ಸಂಪನ್ಮೂಲಗಳು

Resources

ಅನೇಕ ವರ್ಷಗಳ ಕಾಲ ನಾವು ಪ್ರೀತಿಯಿಂದ ಸಂಗ್ರಹಿಸಿರುವ ಜ್ಞಾನ ಭಂಡಾರದ ಮೂಲಕ ನಾವು ಜ್ಞಾನವನ್ನು ಸಂರಕ್ಷಿಸಲು ಹಾಗೂ ಹಂಚಿಕೊಳ್ಳಲು ಬಯಸುತ್ತೇವೆ. ಭಾರತದಲ್ಲಿನ ಪಠ್ಯಪುಸ್ತಕಗಳಿಂದ ಹಿಡಿದು

ಭಾರತೀಯ ಭಾಷೆಗಳಿಗೆ ಅನುವಾದವಾಗಿರುವ ಶೈಕ್ಷಣಿಕ ಸಂಪನ್ಮೂಲಗಳು ಸೇರಿದಂತೆ  ಕಲಿಕೆಯ ನಮ್ಮ ನಿರಂತರ ಸಂಬಂಧವನ್ನು ಬಲಪಡಿಸುವಂತಹ ಸಂಪನ್ಮೂಲಗಳ ಅನನ್ಯವಾದ ಸಂಗ್ರಹ ನಮ್ಮಲಿದೆ.

resources
resources

ಶೈಕ್ಷಣಿಕ ಸಂಪನ್ಮೂಲಗಳ ಮೂಲಕ ಜ್ಞಾನ ಪ್ರಸರಣ ಮಾಡುವುದು ಗುಣಮಟ್ಟದ ಕಲಿಕೆ ಮತ್ತು ಬೋಧನೆಯು ಸುಲಭವಾಗಿ ನಿಲುಕುವಂತೆ ಮಾಡುವ ದಿಕ್ಕಿನಲ್ಲಿ ಒಂದು ನಿರ್ಣಾಯಕ ಹೆಜ್ಜೆ. ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಶೈಕ್ಷಣಿಕ ಅಧಿಕಾರಿಗಳು ಹೀಗೆ ಹಲವು ಗುಂಪುಗಳಿಗೆ ನೆರವಾಗುವಂತಹ ದಿಜಿಟಲ್‌ ಕಣಜಗಳು ಮತ್ತು ಭಂಡಾರಗಳನ್ನು ಕಟ್ಟುವ ಕೆಲಸದ ಹಿಂದಿರುವ ತತ್ತ್ವ.

handbooks

ಕೈಪಿಡಿಗಳು

ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ( ಎಫ್ಎಲ್ಎನ್ ) ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲು ಮಕ್ಕಳು ಮತ್ತು/ಅಥವಾ ಶಿಕ್ಷಕರ ಜೊತೆಯಲ್ಲಿ ಕೆಲಸ ಮಾಡುವವರಿಗಾಗಿ ಪ್ರಾಯೋಗಿಕ ಮಾರ್ಗದರ್ಶಿ ಕೈಪಿಡಿಗಳು.

English Language Teaching in Primary Classrooms
ಪ್ರಾಥಮಿಕ ಹಂತದ ತರಗತಿಗಳಲ್ಲಿ ಇಂಗ್ಲಿಷ್ ಭಾಷಾ ಬೋಧನೆ

ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸುವ ಶಿಕ್ಷಕರೊಂದಿಗೆ ಕೆಲಸ ಮಾಡಲು ನೀಲನಕ್ಷೆಯೊಂದನ್ನು ಒದಗಿಸುವ ಪ್ರಯತ್ನ ಈ ಕೈಪಿಡಿಯು.

Library

ಗ್ರಂಥಾಲಯ

ಗ್ರಂಥಪಾಲಕರು ಅತ್ಯಂತ ಶ್ರದ್ಧೆಯಿಂದ ಸಂಗ್ರಹಿಸಿರುವ ಕಲಿಕೆ ಮತ್ತು ಅಧ್ಯಯನದ ಆಕರ/ಪರಾಮರ್ಶನ ಸಾಮಗ್ರಿಗಳಿವೆ.ಈ ವಿಸ್ತಾರವಾದ ಸಂಗ್ರಹವು (ಪುಸ್ತಕಗಳು, ಪತ್ರಿಕೆಗಳು, ಮಾಹಿತಿ ಸಂಗ್ರಹಗಳು ಇತ್ಯಾದಿ) ಶೈಕ್ಷಣಿಕ ಶಿಸ್ತುಗಳ ನಿರ್ದಿಷ್ಟ ವಿಷಯಗಳ ಸಂಪನ್ಮೂಲಗಳನ್ನು ಒದಗಿಸುತ್ತವೆ. ನಮ್ಮ ಗ್ರಂಥಾಲಯವು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಸಂಗ್ರಹಾಗಾರವನ್ನೂ ಒಳಗೊಂಡಿದೆ: ಪುಸ್ತಕಗಳು, ಕಾಗದದ ದಾಖಲೆಗಳು, ಪದಾರ್ಥಗಳು, ಕ್ಷಣಿಕ ಉಪಯೋಗದ ವಸ್ತುಗಳು-(ephemera), ವ್ಯಕ್ತಿಗಳು ಹಾಗೂ ಸಂಸ್ಥೆಗಳು ದಾನ ಮಾಡಿರುವ ದೃಶ್ಯ-ಶ್ರಾವ್ಯ ಮತ್ತು ಡಿಜಿಟಲ್ ಸಾಮಗ್ರಿಗಳು ಇಲ್ಲಿ ಲಭ್ಯವಿವೆ.

publications

ಪ್ರಕಟಣೆಗಳು

ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ನಿಯತಕಾಲಿಕೆಗಳು, ತರಗತಿಯ ಬೋಧನೆ ಮತ್ತು ಕಲಿಕೆಗೆ ನೆರವಾಗುವಂತಹ ನಿರ್ದಿಷ್ಟ ವಿಷಯಗಳ ಮೇಲಿನ ಕೈಪಿಡಿಗಳು, ಹಾಗೂ ಯೂನಿವರ್ಸಿಟಿ ಮತ್ತು ಫೌಂಡೇಷನ್‌ಗೆ ಸೇರಿದ ಪ್ರಕಟಣೆಗಳ ಡಿಜಿಟಲ್‌ ಪ್ರತಿಗಳ ಭಂಡಾರ – ಇವುಗಳನ್ನು ಅನ್ವೇಷಿಸಿ.

anuvada_sampada

ಅನುವಾದ ಸಂಪದ

ಭಾರತದ ಭಾಷೆಗಳಿಗೆ ಅನುವಾದಗೊಂಡ ಉನ್ನತ ಶಿಕ್ಷಣಕ್ಕೆ ಅವಶ್ಯವಾದ ಸಂಪನ್ಮೂಲಗಳ ಒಂದು ಅನನ್ಯ ಭಂಡಾರವಿದು. ಸದ್ಯಕ್ಕೆ ಇಲ್ಲಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಂಪನ್ಮೂಲಗಳು ಲಭ್ಯವಿವೆ.

Researchreport

ಸಂಶೋಧನಾ ವರದಿಗಳು

ನಮ್ಮ ಸಂಶೋಧನಾ ಪ್ರಕಟಣೆಗಳ ಶೀರ್ಷಿಕೆಗಳು ನಾವು ಮಾಡುತ್ತಿರುವ ವಿಸ್ತಾರವಾದ ಕ್ಷೇತ್ರಕಾರ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಅಭಿವೃದ್ಧಿ, ಶಿಕ್ಷಣ, ಆಡಳಿತ ಮತ್ತು ಸಾರ್ವಜನಿಕ ನೀತಿಯಂತಹ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಮ್ಮ ಭಾಗೀದಾರರ ಗ್ರಹಿಕೆ ಮತ್ತು ಜ್ಞಾನಕ್ಕೆ ಕೊಡುಗೆಯನ್ನು ನೀಡುತ್ತವೆ.

ದ ಹೆಲ್ತ್‌ ವರ್ಕರ್‌

ಭಾರತದಾದ್ಯಂತದಿಂದ ಮುಂಚೂಣಿಯ ಕಥನಗಳು, ಒಳನೋಟಗಳು, ಮತ್ತು ದೃಷ್ಟಿಕೋನಗಳು

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.