ಕ್ಷೇತ್ರ ಸಂಸ್ಥೆಗಳು,ಲೋಕೋಪಕಾರಿ ಘಟಕ ಹಾಗೂ ವಿಶ್ವವಿದ್ಯಾಲಯಗಳು: ಇವು,ಸಮನ್ವಯದಿಂದ ಒಟ್ಟಿಗೆ ಕೆಲಸ ಮಾಡುತ್ತಾ, ನಮ್ಮನ್ನು ನಮ್ಮ ಧ್ಯೇಯದತ್ತ ಮುನ್ನಡೆಸುತ್ತಿರುವ ಮೂರು ಕಾರ್ಯಾಚರಣೆಯ ಘಟಕಗಳು
ಪ್ರಾರಂಭದಿಂದಲೂ ಶಿಕ್ಷಣವು ನಮ್ಮ ಕೆಲಸಗಳ ಮುಖ್ಯ ಕೇಂದ್ರಬಿಂದುವಾಗಿದೆ. ಭಾರತದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಶಾಲೆಗಳಲ್ಲಿ ಕಾರ್ಯಕ್ರಮಾತ್ಮಕ ಮಧ್ಯ ಪ್ರವೇಶದ ಮೂಲಕ ನಾವು ನಮ್ಮ ಕೆಲಸಗಳನ್ನು ಪ್ರಾರಂಭಿಸಿದೆವು. ಈ ಶಾಲೆಗಳಲ್ಲಿ ಇರುವ ಲಕ್ಷಾಂತರ ಮಕ್ಕಳ ಕಲಿಕೆಯನ್ನು ಉತ್ತಮಪಡಿಸುವ ಮತ್ತು ಪುಷ್ಟೀಕರಿಸುವ ಉದ್ದೇಶದೊಂದಿಗೆ ನಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆವು.
ಒಂದು ದಶಕದ ಕಾಲ ಶಾಲೆಗಳೊಂದಿಗೆ ಮಧ್ಯಪ್ರವೇಶಗಳ ಮೂಲಕ ಕೆಲಸ ಮಾಡಿದ ನಂತರ, ನಾವು ನಮ್ಮ ಕಾರ್ಯವಿಧಾನವನ್ನು ಹೆಚ್ಚು ಸಾಂಸ್ಥಿಕ ಸ್ವರೂಪಕ್ಕೆ ಬದಲಾಯಿಸಿಕೊಂಡೆವು. ನಮ್ಮ ಕ್ಷೇತ್ರ ಸಂಸ್ಥೆಗಳ ಸಂಪರ್ಕ ಜಾಲವು ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯ ಕ್ಷೇತ್ರಗಳಲ್ಲಿ, ತಳಸ್ತರದಲ್ಲಿ ವಿಸ್ತೃತವಾದ ಕೆಲಸವನ್ನು ಮಾಡುತ್ತಿವೆ.





ಬೆಂಗಳೂರು ಮತ್ತು ಭೂಪಾಲ್ ನಗರಗಳಲ್ಲಿ ಕ್ಯಾಂಪಸ್ ಗಳನ್ನು ಹೊಂದಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಹೊಸ ಸಾಮರ್ಥ್ಯಾಭಿವೃದ್ಧಿಯ ಮೂಲಕ ಸಾಮಾಜಿಕ ಕ್ಷೇತ್ರವನ್ನು ಬಲಪಡಿಸುವ ಫೌಂಡೇಷನ್‌ನ ಬದ್ಧತೆಯನ್ನು ಮುಂದುವರೆಸುತ್ತದೆ.
ಸಂಸ್ಥೆಯು ಶಿಕ್ಷಣ ಕ್ಷೇತ್ರವಲ್ಲದೆ ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಇತರ ವಿಷಯಾಧಾರಿತ ಕ್ಷೇತ್ರಗಳಲ್ಲಿ ನಡೆಯುವ ಕೆಲಸಗಳಿಗೂ ಸಹ ಬೆಂಬಲ ನೀಡುತ್ತದೆ. ಈ ಕಾರ್ಯವು ಲಾಭೋದ್ದೇಶರಹಿತ ಮತ್ತು ನಾಗರಿಕ ಸಮಾಜದ ಸಂಸ್ಥೆಗಳಿಗೆ ನಾವು ನೀಡುವ ಹಣಕಾಸು ಅನುದಾನದ ಮೂಲಕ ನಡೆಯುತ್ತದೆ.

ಕ್ಷೇತ್ರ ಸಂಸ್ಥೆಗಳು
ನಮ್ಮ ಕ್ಷೇತ್ರ ಸಂಸ್ಥೆಗಳು 6 ರಾಜ್ಯಗಳ 59 ಜಿಲ್ಲೆಗಳು. ಮಕ್ಕಳಿಗೆ ಸುರಕ್ಷಿತ, ಅರ್ಥಪೂರ್ಣ ಮತ್ತು ಸಂಪನ್ನ ಅನುಭವವನ್ನು ನೀಡಲು ನಾವು 4 ರಾಜ್ಯಗಳಲ್ಲಿ 10 ಶಾಲೆಗಳನ್ನು ನಡೆಸುತ್ತೇವೆ. ಶಾಲಾ ಶಿಕ್ಷಣದಲ್ಲಿ 20 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಕೆಲಸ ಮಾಡಿರುವ ನಾವು ಈಗ ನಮ್ಮ ಕಾರ್ಯಕ್ಷೇತ್ರವನ್ನು ಆರೋಗ್ಯ ಮತ್ತು ಜೀವನಾಧಾರ ಕ್ಷೇತ್ರಗಳಿಗೆ ವಿಸ್ತರಿಸುತ್ತಿದ್ದೇವೆ.

ಅನುದಾನಗಳು
ಲಾಭೋದ್ದೇಶರಹಿತ ಹಾಗೂ ನಾಗರಿಕ ಸಮಾಜದ ಸಂಸ್ಥೆಗಳಿಗೆ ನಾವು ನೀಡುತ್ತಿರುವ ಆರ್ಥಿಕ ಅನುದಾನಗಳು, ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡಲು ಅವುಗಳಿಗೆ ನೆರವು ನೀಡುತ್ತಿವೆ. ದುರ್ಬಲರು ಹಾಗೂ ಅಂಚಿಗೆ ತಳ್ಳಲ್ಪಟ್ಟವರ ಜೀವನವನ್ನು ಸುಧಾರಿಸುವ ನಮ್ಮ ಧ್ಯೇಯವನ್ನು ಇದು ದೃಢೀಕರಿಸುತ್ತದೆ. ಪ್ರಸ್ತುತ, ನಾವು ಇಂತಹ ಎಂಟು ನೂರಕ್ಕೂ ಹೆಚ್ಚು ಸಂಸ್ಥೆಗಳಿಗೆ ನೆರವು ನೀಡುತ್ತಿದ್ದೇವೆ.

ವಿಶ್ವವಿದ್ಯಾಲಯ
ಬೆಂಗಳೂರಿನಲ್ಲಿರುವ ನಮ್ಮ ವಿಶ್ವವಿದ್ಯಾಲಯ (2010ರಲ್ಲಿ ಸ್ಥಾಪನೆ) ಹಾಗೂ ಭೋಪಾಲ್ ನಲ್ಲಿನ ವಿಶ್ವವಿದ್ಯಾಲಯ (2023ರಲ್ಲಿ ಸ್ಥಾಪನೆ)ಗಳ ಮೂಲಕ ನಾವು ಸಾಮಾಜಿಕ ಕ್ಷೇತ್ರಕ್ಕೆ ಪೂರಕವಾದ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳಿಂದ 5,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವೀಧರರಾಗಿ ಹೊರಬಂದಿದ್ದಾರೆ.
