ವಿದ್ಯಾರ್ಥಿನಿಯರು ಕಾಲೇಜು ಶಿಕ್ಷಣವನ್ನು ಮುಂದುವರಿಸಲು ನೆರವಾಗಲು ಒಂದು ಉಪಕ್ರಮ
ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್, ಭಾರತದ ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಸಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ಹೊಂದಿರುವ ಬದ್ಧತೆಯ ಒಂದು ಅಂಗವಾಗಿದೆ. ಈ ಉಪಕ್ರಮವು ಅವಕಾಶವಂಚಿತ ಹಿನ್ನೆಲೆಗಳುಳ್ಳ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹30,000 ಮೊತ್ತದ ಸ್ಕಾಲರ್‌ಶಿಪ್ ನೀಡುತ್ತದೆ. ಈ ವಿದ್ಯಾರ್ಥಿವೇತನವನ್ನು ಅವರ ಮೊದಲ ಪದವಿ ಅಥವಾ ಡಿಪ್ಲೊಮ ಕಾರ್ಯಕ್ರಮದ ಪೂರ್ಣ ಅವಧಿಗೆ ನೀಡಲಾಗುವುದು.
ಸ್ಕಾಲರ್‌ಶಿಪ್ ದೃಢೀಕರಣ ಮತ್ತು ಮೊದಲ ಸುತ್ತಿನಲ್ಲಿ (ಸೆಪ್ಟೆಂಬರ್ 2025) ಆಯ್ಕೆಯಾದ ಅಭ್ಯರ್ಥಿಗಳಿಗೆ ಹಣ ಪಾವತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಪೋರ್ಟಲ್‌ಗೆ ಲಾಗಿನ್ ಆಗಿ ನಿಮ್ಮ ಅರ್ಜಿ ಆಯ್ಕೆಯಾಗಿದೆಯೇ ಎಂದು ನೋಡಿ.
ನೀವು ಈಗ ನಿಮ್ಮ ಫೋನ್‌ನಿಂದ ನಮಗೆ ಸಹಾಯಕ್ಕಾಗಿ ಸಂಪರ್ಕಿಸಬಹುದು! 9019960536 ಗೆ WhatsApp ಮಾಡಿ (ಸೋಮ-ಶುಕ್ರ, ಬೆಳಗ್ಗೆ 9 ರಿಂದ 5 ಗಂಟೆಗೆ).
ಸ್ಕಾಲರ್‌ಶಿಪ್ ಗುಂಪು 2025ರ ಎರಡನೇ ಸುತ್ತಿಗೆ ಅರ್ಜಿ ಸಲ್ಲಿಸುವ ಸಮಯ ಮುಗಿದಿದೆ.
ಸ್ಕಾಲರ್‌ಶಿಪ್ ಗುಂಪು 2024ರ ಸ್ಕಾಲರ್‌ಶಿಪ್ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31 ಮಾರ್ಚ್ 2026ರವರೆಗೆ ವಿಸ್ತರಿಸಲಾಗಿದೆ.
ನಮ್ಮನ್ನು ಸಂಪರ್ಕಿಸಿ
ಅರ್ಹತೆ
ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು:
- 10 ಮತ್ತು 12ನೇ ಎರಡೂ ತರಗತಿಗಳನ್ನು ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಓದಿ, ಪಾಸಾಗಿರಬೇಕು.
- ಅರ್ಜಿ ಸಲ್ಲಿಸುವ ಸಮಯದಲ್ಲಿ, ಸರ್ಕಾರಿ ಅಥವಾ ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮ ಅಥವಾ ಡಿಪ್ಲೊಮಾ ಕೋರ್ಸಿನ (2 ರಿಂದ 5 ವರ್ಷಗಳ ಅವಧಿಯ ಕಾರ್ಯಕ್ರಮಗಳು) ಮೊದಲ ವರ್ಷಕ್ಕೆ (ಶೈಕ್ಷಣಿಕ ವರ್ಷ 2025–26) ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ಇದು ಅರ್ಜಿದಾರರ ಮೊದಲ ಪದವಿ ಅಥವಾ ಡಿಪ್ಲೊಮ ಆಗಿರಬೇಕು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು*
ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪುದುಚೇರಿ, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಮತ್ತು ಉತ್ತರಾಖಂಡ
ಸ್ಕಾಲರ್‌ಶಿಪ್ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು


- ಸೂಚನೆ: ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಯಾವುದೇ ಹಂತದಲ್ಲೂ ಫೌಂಡೇಷನ್ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಶುಲ್ಕದ ಹೆಸರಿನಲ್ಲಿ ವಂಚಿಸುವ ಜನರ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕೆಂದು ಕೋರಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಸಲ್ಲಿಸಬೇಕಾದ ದಾಖಲೆಗಳು
ನಿಮ್ಮ ಅರ್ಜಿಯನ್ನು ಪೂರ್ಣಗೊಳಿಸಲು, ಈ ಕೆಳಗಿನ ದಾಖಲೆಗಳನ್ನು ನಮ್ಮ ವೆಬ್‌ಸೈಟ್ ಮೂಲಕ ಸಲ್ಲಿಸಿ. ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಶುಲ್ಕವಿರುವುದಿಲ್ಲ.
ಪಾಸ್ಪೋರ್ಟ್ ಫೋಟೊ
- ನಿಮ್ಮ ಮುಖದ 2X2 ಇಂಚು ಅಳತೆಯ ಬಣ್ಣದ ಫೋಟೊ. ಇದನ್ನು ಕಳೆದ 6 ತಿಂಗಳಲ್ಲಿ ತೆಗೆದಿರಬೇಕು
- ಇಮೊಜಿಗಳು, ಫಿಲ್ಟರ್ಗಳು, ನಿಮ್ಮ ಮುಖವನ್ನು ಮಚ್ಚುತ್ತಿರುವ ವಸ್ತುಗಳಿರುವ ಅಥವಾ ಬೇರೆ ಯಾವುದೇ ವ್ಯಕ್ತಿ ಇರುವ ಫೋಟೋಗಳನ್ನು ಸಲ್ಲಿಸಬೇಡಿ
ಸಹಿ
- ಬಿಳಿ ಹಾಳೆಯ ಮೇಲೆ ಮಾಡಿರುವ ಸಹಿಯ ಒಂದು ಸ್ಪಷ್ಟವಾದ ಫೋಟೊ
ಆಧಾರ್ ಕಾರ್ಡ್
- ನಿಮ್ಮ ಆಧಾರ್ ಕಾರ್ಡ್ನ ಮುಂಭಾಗದ ಸ್ಪಷ್ಟವಾದ, ಬಣ್ಣದ ಮತ್ತು ಎಡಿಟ್ ಮಾಡಿಲ್ಲದ ಡಿಜಿಟಲ್ ಪ್ರತಿ. ಇದರಲ್ಲಿ ನಿಮ್ಮ ಹೆಸರು, ಫೋಟೊ ಮತ್ತು ಲಿಂಗ – ಇವೆಲ್ಲವೂ ಸ್ಪಷ್ಟವಾಗಿ ಕಾಣುವಂತಿರಬೇಕು
- ಆಧಾರ್ ಕಾರ್ಡ್ನ ಸ್ಕ್ರೀನ್ಶಾಟ್, ಬ್ಲರ್ ಆಗಿರುವ ಪ್ರತಿ ಅಥವಾ ಜ಼ೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಡಿ
ಬ್ಯಾಂಕ್ ವಿವರಗಳು
- ನಿಮ್ಮ ಬ್ಯಾಂಕ್ ಖಾತೆಯ ಪಾಸ್ಬುಕ್ನ ಮೊದಲ ಪುಟದ ಸ್ಪಷ್ಟವಾದ ಮತ್ತು ಎಡಿಟ್ ಮಾಡದೇ ಇರುವ ಡಿಜಿಟಲ್ ಪ್ರತಿ. ಇದರಲ್ಲಿ, ಖಾತೆ ಹೊಂದಿರುವವರ ಹೆಸರು, ಖಾತೆ ಸಂಖ್ಯೆ, IFSC ಮತ್ತು ಶಾಖೆಯ ವಿವರಗಳು ಸ್ಪಷ್ಟವಾಗಿ ಕಾಣಿಸುತ್ತಿರಬೇಕು.
- ನಿಮ್ಮ ಬಳಿ ಪಾಸ್ಬುಕ್ ಇಲ್ಲದಿದ್ದರೆ ಅಥವಾ ಪಾಸ್ಬುಕ್ನಲ್ಲಿ ಮಾಹಿತಿಯನ್ನು ಕೈಬರಹದಲ್ಲಿ ಬರೆದಿದ್ದರೆ ಅಥವಾ ಮಾಹಿತಿಯು ಸ್ಪಷ್ಟವಾಗಿ ಕಾಣಿಸುತ್ತಿಲ್ಲದಿದ್ದರೆ, ಕಳೆದ ಒಂದು ತಿಂಗಳ ಅವಧಿಯ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಅನ್ನು ಸಲ್ಲಿಸಿ. ಇದರಲ್ಲಿ ಖಾತೆ ಹೊಂದಿರುವವರ ಹೆಸರು, ಖಾತೆ ಸಂಖ್ಯೆ, IFSC ಮತ್ತು ಶಾಖೆಯ ವಿವರಗಳು ಸ್ಪಷ್ಟವಾಗಿ ಕಾಣಿಸುತ್ತಿರಬೇಕು.
- ಅಸ್ಪಷ್ಟವಾದ, ಸುಲಭವಾಗಿ ಓದಲು ಆಗದ, ತದ್ದಿ ಬರೆದಿರುವ ಅಥವಾ ಅವಶ್ಯ ಮಾಹಿತಿಯನ್ನು ಕೈಬರಹದಲ್ಲಿ ಬರೆದಿರುವ ದಾಖಲೆಗಳನ್ನು ಸಲ್ಲಿಸಬೇಡಿ
- ನಿಮ್ಮ ಉಳಿತಾಯ ಖಾತೆಯು ಒಂದು ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ನಲ್ಲಿ ಇದೆ ಮತ್ತು ಸಕ್ರಿಯವಾಗಿದೆ ಎಂದು ಖಚಿತಪಡಿಸಿಕೊಳ್ಳಿ
10ನೇ ತರಗತಿಯ ಅಂಕಪಟ್ಟಿ
- ನಿಮ್ಮ 10ನೇ ತರಗತಿಯ ಅಂಕಪಟ್ಟಿಯ ಸ್ಪಷ್ಟವಾದ ಮತ್ತು ಎಡಿಟ್ ಮಾಡಿಲ್ಲದ ಡಿಜಿಟಲ್ ಪ್ರತಿ
- ಆನ್ಲೈನ್ ಅಂಕಪಟ್ಟಿಗಳು ಅಥವಾ ವರ್ಗಾವಣೆ ಪತ್ರಗಳು ಅಥವಾ ಪಾಸ್ವರ್ಡ್ನಿಂದ ರಕ್ಷಿಸಲ್ಪಟ್ಟಿರುವ ಫೈಲ್ಗಳು, ಸ್ಪಷ್ಟವಾಗಿ ಓದಲು ಸಾಧ್ಯವಾಗದ ಪ್ರತಿಗಳು, ಫೋಟೋಕಾಪಿ, ಪ್ರಿಂಟ್ಔಟ್ಗಳು, ಕ್ರಾಪ್ ಮಾಡಿರುವ ಅಥವಾ ಎಡಿಟ್ ಮಾಡಿರುವ, ಅಥವಾ ಇಮೋಜಿಗಳಿರುವ ಅಥವಾ ಮೇಲೆ ಏನಾದರೂ ಬರೆದಿರುವ ಪ್ರತಿಗಳನ್ನು ಸಲ್ಲಿಸಬೇಡಿ.
12ನೇ ತರಗತಿಯ ಅಂಕಪಟ್ಟಿ
- ನಿಮ್ಮ 12ನೇ ತರಗತಿಯ ಅಂಕಪಟ್ಟಿಯ ಸ್ಪಷ್ಟವಾದ ಮತ್ತು ಎಡಿಟ್ ಮಾಡಿಲ್ಲದ ಡಿಜಿಟಲ್ ಪ್ರತಿ
- ಆನ್ಲೈನ್ ಅಂಕಪಟ್ಟಿಗಳು ಅಥವಾ ವರ್ಗಾವಣೆ ಪತ್ರಗಳು ಅಥವಾ ಪಾಸ್ವರ್ಡ್ನಿಂದ ರಕ್ಷಿಸಲ್ಪಟ್ಟಿರುವ ಫೈಲ್ಗಳು, ಸ್ಪಷ್ಟವಾಗಿ ಓದಲು ಸಾಧ್ಯವಾಗದ ಪ್ರತಿಗಳು, ಫೋಟೋಕಾಪಿ, ಪ್ರಿಂಟ್ಔಟ್ಗಳು, ಕ್ರಾಪ್ ಮಾಡಿರುವ ಅಥವಾ ಎಡಿಟ್ ಮಾಡಿರುವ, ಅಥವಾ ಇಮೋಜಿಗಳಿರುವ ಅಥವಾ ಮೇಲೆ ಏನಾದರೂ ಬರೆದಿರುವ ಪ್ರತಿಗಳನ್ನು ಸಲ್ಲಿಸಬೇಡಿ.
ಕಾಲೇಜಿಗೆ ಪ್ರವೇಶ ಪಡೆದಿರುವುದಕ್ಕೆ ಪುರಾವೆ
- ವಿಶ್ವಾಸಯೋಗ್ಯ ಪ್ರಮಾಣಪತ್ರ ಅಥವಾ ಕಾಲೇಜಿನ ಶೈಕ್ಷಣಿಕ ಶುಲ್ಕ ಪಾವತಿಯ ರಸೀತಿಯ ಸ್ಪಷ್ಟವಾದ ಮತ್ತು ಎಡಿಟ್ ಮಾಡಿಲ್ಲದ ಡಿಜಿಟಲ್ ಪ್ರತಿ. ಇದರಲ್ಲಿ ನಿಮ್ಮ ಹೆಸರು, ಕಾಲೇಜಿನ ಹೆಸರು, ಪದವಿಯ ಹೆಸರು, ಕೋರ್ಸ್ ಹೆಸರು, ಅಧ್ಯಯನದ ವರ್ಷ, ನಿಮ್ಮ ಕೋರ್ಸ್ನ ಆರಂಭದ ದಿನಾಂಕ, ದಾಖಲೆಯ ದಿನಾಂಕ, ಶಕ್ಷಣಿಕ ವರ್ಷ, ಮತ್ತು ದಾಖಲೆಯನ್ನು ನೀಡಿರುವ ಅಧಿಕಾರಿಗಳ ಮುದ್ರೆ/ಸಹಿ ಸ್ಪಷ್ಟವಾಗಿ ಕಾಣಿಸುತ್ತಿಬೇಕು
- ಪಾಸ್ವರ್ಡ್ನಿಂದ ರಕ್ಷಿಸಲ್ಪಟ್ಟಿರುವ ಫೈಲ್ಗಳು, ಸ್ಪಷ್ಟವಾಗಿ ಓದಲು ಸಾಧ್ಯವಾಗದ ಪ್ರತಿಗಳು, ಫೋಟೋಕಾಪಿ, ಪ್ರಿಂಟ್ಔಟ್ಗಳು, ಕ್ರಾಪ್ ಮಾಡಿರುವ ಅಥವಾ ಎಡಿಟ್ ಮಾಡಿರುವ, ಅಥವಾ ಇಮೋಜಿಗಳಿರುವ ಅಥವಾ ಮೇಲೆ ಏನಾದರೂ ಬರೆದಿರುವ ಪ್ರತಿಗಳನ್ನು ಸಲ್ಲಿಸಬೇಡಿ.
ಫೈಲ್‌ಗಳನ್ನು PDF/PNG/JPG ಫಾರ್ಮಾಟ್ಗಳಲ್ಲಿ ಮಾತ್ರ ಒಪ್ಪಿಕೊಳ್ಳಲಾಗುವುದು. ಫೈಲ್ನ ಗಾತ್ರ 30 KB- 500 KB ಒಳಗೆ ಇರಬೇಕು
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳ
1. ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ನ ಉದ್ದೇಶವೇನು?
ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ನ ಉದ್ದೇಶವು ಅವಕಾಶವಂಚಿತ ಹಿನ್ನೆಲೆಗಳುಳ್ಳ ವಿದ್ಯಾರ್ಥಿನಿಯರಿಗೆ ತಮ್ಮ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ನೆರವು ನೀಡುವುದಾಗಿದೆ. ಈ ಉಪಕ್ರಮವು ಭಾರತದಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಸಮಾನತೆಯನ್ನು ಸುಧಾರಿಸುವ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಒಟ್ಟಾರೆ ಬದ್ಧತೆಯ ಭಾಗವಾಗಿದೆ.
2. ಅಜೀಂ ಪ್ರೇಮ್‌ಜಿ ಸ್ಕಾಲರ್ಶಿಪ್ಗೆ 2025–26ರಲ್ಲಿ ಯಾರು ಅರ್ಹರು?
ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು:
- 10 ಮತ್ತು 12 – ಈ ಎರಡೂ ತರಗತಿಗಳನ್ನು ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಓದಿ, ಪಾಸಾಗಿರಬೇಕು.
- ಅರ್ಜಿ ಸಲ್ಲಿಸುವ ಸಮಯದಲ್ಲಿ, ಸರ್ಕಾರಿ ಅಥವಾ ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮ ಅಥವಾ ಡಿಪ್ಲೊಮಾ ಕೋರ್ಸಿನ (2 ರಿಂದ 5 ವರ್ಷಗಳ ಅವಧಿಯ ಕಾರ್ಯಕ್ರಮಗಳು) ಮೊದಲ ವರ್ಷಕ್ಕೆ (ಶೈಕ್ಷಣಿಕ ವರ್ಷ 2025–26) ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ಇದು ಅರ್ಜಿದಾರರ ಮೊದಲ ಪದವಿ ಅಥವಾ ಡಿಪ್ಲೊಮ ಆಗಿರಬೇಕು.
ಈ ಕೆಳಗಿನ ಸಂದರ್ಭಗಳಲ್ಲಿ ನಿಮ್ಮನ್ನು ಸ್ಕಾಲರ್‌ಷಿಪ್‌ಗೆ ಪರಿಗಣಿಸಲಾಗುವುದಿಲ್ಲ:
- ನೀವು 2025-26 ಶೈಕ್ಷಣಿಕ ವರ್ಷಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಯಾವುದೇ ಕಾರ್ಯಕ್ರಮದಲ್ಲಿ ಪ್ರವೇಶ ಪಡೆದಿದ್ದೀರ.
- ನೀವು ವಿಪ್ರೋದ ಸ್ಕಾಲರ್‌ಶಿಪ್‌ಗಳನ್ನು (ಉದಾ. ಸಂತೂರ್ ಸ್ಕಾಲರ್‌ಶಿಪ್) ಪಡೆಯುತ್ತಿದ್ದೀರ.
3. 2025–26ರಲ್ಲಿ ಯಾವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಅರ್ಹತೆ ಪಡೆದಿವೆ?
10 ಮತ್ತು 12 – ಈ ಎರಡೂ ತರಗತಿಗಳನ್ನು ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಓದಿ, ಪಾಸಾಗಿರುವ ಎಲ್ಲ ವಿದ್ಯಾರ್ಥಿನಿಯರೂ ಅರ್ಹರು.
(1) ಅರುಣಾಚಲ ಪ್ರದೇಶ, (2) ಅಸ್ಸಾಂ, (3) ಬಿಹಾರ, (4) ಛತ್ತೀಸ್‌ಗಢ, (5) ಜಾರ್ಖಂಡ್, (6) ಕರ್ನಾಟಕ, (7) ಮಧ್ಯಪ್ರದೇಶ, (8) ಮಣಿಪುರ, (9) ಮೇಘಾಲಯ, (10) ಮಿಜೋರಾಂ, (11) ನಾಗಾಲ್ಯಾಂಡ್, (12) ಒಡಿಶಾ, (13) ರಾಜಸ್ಥಾನ, (14) ಸಿಕ್ಕಿಂ, (15) ತೆಲಂಗಾಣ, (16) ತ್ರಿಪುರ, (17) ಉತ್ತರ ಪ್ರದೇಶ, (18) ಉತ್ತರಾಖಂಡ ಮತ್ತು (19) ಪುದುಚೇರಿ.
4. ನಾನು ದೂರ ಶಿಕ್ಷಣದಲ್ಲಿ (distance learning) ನನ್ನ ಪದವಿ/ಡಿಪ್ಲೊಮ ಅನ್ನು ಮಾಡುತ್ತಿದ್ದರೆ, ಸ್ಕಾಲರ್‌ಷಿಪ್‌ಗೆ ಅರ್ಹಳೇ?
ಇಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ, ನೀವು ಶೈಕ್ಷಣಿಕ ವರ್ಷ 2025–26ರಲ್ಲಿ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮದ ಮೊದಲ ವರ್ಷಕ್ಕೆ ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ನೀವು ಪ್ರವೇಶ ಪಡೆದಿರುವ ಕಾಲೇಜು ಸರ್ಕಾರಿ ಅಥವಾ ಖಾಸಗಿ ಆಗಿರಬಹುದು, ಆದರೆ ಅದು ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯ ಆಗಿರಬೇಕು. ನೀವು ಪ್ರವೇಶ ಪಡೆದಿರುವ ಕಾಲೇಜು ಭಾರತದಲ್ಲಿ ಎಲ್ಲಿ ಬೇಕಾದರೂ ಇರಬಹುದು. ನೀವು ಪ್ರವೇಶ ಪಡೆದಿರುವ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮದ ಅವಧಿಯು 2-5 ವರ್ಷಗಳಾಗಿರಬೇಕು. ಇದು ನಿಮ್ಮ ಮೊದಲ ಪದವಿ ಅಥವಾ ಡಿಪ್ಲೊಮಾ ಆಗಿರಬೇಕು.
5. ನಾನು ನನ್ನ ಪದವಿ/ಡಿಪ್ಲೊಮದ ಎರಡು, ಮೂರು, ನಾಲ್ಕು ಅಥವಾ ಐದನೇ ವರ್ಷದಲ್ಲಿ ಓದುತ್ತಿದ್ದರೆ, ಸ್ಕಾಲರ್‌ಷಿಪ್‌ಗೆ ಅರ್ಹಳೇ?
ಇಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ, ಭಾರತದ ಯಾವುದೇ ಸರ್ಕಾರಿ ಅಥವಾ ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮ ಅಥವಾ ಡಿಪ್ಲೊಮಾ ಕೋರ್ಸಿನ (2 ರಿಂದ 5 ವರ್ಷಗಳ ಅವಧಿಯ ಕಾರ್ಯಕ್ರಮಗಳು) ಮೊದಲ ವರ್ಷಕ್ಕೆ (ಶೈಕ್ಷಣಿಕ ವರ್ಷ 2025–26) ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ಇದು ಅರ್ಜಿದಾರರ ಮೊದಲ ಪದವಿ ಅಥವಾ ಡಿಪ್ಲೊಮ ಆಗಿರಬೇಕು.
6. ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ ಅನ್ನು ಮೆರಿಟ್ ಆಧಾರದ ಮೇಲೆ ನೀಡಲಾಗುವುದೇ?
ಇಲ್ಲ, ಸ್ಕಾಲರ್‌ಶಿಪ್ ಅನ್ನು ಮೆರಿಟ್ ಆಧಾರದ ಮೇಲೆ ನೀಡುವುದಿಲ್ಲ; ಆದಾಗ್ಯೂ, ಪ್ರಶ್ನೆ 2 ರಲ್ಲಿ ನಿರ್ದಿಷ್ಟಪಡಿಸಿದ ಇತರ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು.
7. ಅಜೀಂ ಪ್ರೇಮ್‌ಜಿ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಇದೆಯೇ?
ಇಲ್ಲ, ವಯಸ್ಸಿನ ಮಿತಿಯಿಲ್ಲ; ಆದಾಗ್ಯೂ, ಪ್ರಶ್ನೆ 3 ರಲ್ಲಿ ನಿರ್ದಿಷ್ಟಪಡಿಸಿದ ಇತರ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು.
FAQ ವಿಭಾಗವನ್ನು ಇಂಗ್ಲಿಷ್, ಹಿಂದಿ, ಕನ್ನಡ, ಒಡಿಯ, ಅಸ್ಸಾಮೀಸ್, ಅಥವಾ ತೆಲುಗುನಲ್ಲಿ ಓದಲು, ಕೆಳಗಿನ ಫೈಲ್‌ಗಳನ್ನು ನೋಡಿ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು – ಇನ್ನಷ್ಟು ಓದಿ ಹಿಂದಿ | ಕನ್ನಡ | ಒಡಿಯ | ಅಸ್ಸಾಮೀಸ್ | ತೆಲುಗು ಭಾಷೆಗಳಲ್ಲಿ
ಸಲ್ಲಿಸಬೇಕಾದ ದಾಖಲೆಗಳಿಗೆ ಮಾರ್ಗಸೂಚಿಗಳು – ಇನ್ನಷ್ಟು ಓದಿ ಇಂಗ್ಲಿಷ್ | ಹಿಂದಿ | ಕನ್ನಡ | ಒಡಿಯ | ಅಸ್ಸಾಮೀಸ್ | ತೆಲುಗು ಭಾಷೆಗಳಲ್ಲಿ
ನಿಮ್ಮ ಪ್ರಶ್ನೆಯನ್ನು ನಮಗೆ ಕಳಿಸಿ
2024-25 ರಲ್ಲಿ, ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ ಅನ್ನು ಮೂರು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ಈ ಸುತ್ತಿನಲ್ಲಿ 25,000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ನೆರವಾದೆವು. ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ.
