2024ರಲ್ಲಿ ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ ಪಡೆದ ಅಭ್ಯರ್ಥಿಗಳು ತಮ್ಮ ಸ್ಕಾಲರ್‌ಶಿಪ್ ಅನ್ನು ನವೀಕರಿಸಿಕೊಳ್ಳಬಹುದು.
2024-25ರಲ್ಲಿ, ಝಾರ್ಖಂಡ್, ಮಧ್ಯ ಪ್ರದೇಶ, ರಾಜಾಸ್ಥಾನ ಮತ್ತು ಉತ್ತರ ಪ್ರದೇಶದ 25,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ₹ 30,000 ಮೊತ್ತದ ವಾರ್ಷಿಕ ಸ್ಕಾಲರ್‌ಶಿಪ್ ಅನ್ನು ಪಡೆದರು.
ಪ್ರಸಕ್ತ ಶೈಕ್ಷಣಿಕ ವರ್ಷ 2025-26ರಲ್ಲೂ ಈ ಆರ್ಥಿಕ ನೆರವನ್ನು ಪಡೆಯಲು ಅವಕಾಶವಿದೆ. ಇದಕ್ಕೆ, ವಿದ್ಯಾರ್ಥಿನಿಯರು ತಾವು ಕಾಲೇಜಿಗೆ ದಾಖಲಾಗಿರುವುದಕ್ಕೆ ಸೂಕ್ತ ಪುರಾವೆಯನ್ನು ನಮ್ಮ ವೆಬ್‌ಸೈಟ್‌ನ ಮೂಲಕ ಸಲ್ಲಿಸಿ ಸ್ಕಾಲರ್‌ಶಿಪ್ ಅನ್ನು ನವೀಕರಿಸಿಕೊಳ್ಳಬಹುದು.
ಈ ವರ್ಷ (2025-26), ಸ್ಕಾಲರ್‌ಶಿಪ್ ಮೊತ್ತವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ₹15,000ದ ಎರಡು ಕಂತುಗಳಲ್ಲಿ ವಿತರಿಸಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹತೆ
ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ಎಲ್ಲ ವಿದ್ಯಾರ್ಥಿನಿಯರು:
- ಕಳೆದ ವರ್ಷ (2024) ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ ಪಡೆದಿರಬೇಕು, ಮತ್ತು
- ಪ್ರಸಕ್ತ ಶೈಕ್ಷಣಿಕ ವರ್ಷ 2025–26ರಲ್ಲಿ ಒಂದು ಸರ್ಕಾರಿ ಅಥವಾ ವಿಶ್ವಾಸಾರ್ಹ ಮತ್ತು ಮಾನ್ಯತೆ ಪಡೆದ ಖಾಸಗಿ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ಡಿಪ್ಲೊಮ (2 ರಿಂದ 5 ವರ್ಷಗಳ ಅವಧಿಯ) ಶಿಕ್ಷಣವನ್ನು ಮುಂದುವರೆಸುತ್ತಿರಬೇಕು.
ಪ್ರಕ್ರಿಯೆ
ಪ್ರಸಕ್ತ ಶೈಕ್ಷಣಿಕ ವರ್ಷ 2025-26ರಲ್ಲಿ ಕಾಲೇಜಿಗೆ ದಾಖಲಾಗಿರುವುದಕ್ಕೆ ಸೂಕ್ತ ಪುರಾವೆಯನ್ನು ಸ್ಕಾಲರ್‌ಶಿಪ್ ಪೋರ್ಟಲ್‌ಗೆ ಅಪ್‌ಲೋಡ್ ಮಾಡುವ ಮೂಲಕ ನೀವು ಸ್ಕಾಲರ್‌ಶಿಪ್ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದು.
ಕಾಲೇಜಿಗೆ ದಾಖಲಾಗಿರುವುದಕ್ಕೆ ಪುರಾವೆ
- ಪ್ರಸಕ್ತ ಶೈಕ್ಷಣಿಕ ವರ್ಷ 2025–26ಕ್ಕೆ ಕಟ್ಟಿದ ಶೈಕ್ಷಣಿಕ ಶುಲ್ಕದ ರಸೀತಿ; ಅಥವಾ
- ಶೈಕ್ಷಣಿಕ ವರ್ಷ 2025–26ಕ್ಕೆ ನೀವು ದಾಖಲಾಗಿದ್ದೀರ ಎಂದು ದೃಢೀಕರಿಸುವ, ನಿಮ್ಮ ಕಾಲೇಜಿನರೇ ನೀಡಿರುವ, ವಿಶ್ವಾಸಾರ್ಹ ಪ್ರಮಾಣಪತ್ರ
ಕಾಲೇಜು ದಾಖಲಾತಿಯ ಪುರಾವೆಯ ಸ್ಪಷ್ಟವಾದ ಮತ್ತು ಎಡಿಟ್ ಮಾಡಿಲ್ಲದ ಡಿಜಿಟಲ್ ಪ್ರತಿಯನ್ನು ಅಪ್‌ಲೋಡ್ ಮಾಡಿ. ಇದರಲ್ಲಿ ನಿಮ್ಮ ಹೆಸರು, ಕಾಲೇಜಿನ ಹೆಸರು, ಪದವಿಯ ಹೆಸರು, ಕೋರ್ಸ್ ಹೆಸರು, ಅಧ್ಯಯನದ ವರ್ಷ, ನಿಮ್ಮ ಕೋರ್ಸ್‌ನ ಆರಂಭದ ದಿನಾಂಕ, ದಾಖಲೆಯ ದಿನಾಂಕ, ಶೈಕ್ಷಣಿಕ ವರ್ಷ, ಮತ್ತು ದಾಖಲೆಯನ್ನು ನೀಡಿರುವ ಅಧಿಕಾರಿಗಳ ಮುದ್ರೆ/ಸಹಿ ಸ್ಪಷ್ಟವಾಗಿ ಕಾಣಿಸುತ್ತಿಬೇಕು
ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ನೀವು ನೀಡಿರುವ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಕ್ರಿಯವಾಗಿವೆ ಎಂದು ದೃಢಪಡಿಸಿಕೊಳ್ಳಿ.
ಫೈಲ್ಗಳನ್ನು PDF/PNG/JPG ಫಾರ್ಮಾಟ್ಗಳಲ್ಲಿ ಮಾತ್ರ ಒಪ್ಪಿಕೊಳ್ಳಲಾಗುವುದು. ಫೈಲ್ನ ಗಾತ್ರ 30 KB- 500 KB ಒಳಗೆ ಇರಬೇಕು
Important points to remember
The scholarship process steps for new applications
- If your registered mobile number has changed or is no longer active, update your new, active mobile number on the Scholarship portal to make sure you receive communications from us.
- Visit your bank and check that your account is still active. Update any changes in your bank account details to ensure easy transaction of the Scholarship amount.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಯೂ)
1. ಸ್ಕಾಲರ್‌ಶಿಪ್ ನವೀಕರಣಕ್ಕೆ ಯಾರು ಅರ್ಹರು?
ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ಎಲ್ಲ ವಿದ್ಯಾರ್ಥಿನಿಯರು:
- ಕಳೆದ ವರ್ಷ (2024) ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ ಪಡೆದಿರಬೇಕು, ಮತ್ತು
- ಪ್ರಸಕ್ತ ಶೈಕ್ಷಣಿಕ ವರ್ಷ 2025–26ರಲ್ಲಿ ಒಂದು ಸರ್ಕಾರಿ ಅಥವಾ ವಿಶ್ವಾಸಾರ್ಹ ಮತ್ತು ಮಾನ್ಯತೆ ಪಡೆದ ಖಾಸಗಿ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ಡಿಪ್ಲೊಮ (2 ರಿಂದ 5 ವರ್ಷಗಳ ಅವಧಿಯ) ಶಿಕ್ಷಣವನ್ನು ಮುಂದುವರೆಸುತ್ತಿರಬೇಕು.
2. ಪ್ರಸಕ್ತ ಶೈಕ್ಷಣಿಕ ವರ್ಷ 2025-26ರಲ್ಲಿ ನಾನು ಕಾಲೇಜಿಗೆ ದಾಖಲಾಗಿಲ್ಲದಿದ್ದರೆ, ನಾನು ಸ್ಕಾಲರ್‌ಶಿಪ್ ನವೀಕರಣಕ್ಕೆ ಅರ್ಹಳೇ?
ಇಲ್ಲ. ಕಳೆದ ವರ್ಷ ಸ್ಕಾಲರ್‌ಶಿಪ್ ಪಡೆದ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷ 2025–26ರಲ್ಲಿ ಒಂದು ಸರ್ಕಾರಿ ಅಥವಾ ವಿಶ್ವಾಸಾರ್ಹ ಮತ್ತು ಮಾನ್ಯತೆ ಪಡೆದ ಖಾಸಗಿ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ಡಿಪ್ಲೊಮ (2 ರಿಂದ 5 ವರ್ಷಗಳ ಅವಧಿಯ) ಶಿಕ್ಷಣವನ್ನು ಮುಂದುವರೆಸುತ್ತಿರುವ ವಿದ್ಯಾರ್ಥಿಗಳು ಮಾತ್ರ ಸ್ಕಾಲರ್‌ಶಿಪ್ ನವೀಕರಣಕ್ಕೆ ಅರ್ಹರು.
3. ನಾನು ಕಳೆದ ವರ್ಷ ಸ್ಕಾಲರ್ಷಿಪ್ ಪಡೆದಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ್ದರೆ, ಈಗ ಸ್ಕಾಲರ್‌ಶಿಪ್ ನವೀಕರಣಕ್ಕೆ ಅರ್ಹಳೇ?
ಇಲ್ಲ. ಕಳೆದ ವರ್ಷ ಸ್ಕಾಲರ್‌ಶಿಪ್ ಪಡೆದ , 12ನೇ ತರಗತಿಯ ನಂತರ ತಮ್ಮ ಮೊದಲ ಪದವಿ ಅಥವಾ ಡಿಪ್ಲೊಮ ಶಿಕ್ಷಣವನ್ನು ಮುಂದುವರಿಸುತ್ತಿರುವ ಮತ್ತು ಮುಗಿಸುತ್ತಿರುವ, ವಿದ್ಯಾರ್ಥಿನಿಯರು ಮಾತ್ರ ಅರ್ಹರು.
