ಸ್ಕಾಲರ್‌ಶಿಪ್ ಹಂತ I

scholarship-featured-image

2024-25ರಲ್ಲಿ ನಾವು ಝಾರ್ಖಂಡ್‌, ಮಧ್ಯ ಪ್ರದೇಶ, ರಾಜಾಸ್ಥಾನ ಮತ್ತು ಉತ್ತರ ಪ್ರದೇಶದ 25,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ನೆರವು ನೀಡಿದೆವು.

ಶಿಕ್ಷಣ ಕ್ಷೇತ್ರದ ತಳಸ್ತರದಲ್ಲಿ ನಾವು ಮಾಡಿರುವ ಕೆಲಸದಿಂದ ಪಡೆದಿರುವ ಅನುಭವ ಮತ್ತು ಒಳನೋಟಗಳು, ಒಬ್ಬ ವಿದ್ಯಾರ್ಥಿಯು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯು, ಪ್ರಾಥಮಿಕ ಹಂತದಿಂದ ಪ್ರೌಢ ಹಂತಕ್ಕೆ ಬಂದಾಗ ಶಿಕ್ಷಣದ ಅವಕಾಶಗಳು ಕಡಿಮೆಯಾಗುವುದಲ್ಲದೆ ದುಸ್ತರವೂ ಆಗುತ್ತದೆ ಎಂದು ಹೇಳುತ್ತವೆ. ಈ ಅಸಮತೆಯು ಉನ್ನತ ಶಿಕ್ಷಣದ ಹಂತದಲ್ಲಿ ಇನ್ನಷ್ಟು ತೀವ್ರವಾಗುತ್ತದೆ. ಶಿಕ್ಷಣ ಸಂಸ್ಥೆಗಳಿಗೆ ಇರುವ ದೂರ, ಆರ್ಥಿಕ ಇತಿಮಿತಿಗಳು – ಹೀಗೆ ಹಲವು ಅಂಶಗಳು ಹೆಣ್ಣು ಮಕ್ಕಳು ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿಯುವಂತೆ ಮಾಡುತ್ತವೆ. ಕೆಲವೊಮ್ಮೆ, ಸಾಮಾಜಿಕ ಕಟ್ಟಳೆಗಳೂ ಕೂಡ ಹೆಣ್ಣು ಮಕ್ಕಳ ಉನ್ನತ ಶಿಕ್ಷಣದತ್ತಲಿನ ಪ್ರಯಾಣ ಮತ್ತು ಭಾಗವಹಿಸುವಿಕೆಗೆ ಅಡಚಣೆಯಾಗಿ ನಿಲ್ಲುತ್ತವೆ.

2024-25ರಲ್ಲಿ ಫೌಂಡೇಷನ್, ಸರ್ಕಾರಿ ಶಾಲೆಯಲ್ಲಿ10 ಮತ್ತು 12ನೇ ತರಗತಿ ಪೂರ್ಣಗೊಳಿಸಿ, ಸರ್ಕಾರಿ ಅಥವಾ ಮಾನ್ಯತೆ ಪಡೆದ ಖಾಸಗಿ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮದ ಮೊದಲ ವರ್ಷಕ್ಕೆ ಪ್ರವೇಶ ಪಡೆದ, 25,000ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಬೆಂಬಲ ನೀಡಿತು.

ಈ ವಿದ್ಯಾರ್ಥಿಗಳಿಗೆ ವಾರ್ಷಿಕ ₹30,000 ಮೊತ್ತದ ಸ್ಕಾಲರ್‌ಶಿಪ್ ಅನ್ನು ನೀಡಲಾಯಿತು. ಈ ಸ್ಕಾಲರ್‌ಶಿಪ್ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮದ ಪೂರ್ಣ ಅವಧಿಯನ್ನು (ಎರಡರಿಂದ ಐದು ವರ್ಷಗಳು) ಒಳಗೊಂಡಿದ್ದು, ವಿದ್ಯಾರ್ಥಿಗಳು ಇದನ್ನು ಬೋಧನಾ ಶುಲ್ಕ ಅಥವಾ ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಇತರ ವೆಚ್ಚಗಳಿಗೆ ಬಳಸಬಹುದಾಗಿತ್ತು.

2024-25ರಲ್ಲಿ ತಲುಪಿದ ಪ್ರದೇಶಗಳು

2024-25ರಲ್ಲಿ, ಈ ವಿದ್ಯಾರ್ಥಿವೇತನ ಉಪಕ್ರಮವನ್ನು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶದ ಆಯ್ದ ಜಿಲ್ಲೆಗಳು (ಕೆಳಗೆ ಪಟ್ಟಿ ಮಾಡಲಾಗಿದೆ) ಮತ್ತು ಝಾರ್ಖಂಡ್‌ನ ರಾಂಚಿ ಜಿಲ್ಲೆಯ ಇಟ್‌ಕಿ ಬ್ಲಾಕ್‌ನಲ್ಲಿ** ಪ್ರಾಯೋಗಿಕವಾಗಿ ಪರಿಚಯಿಸಲಾಯಿತು.

Artboard-27.webp

*Data as of 28 April 2025

**10 scholarships awarded in Itki block, Ranchi

2024-25ರಲ್ಲಿ ಒಳಗೊಂಡ ರಾಜಾಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳ ಜಿಲ್ಲೆಗಳು

ರಾಜಸ್ಥಾನ (22 ಜಿಲ್ಲೆಗಳು)

ಅಜ್ಮೀರ್, ಅಲ್ವರ್‌, ಬಲೋತ್ರಾ, ಬಾಂನ್ಸ್‌ವಾಡಾ, ಬಾರಾಂ, ಬಾಡ್‌ಮೇರ್‌, ಚಿತ್ತೋಡ್‌ಗಢ್‌, ದುಡು, ಡುಂಗರ್‌ಪುರ್, ಜೈಪುರ್‌, ಜೈಪುರ್‌ (ಗ್ರಾಮೀಣ), ಜಾಲೌರ್, ಝಾಲಾವಾಡ್‌, ಜೋಧ್‌ಪುರ್‌, ಕೇಕ್ಡಿ, ಪಾಲಿ, ಪ್ರತಾಪ್‌ಗಢ್‌, ರಾಜ್‌ಸಮಂದ್, ಸಾಲುಂಬರ್, ಸವಾಯಿ ಮಾಧೋಪುರ್, ಸಿರೋಹಿ, ಟೋಂಕ್ ಮತ್ತು ಉದಯಪುರ್

ಉತ್ತರಪ್ರದೇಶ (35 ಜಿಲ್ಲೆಗಳು)

ಅಂಬೇಡ್ಕರ್ ನಗರ್‌, ಅಮೇಥಿ, ಅಯೋಧ್ಯೆ (ಹಿಂದಿನ ಫೈಜಾಬಾದ್), ಅಜಂಗಢ್‌, ಬಹರಾಇಚ್‌, ಬಲಿಯಾ, ಬಲರಾಂಪುರ್, ಬಾಂದಾ, ಬಾರಾಬಂಕಿ, ಬಸ್ತಿ, ಚಂದೌಲಿ, ಚಿತ್ರಕೂಟ, ದೇವರಿಯ, ಫತೇಪುರ್, ಗಾಜಿಪುರ್‌, ಗೊಂಡಾ, ಗೋರಖ್‌ಪರ್‌, ಜೌನ್‌ಪುರ್, ಕೌಶಾಂಬಿ, ಕುಶಿನಗರ್‌, ಲಖನೋ, ಮಹರಾಜ್‌ಗಂಜ್‌, ಮವೂ, ಮಿರ್ಜಾಪುರ್, ಪ್ರಯಾಗ್‌ರಾಜ್‌ (ಹಿಂದಿನ ಅಲಹಾಬಾದ್), ಪ್ರತಾಪ್‌ ಗಢ್‌, ರಾಯ್‌ಬರೇಲಿ, ಸಂತ್‌ ಕಬೀರ್ ನಗರ್‌, ಸಂತ್‌ ರವಿದಾಸ್ ನಗರ್‌ (ಹಿಂದಿನ ಭದೋಹಿ), ಶ್ರಾವಸ್ತಿ, ಸಿದ್ಧಾರ್ಥ್‌ನಗರ್‌, ಸೀತಾಪುರ್, ಸೋನ್‌ಭದ್ರ, ಸುಲ್ತಾನ್‌ಪುರ್‌, ಮತ್ತು ವಾರಣಾಸಿ

2025-26ರ ಸುತ್ತಿನ ಕುರಿತಾದ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.