಮಗೆ ಯಾವುದೇ ನೆರವು ಬೇಕಾದಲ್ಲಿ ದಯವಿಟ್ಟು [email protected] ಗೆ ಬರೆಯಿರಿ.
- ನಮ್ಮ ಅನುದಾನ ನಿರ್ವಹಣೆ ಪೋರ್ಟಲ್‌ನಲ್ಲಿ ಒಮ್ಮೆ ನೀವು ಲಾಗಿನ್ ಆದ ನಂತರ, ನಿಮ್ಮ ಸಂಸ್ಥೆಯ ವಿವರಗಳನ್ನು ನೀವು ನೋಡಲು ಮತ್ತು ತಿದ್ದಲು ಸಾಧ್ಯ. ನಿಮ್ಮ ಅನುದಾನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ನೀವು ನೋಡಿ ಅದನ್ನು ನಿರ್ವಹಿಸಬಹುದು.
ಗಮನಿಸಿ: ಎನ್.ಜಿ.ಒ ನೋಂದಣಿ ನಮೂನೆಯಲ್ಲಿ ಅತ್ಯುತ್ತಮ ಸೈಟ್ ಅನುಭವವನ್ನು ಪಡೆಯುವುದಕ್ಕಾಗಿ ಲ್ಯಾಪ್ಟಾಪ್ ಅಥವಾ ಡೆಸ್ಕ್‌ಟಾಪ್ ಬ್ರೌಸರ್‌ಗಳನ್ನು ಬಳಸುವುದು ಒಳಿತು ಎಂಬುದು ನಮ್ಮ ಸಲಹೆ.
ಎಚ್ಚರಿಕೆ: ಹಣ ಅಥವಾ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಕೇಳುವ ವಂಚನೆಯ ಈಮೇಲ್‌ಗಳು ಮತ್ತು ಸಂದೇಶಗಳ ಮೇಲೆ ಎಚ್ಚರವಿರಲಿ. ನಿಮಗೆ ಅಂತಹ ಸಂದೇಶ ಬಂದಲ್ಲಿ, ಅದನ್ನು ಕೂಡಲೇ [email protected] ಗೆ ಈಮೇಲ್ ಮಾಡಿ.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ.
