ಉತ್ತಮ ಆರೋಗ್ಯ ಸೇವೆಗಳು ಲಭ್ಯವಿರದ ಸಮುದಾಯಗಳ ನೈಜ ಆರೋಗ್ಯ ಪರಿಸ್ಥಿತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು, ನಾವು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸ್ವತಂತ್ರ ಸಂಶೋಧನೆಗಳನ್ನು ಕೈಗೊಳ್ಳುತ್ತೇವೆ ಮತ್ತು ಸಂಶೋಧನೆಗಳನ್ನು ನಡೆಸಲು ಇತರ ಸಂಸ್ಥೆಗಳಿಗೆ ನೆರವು ನೀಡುತ್ತೇವೆ.

ನಮ್ಮ ನೇರ ಕಾರ್ಯಚಟುವಟಿಕೆಗಳ ಭಾಗವಾಗಿ ನಾವು ಕ್ಷೇತ್ರ ಅಧ್ಯಯನಗಳನ್ನು ನಡೆಸುತ್ತೇವೆ ಮತ್ತು ಸಂಶೋಧನಾ ಅನುದಾನಗಳ ಮೂಲಕ ಇತರ ಸಂಸ್ಥೆಗಳಿಗೆ ನೆರವು ನೀಡುತ್ತೇವೆ. ಈ ಕಾರ್ಯಕ್ರಮವು ಅತ್ಯಂತ ಪ್ರಮುಖವಾದ ಆರೋಗ್ಯ ಸವಾಲುಗಳನ್ನು ಗುರುತಿಸಲು, ಭಾರತದಲ್ಲಿನ ಸಾರ್ವಜನಿಕ ಆರೋಗ್ಯದ ಕುರಿತು ವಿವರವಾದ ಹಾಗೂ ದತ್ತಾಂಶ-ಆಧಾರಿತ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು ಮತ್ತು ಸಮುದಾಯಗಳ ಆರೋಗ್ಯ ಸ್ಥಿತಿಯನ್ನು ಸುಧಾರಿಸುವ ಪ್ರಾಯೋಗಿಕ ಮಾರ್ಗಗಳನ್ನು ಅನ್ವೇಷಿಸಲು ನಮಗೆ ಸಹಾಯ ಮಾಡುತ್ತದೆ.
ಸಮುದಾಯ/ಸಾರ್ವಜನಿಕ ಆರೋಗ್ಯದ ವಿಷಯಗಳಲ್ಲಿ ಸಂಶೋಧನೆ ನಡೆಸುವ ಸಂಸ್ಥೆಗಳಿಗೆ ಬೆಂಬಲ ನೀಡಲು ನಾವು ಇದುವರೆಗೆ 2023 ಮತ್ತು 2025 ರಲ್ಲಿ ಎರಡು ಬಾರಿ ಆರೋಗ್ಯ ಸಂಶೋಧನಾ ಅನುದಾನಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದೇವೆ.
ಮುಂದಿನ ಅರ್ಜಿ ಆಹ್ವಾನಗಳ ಬಗ್ಗೆ ಮಾಹಿತಿ ಪಡೆಯಲು, ಇಲ್ಲಿ ಸೈನ್ ಅಪ್ ಮಾಡಿ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಸಮುದಾಯಗಳ ನೈಜ ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಮ್ಮ ಸಹವರ್ತಿ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಸ್ತುತ ಅಧ್ಯಯನಗಳು ನಡೆಯುತ್ತಿವೆ.
