ಅತ್ಯಂತ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಆರೋಗ್ಯ ಸೇವೆಗಳನ್ನು ನೀಡಲು ಇಚ್ಛೆಯಿರುವವರಿಗಾಗಿ
ನಿಮ್ಮ ಆಸಕ್ತಿಗೆ ಧನ್ಯವಾದಗಳು. ಅರ್ಜಿ ಸಲ್ಲಿಸುವ ಸಮಯವು ಮುಗಿದಿದೆ.
ಮುಂದಿನ ಬ್ಯಾಚ್‌ಗಳ ಕುರಿತು ಮಾಹಿತಿ ಪಡೆಯಲು, ದಯವಿಟ್ಟು ಈ ಕೆಳಗಿನ ವಿವರಗಳನ್ನು ನೀಡಿ:
ತಲುಪಲು ಅತ್ಯಂತ ದುಸ್ತರವಾದ ಮತ್ತು ಸಂಪನ್ಮೂಲಗಳ ತೀವ್ರ ಕೊರತೆಯಿರುವ ಭಾಗಗಳಲ್ಲಿರುವ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಇದೊಂದು ಸುವರ್ಣಾವಕಾಶ.





ಚಿತ್ರ ಕೃಪೆ: ಪುರುಷೋತ್ತಮ ಠಾಕೂರ್

ಗ್ರಾಮೀಣ ಮತ್ತು ತಲುಪಲು ದುಸ್ತರವಾದ ಪ್ರದೇಶಗಳಲ್ಲಿರುವ ದುರ್ಬಲ ಸಮುದಾಯಗಳು ಮತ್ತು ಸೌಲಭ್ಯಗಳಿಂದ ವಂಚಿತರಾಗಿರುವ ನಗರ ಪ್ರದೇಶಗಳ ಸಮುದಾಯಗಳೊಂದಿಗೆ ಕೆಲಸ ಮಾಡುವ ಆರೋಗ್ಯ ವೃತ್ತಿಪರರ ಸಂಖ್ಯೆ ಬಹಳ ಕಡಿಮೆ. ಇದು ಆರೋಗ್ಯ ಕ್ಷೇತ್ರದ ಒಂದು ಪ್ರಮುಖ ಸವಾಲು. ಅಜೀಂ ಪ್ರೇಮ್‌ಜಿ ಹೆಲ್ತ್ ಈಕ್ವಿಟಿ ಫೆಲೋಶಿಪ್ ಯುವ MBBS ವೈದ್ಯರಿಗೆ, ತಲುಪಲು ದುಸ್ತರವಾದ ಪ್ರದೇಶಗಳಲ್ಲಿರುವ ಮತ್ತು ಸಂಪನ್ಮೂಲಗಳ ಕೊರತೆಯಿರುವ ಭೌಗೋಳಿಕ ಪ್ರದೇಶಗಳಲ್ಲಿ ಇರುವ ಅತ್ಯಂತ ಅತ್ಯಂತ ದರ್ಬಲ ಸಮುದಾಯಗಳಿಗೆ ಕೆಲಸ ಮಾಡುತ್ತಾ, ವೈದ್ಯಕೀಯ ವೃತ್ತಿಯ ಸವಾಲುಗಳು ಮತ್ತು ಸಂಕೀರ್ಣತೆಗಳನ್ನು ಕಲಿಯುವ ಅವಕಾಶವನ್ನು ನೀಡುತ್ತದೆ.
ಈ ಫೆಲೋಶಿಪ್ ವೈದ್ಯರಿಗೆ ವಿವಿಧ ಅವಕಾಶಗಳು ಮತ್ತು ಅನುಭವಗಳನ್ನು ನೀಡುತ್ತದೆ:
- ಅನುಭವಿ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಅವಕಾಶ.
- ಸಮಾನ ಮನಸ್ಕ ಫೆಲೋಗಳು ಮತ್ತು ವೈದ್ಯರ ಒಡನಾಟ.
- ದೇಶದ ಅತ್ಯಂತ ದುಸ್ತರವಾದ ಪ್ರದೇಶಗಳಿಗೆ ಪ್ರಯಾಣಿಸುವ ಅನುಭವ.
- ಗೌರವಧನ (ಸ್ಥಳಾಂತರ ಮತ್ತು ಪ್ರಯಾಣ ವೆಚ್ಚಗಳ ಹೊರತಾಗಿ).. ಹೆಚ್ಚಿನ ವಿವರಗಳು ಇಲ್ಲಿವೆ.
- ಫೆಲೋಶಿಪ್ ಪೂರ್ಣಗೊಳಿಸಿದ ಬಗ್ಗೆ ಪ್ರಮಾಣಪತ್ರ.
- ಸಿಎಂಸಿ ವೆಲ್ಲೂರು (CMC Vellore) ವತಿಯಿಂದ ‘ಫೌಂಡೇಶನ್ಸ್ ಇನ್ ಫ್ಯಾಮಿಲಿ ಮೆಡಿಸಿನ್’ ವಿಷಯದಲ್ಲಿ ಸರ್ಟಿಫಿಕೇಟ್ ಪ್ರೋಗ್ರಾಂ.
- ಫೆಲೋಶಿಪ್ ಮುಗಿದ ನಂತರ ಸಿಎಂಸಿ ವೆಲ್ಲೂರಿನ ‘ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಫ್ಯಾಮಿಲಿ ಮೆಡಿಸಿನ್’ (PGDFM) ಕಾರ್ಯಕ್ರಮಕ್ಕೆ ಸೇರುವ ಸಾಧ್ಯತೆ.
- ಉದ್ಯೋಗ ನಿಯೋಜನೆ (Placement) ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆ
ಸಮಯಾವಧಿ


ಭಾಗವಹಿಸುವ ಸಂಸ್ಥೆಗಳು
ಈ ಫೆಲೋಶಿಪ್ ಅಜೀಂ ಪ್ರೇಮ್‌ಜಿ ಫೌಂಡೇಷನ್ ಮತ್ತು ಭಾರತದಾದ್ಯಂತ ಇರುವ 19 ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದ ಪ್ರಯತ್ನವಾಗಿದೆ
ಈ ಸಹಭಾಗಿತ್ವದ ಮೂಲಕ, ಫೆಲೋಗಳಿಗೆ ದೇಶದ ಕೆಲವು ಅತ್ಯುತ್ತಮ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ವಿಶಿಷ್ಟ ಅವಕಾಶವನ್ನು ನೀಡಲು ನಾವು ಆಶಿಸುತ್ತೇವೆ.
- ಆರೋಹಿ, ನೈನಿತಾಲ್ ಜಿಲ್ಲೆ, ಉತ್ತರಾಖಂಡ
- ಅಶ್ವಿನಿ (ಅಸೋಸಿಯೇಷನ್ ಫಾರ್ ಹೆಲ್ತ್ ವೆಲ್ಫೇರ್ ಇನ್ ದಿ ನೀಲಗಿರೀಸ್), ನೀಲಗಿರಿ ಜಿಲ್ಲೆ, ತಮಿಳುನಾಡು
- ಬೇಸಿಕ್ ಹೆಲ್ತ್‌ಕೇರ್ ಸರ್ವಿಸಸ್, ಉದಯಪುರ ಜಿಲ್ಲೆ, ರಾಜಸ್ಥಾನ
- ಕ್ರಿಶ್ಚಿಯನ್ ಹಾಸ್ಪಿಟಲ್ ಬಿಸಮ್‌ಕಟಕ್, ರಾಯಗಡ ಜಿಲ್ಲೆ, ಒಡಿಶಾ
- ಚಿಂಚಪಾಡ ಕ್ರಿಶ್ಚಿಯನ್ ಹಾಸ್ಪಿಟಲ್, ನಂದುರ್ಬಾರ್ ಜಿಲ್ಲೆ, ಮಹಾರಾಷ್ಟ್ರ
- ಡಿ.ಎಫ್.ವೈ (ಡಾಕ್ಟರ್ಸ್ ಫಾರ್ ಯೂ), ವಿವಿಧ ಸ್ಥಳಗಳು (ಬಿಹಾರ ಮತ್ತು ಮಹಾರಾಷ್ಟ್ರ ಸೇರಿದಂತೆ)
- ಹರ್ಬರ್ಟ್‌ಪುರ್ ಕ್ರಿಶ್ಚಿಯನ್ ಹಾಸ್ಪಿಟಲ್, ಡೆಹ್ರಾಡೂನ್ ಜಿಲ್ಲೆ, ಉತ್ತರಾಖಂಡ
- ಜನ್ ಸ್ವಾಸ್ಥ್ಯ ಸಹಯೋಗ್, ಬಿಲಾಸ್‌ಪುರ ಜಿಲ್ಲೆ, ಛತ್ತೀಸ್‌ಗಢ
- ಕರುಣಾ ಟ್ರಸ್ಟ್, ವಿವಿಧ ಸ್ಥಳಗಳು (ಅರುಣಾಚಲ ಪ್ರದೇಶ, ಅಸ್ಸಾಂ, ಒಡಿಶಾ, ಕರ್ನಾಟಕ, ಮೇಘಾಲಯ ಸೇರಿದಂತೆ)
- ಮಾಧಿಪುರ ಕ್ರಿಶ್ಚಿಯನ್ ಹಾಸ್ಪಿಟಲ್, ಮಾಧಿಪುರ ಜಿಲ್ಲೆ, ಬಿಹಾರ
- ಮಕುಂದ ಕ್ರಿಶ್ಚಿಯನ್ ಲೆಪ್ರಸಿ ಅಂಡ್ ಜನರಲ್ ಹಾಸ್ಪಿಟಲ್, ಕರೀಂಗಂಜ್ ಜಿಲ್ಲೆ, ಅಸ್ಸಾಂ
- ಸರ್ಚ್ (ಸೊಸೈಟಿ ಫಾರ್ ಎಜುಕೇಷನ್, ಆಕ್ಷನ್ ಅಂಡ್ ರಿಸರ್ಚ್ ಇನ್ ಕಮ್ಯೂನಿಟಿ ಹೆಲ್ತ್), ಗಡ್ಚಿರೋಲಿ ಜಿಲ್ಲೆ, ಮಹಾರಾಷ್ಟ್ರ
- ಸೇವಾ ರೂರಲ್, ಭರೂಚ್ ಜಿಲ್ಲೆ, ಗುಜರಾತ್
- ಶಹೀದ್ ಹಾಸ್ಪಿಟಲ್, ದುರ್ಗ್ ಜಿಲ್ಲೆ, ಛತ್ತೀಸ್‌ಗಢ
- ಸಾವಿತ್ರಿಬಾಯಿ ಫುಲೆ ಮಹಿಳಾ ಏಕಾತ್ಮ ಸಮಾಜ ಮಂಡಲ್, ಛತ್ರಪತಿ ಸಂಭಾಜಿನಗರ ಜಿಲ್ಲೆ, ಮಹಾರಾಷ್ಟ್ರ
- ಸ್ವಾಮಿ ವಿವೇಕಾನಂದ ಮೆಡಿಕಲ್ ಮಿಷನ್, ಪಾಲಕ್ಕಾಡ್ ಜಿಲ್ಲೆ, ಕೇರಳ
- ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಮೈಸೂರು ಜಿಲ್ಲೆ, ಕರ್ನಾಟಕ
- ಸ್ವಾಸ್ಥ್ಯ ಸ್ವರಾಜ್, ಕಲಹಂಡಿ ಜಿಲ್ಲೆ, ಒಡಿಶಾ
- ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ, ಚಾಮರಾಜನಗರ ಜಿಲ್ಲೆ, ಕರ್ನಾಟಕ
ಕಾರ್ಯಕ್ರಮದ ಪ್ರಮುಖ ಅಂಶಗಳು
ಇದು 12 ತಿಂಗಳ ಅವಧಿಯ, ಆಯಾ ಕೆಲಸದ ಸ್ಥಳವನ್ನು ಕೇಂದ್ರವಾಗಿರಿಸಿಕೊಂಡ (site-centred) ಕಾರ್ಯಕ್ರಮವಾಗಿರುತ್ತದೆ.
- ಈ ಸ್ಥಳಗಳು ಗ್ರಾಮೀಣ, ತಲುಪಲು ದುಸ್ತರವಾದ, ಸಂಪನ್ಮೂಲಗಳ ಕೊರತೆಯಿರುವ ಪ್ರದೇಶಗಳಲ್ಲಿ ಅಥವಾ ಸೌಲಭ್ಯಗಳಿಂದ ವಂಚಿತವಾಗುರುವ ನಗರ ಸಮುದಾಯಗಳಲ್ಲಿ ಇರುವ ಪ್ರಾಥಮಿಕ/ದ್ವಿತೀಯಕ ಆರೋಗ್ಯ ಕೇಂದ್ರಗಳಾಗಿರುತ್ತವೆ. ಇಲ್ಲಿ ವೈದ್ಯಕೀಯ ಪ್ರಕರಣಗಳ ಸಂಖ್ಯೆ ಹೆಚ್ಚಿರುತ್ತದೆ ಮತ್ತು ಸಮುದಾಯದ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
- ಫೆಲೋಗಳು ತಮ್ಮ ಇಂಟರ್ನ್‌ಶಿಪ್ ಮತ್ತು ಯಾವುದೇ ಕಡ್ಡಾಯ ಸೇವೆಯನ್ನು (service obligation) ಪೂರ್ಣಗೊಳಿಸಿದ MBBS ಪದವೀಧರರಾಗಿರಬೇಕು; ಜೊತೆಗೆ ಸಂಬಂಧಿತ ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದರೆ ಉತ್ತಮ.
- ಫೆಲೋಗಳು MBBS ಪದವಿ ಪಡೆದು ಆರು ವರ್ಷಕ್ಕಿಂತ ಹೆಚ್ಚು ಸಮಯ ಆಗಿರಬಾರದು (ಅಂದರೆ 2020 ರಿಂದ 2025 ರ ನಡುವೆ ಪದವಿ ಪಡೆದ ಬ್ಯಾಚ್‌ನವರಾಗಿರಬೇಕು).
- ಈ ಕಾರ್ಯಕ್ರಮದಲ್ಲಿ ಒಂದು ‘ಆಂಕರ್ ಲೊಕೇಶನ್’ ಇರುತ್ತದೆ. ಅಲ್ಲಿ ಫೆಲೋಗಳನ್ನು ವರ್ಷದ ಹೆಚ್ಚಿನ ಅವಧಿಗೆ ನಿಯೋಜಿಸಲಾಗುತ್ತದೆ. ಜೊತೆಗೆ ಇನ್ನೊಂದು ಸ್ಥಳಕ್ಕೆ ಅಲ್ಪಾವಧಿಯ ಭೇಟಿಯ ಅವಕಾಶವಿರುತ್ತದೆ.
- ಇದರ ಜೊತೆಗೆ, ಸಿಎಂಸಿ ವೆಲ್ಲೂರಿನ (CMC Vellore) ‘ಫೌಂಡೇಷನ್ಸ್ ಇನ್ ಫ್ಯಾಮಿಲಿ ಮೆಡಿಸಿನ್’ ಸರ್ಟಿಫಿಕೇಟ್ ಕಾರ್ಯಕ್ರಮಕ್ಕಾಗಿ ಆನ್‌ಲೈನ್ ಸೆಷನ್‌ಗಳು, ಸಿಎಂಸಿ ವೆಲ್ಲೂರಿನಲ್ಲಿ ಪ್ರತ್ಯಕ್ಷ ತರಗತಿಗಳು (in-person sessions) ಹಾಗೂ ಅನುಭವ ಹಂಚಿಕೆ ಮತ್ತು ದೃಷ್ಟಿಕೋನ ರೂಪಿಸುವ ಸೆಷನ್‌ಗಳು ಇರುತ್ತವೆ.
- ಪ್ರತಿ ಫೆಲೋಗೆ ಒಬ್ಬರು ನಿಯೋಜಿತ ಮಾರ್ಗದರ್ಶಕರು (Mentor) ಇರುತ್ತಾರೆ. ಫೆಲೋ ಮತ್ತು ಮಾರ್ಗದರ್ಶಕರು ಚರ್ಚಿಸಿ ಫೆಲೋ ಗಮನ ಹರಿಸಬೇಕಾದ ಕ್ಷೇತ್ರಗಳನ್ನು ಗುರುತಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಕಲಿಕಾ ಯೋಜನೆಯನ್ನು ಸಿದ್ಧಪಡಿಸುತ್ತಾರೆ.
ಭಾಷೆ: ಹಿಂದಿ, ಇಂಗ್ಲಿಷ್ ಮತ್ತು ಆಯಾ ಸ್ಥಳದ ಪ್ರಾದೇಶಿಕ ಭಾಷೆಯಲ್ಲಿ ಪ್ರಾವೀಣ್ಯತೆ ಇರಬೇಕು.
ಹೆಚ್ಚಿನ ವಿವರವಾದ ಮಾಹಿತಿಗಾಗಿ, ದಯವಿಟ್ಟು ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳನ್ನು (FAQs) ಓದಿ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
ಫೆಲೊ ಆದವರು ಈ ಕಾರ್ಯಕ್ರಮದ ಅವಧಿಯಲ್ಲಿ ಗೌರವಧನವನ್ನೇನಾದರೂ ಪಡೆಯುತ್ತಾರೆಯೇ?
ಹೌದು, ಅಜೀಂ ಪ್ರೇಮ್‌ಜಿ ಫೌಂಡೇಷನ್ ಫೆಲೋಗಳಿಗೆ ಗೌರವಧನವನ್ನು ನೀಡುತ್ತದೆ. ಇದನ್ನು ಎರಡು ಭಾಗಗಳಲ್ಲಿ ನೀಡಲಾಗುತ್ತದೆ — ಮಾಸಿಕ INR 40,000 ಪಾವತಿ ಮತ್ತು ಪೂರ್ಣ 12 ತಿಂಗಳ ಫೆಲೋಶಿಪ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ INR 1.2 ಲಕ್ಷ ಪಾವತಿ. ಹೆಚ್ಚುವರಿಯಾಗಿ, ಭಾಗವಹಿಸುವ ಸಂಸ್ಥೆಗಳ ವಿವಿಧ ಸ್ಥಳಗಳಿಗೆ ಹೋಗಲು ತಗಲುವ ಸ್ಥಳಾಂತರ ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲಾಗುವುದು. ಗೌರವಧನವನ್ನು ಕೇವಲ ವೆಚ್ಚಗಳನ್ನು ಭರಿಸಲು ನೀಡಲಾಗುವುದೇ ಹೊರತು ಇದು ಸಂಬಳವಲ್ಲ.
ಫೆಲೊಷಿಪ್ ಯಾವಾಗ ಪ್ರಾರಂಭವಾಗುತ್ತದೆ?
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಮಾರ್ಚ್ 2026
- ಆಯ್ಕೆ ಪ್ರಕ್ರಿಯೆ: ಫೆಬ್ರವರಿ – ಮಾರ್ಚ್ 2026
- ಆಯ್ಕೆಯಾದವರ ಘೋಷಣೆ: 10 ಏಪ್ರಿಲ್ 2026
- ಕಾರ್ಯಕ್ರಮದ ಪ್ರಾರಂಭ: 25 ಮೇ 2026
ಈ ಕಾರ್ಯಕ್ರಮದ ಅವಧಿ ಎಷ್ಟಿರುತ್ತದೆ?
ಇದನ್ನು 12 ತಿಂಗಳ ಅವಧಿಯ ಕಾರ್ಯಕ್ರಮವಾಗಿ ರೂಪಿಸಲಾಗಿದೆ.
ಈ ಕಾರ್ಯಕ್ರಮದ ರಚನೆ ಹೇಗಿದೆ?
ಕಾರ್ಯಕ್ರಮವು ಒಂದು ‘ಆಂಕರ್ ಲೊಕೇಶನ್’ನಲ್ಲಿ (anchor location) 12 ತಿಂಗಳ ನಿಯೋಜನೆಯನ್ನು ಒಳಗೊಂಡಿರುತ್ತದೆ. ಇದರ ನಡುವೆ ಸಮುದಾಯ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಸಾಮರ್ಥ್ಯ ಅಭಿವೃದ್ಧಿ ಕುರಿತಾದ ತರಬೇತಿ ಹಾಗೂ ಸಿಎಂಸಿ (CMC) ಅವರ ‘ಫೌಂಡೇಷನ್ಸ್ ಇನ್ ಫ್ಯಾಮಿಲಿ ಮೆಡಿಸಿನ್’ ಸರ್ಟಿಫಿಕೇಟ್ ಕಾರ್ಯಕ್ರಮಕ್ಕಾಗಿ ಪ್ರತ್ಯಕ್ಷ ತರಗತಿಗಳು ಇರುತ್ತವೆ. ಕೆಲವು ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮೊದಲೇ ನಿಗದಿಯಾದ ಸ್ಥಳದಲ್ಲಿ ಅಥವಾ ಆನ್‌ಲೈನ್‌ನಲ್ಲಿ ನಡೆಯಬಹುದು.
ಈ ಕಾರ್ಯಕ್ರಮಕ್ಕೆ ಯಾರು ಅರ್ಜಿ ಸಲ್ಲಿಸಬಹುದು?
ಅರ್ಜಿದಾರರು ತಮ್ಮ ಇಂಟರ್ನ್‌ಶಿಪ್ ಮತ್ತು ಕಡ್ಡಾಯ ಸೇವೆಗಳನ್ನು (service obligation) ಪೂರ್ಣಗೊಳಿಸಿದ MBBS ಪದವೀಧರರಾಗಿರಬೇಕು; ಜೊತೆಗೆ, ಸಂಬಂಧಿತ ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದರೆ ಒಳ್ಳೆಯದು. ಅರ್ಜಿದಾರರು ಪದವಿ ಪಡೆದು ಆರು ವರ್ಷಕ್ಕಿಂತ ಹೆಚ್ಚು ಸಮಯ ಆಗಿರಬಾರದು (ಅಂದರೆ 2020 ರಿಂದ 2025 ರ ನಡುವೆ ಪದವಿ ಪಡೆದ ಬ್ಯಾಚ್‌ನವರು). ಭಾರತದ ಹೊರಗೆ MBBS ಪದವಿ ಪಡೆದ ಅಭ್ಯರ್ಥಿಗಳು ರಾಷ್ಟ್ರೀಯ ವೈದ್ಯಕೀಯ ಆಯೋಗದ (National Medical Commission) ಅಗತ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಸ್ನಾತಕೋತ್ತರ ವೈದ್ಯಕೀಯ ಪದವಿ ಹೊಂದಿರುವ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಫೆಲೊ ಆದವರಿಗೆ ಕಾರ್ಯಕ್ರಮದಿಂದ ಹೇಗೆ ಪ್ರಯೋಜನವಾಗುತ್ತದೆ?
ವಿವಿಧ ರೀತಿಯ ರೋಗಿಗಳ ಪ್ರಕರಣಗಳಿರುವುದರಿಂದ, ಇಲ್ಲಿನ ಆಸ್ಪತ್ರೆಗಳು ಫೆಲೋಗಳಿಗೆ ತಮ್ಮ ವೈದ್ಯಕೀಯ ಕೌಶಲಗಳನ್ನು ಪ್ರಾಯೋಗಿಕವಾಗಿ ಕಲಿಯಲು ಮತ್ತು ಅಭ್ಯಾಸ ಮಾಡಲು ನೇರ ಅವಕಾಶ ನೀಡುತ್ತವೆ. ಫೆಲೋಗಳು ಸಿಎಂಸಿ ನೀಡುವ ಸರ್ಟಿಫಿಕೇಟ್ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಅಲ್ಲದೆ, ಭಾರತದ ವಿವಿಧ ಭಾಗಗಳಲ್ಲಿರುವ ಪ್ರತಿಷ್ಠಿತ ವೈದ್ಯಕೀಯ ಕೇಂದ್ರಗಳಲ್ಲಿ ಇರುವ ಅತ್ಯಂತ ಅನುಭವಿ ಮಾರ್ಗದರ್ಶಕರಿಂದ ಕಲಿಯುವ ಅವಕಾಶ ಸಿಗಲಿದ್ದು, ಇದು ಅವರಿಗೆ ಸಮುದಾಯದ ಆರೋಗ್ಯದ ಬಗ್ಗೆ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು ಮತ್ತು ಕೆಲಸದ ಅನುಭವವನ್ನು ಪಡೆಯಲು ಸಹಾಯ ಮಾಡುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಂಸ್ಥೆಗಳು ಯಾವುವು?
ಸಮುದಾಯದಲ್ಲಿ ವ್ಯಾಪಕವಾದ ಆರೋಗ್ಯ ಸೇವೆಯನ್ನು ನೀಡುತ್ತಿರುವ ಮತ್ತು ಪ್ರಾಥಮಿಕ/ದ್ವಿತೀಯಕ ಆರೋಗ್ಯ ಸೌಲಭ್ಯಗಳನ್ನು ಹೊಂದಿರುವ ಈ ಕೆಳಗಿನ 19 ಸಂಸ್ಥೆಗಳು ಕಾರ್ಯಕ್ರಮದ ಭಾಗವಾಗಿವೆ:
- ಆರೋಹಿ, ನೈನಿತಾಲ್ ಜಿಲ್ಲೆ, ಉತ್ತರಾಖಂಡ
- ಅಶ್ವಿನಿ (ಅಸೋಸಿಯೇಷನ್ ಫಾರ್ ಹೆಲ್ತ್ ವೆಲ್ಫೇರ್ ಇನ್ ದಿ ನೀಲಗಿರೀಸ್), ನೀಲಗಿರಿ ಜಿಲ್ಲೆ, ತಮಿಳುನಾಡು
- ಬೇಸಿಕ್ ಹೆಲ್ತ್‌ಕೇರ್ ಸರ್ವಿಸಸ್, ಉದಯಪುರ ಜಿಲ್ಲೆ, ರಾಜಸ್ಥಾನ
- ಕ್ರಿಶ್ಚಿಯನ್ ಹಾಸ್ಪಿಟಲ್ ಬಿಸಮ್‌ಕಟಕ್, ರಾಯಗಡ ಜಿಲ್ಲೆ, ಒಡಿಶಾ
- ಚಿಂಚಪಾಡ ಕ್ರಿಶ್ಚಿಯನ್ ಹಾಸ್ಪಿಟಲ್, ನಂದುರ್ಬಾರ್ ಜಿಲ್ಲೆ, ಮಹಾರಾಷ್ಟ್ರ
- ಡಿ.ಎಫ್.ವೈ (ಡಾಕ್ಟರ್ಸ್ ಫಾರ್ ಯೂ), ವಿವಿಧ ಸ್ಥಳಗಳು (ಬಿಹಾರ ಮತ್ತು ಮಹಾರಾಷ್ಟ್ರ ಸೇರಿದಂತೆ)
- ಹರ್ಬರ್ಟ್‌ಪುರ್ ಕ್ರಿಶ್ಚಿಯನ್ ಹಾಸ್ಪಿಟಲ್, ಡೆಹ್ರಾಡೂನ್ ಜಿಲ್ಲೆ, ಉತ್ತರಾಖಂಡ
- ಜನ್ ಸ್ವಾಸ್ಥ್ಯ ಸಹಯೋಗ್, ಬಿಲಾಸ್‌ಪುರ ಜಿಲ್ಲೆ, ಛತ್ತೀಸ್‌ಗಢ
- ಕರುಣಾ ಟ್ರಸ್ಟ್, ವಿವಿಧ ಸ್ಥಳಗಳು (ಅರುಣಾಚಲ ಪ್ರದೇಶ, ಅಸ್ಸಾಂ, ಒಡಿಶಾ, ಕರ್ನಾಟಕ, ಮೇಘಾಲಯ ಸೇರಿದಂತೆ)
- ಮಾಧಿಪುರ ಕ್ರಿಶ್ಚಿಯನ್ ಹಾಸ್ಪಿಟಲ್, ಮಾಧಿಪುರ ಜಿಲ್ಲೆ, ಬಿಹಾರ
- ಮಕುಂದ ಕ್ರಿಶ್ಚಿಯನ್ ಲೆಪ್ರಸಿ ಅಂಡ್ ಜನರಲ್ ಹಾಸ್ಪಿಟಲ್, ಕರೀಂಗಂಜ್ ಜಿಲ್ಲೆ, ಅಸ್ಸಾಂ
- ಸರ್ಚ್ (ಸೊಸೈಟಿ ಫಾರ್ ಎಜುಕೇಷನ್, ಆಕ್ಷನ್ ಅಂಡ್ ರಿಸರ್ಚ್ ಇನ್ ಕಮ್ಯೂನಿಟಿ ಹೆಲ್ತ್), ಗಡ್ಚಿರೋಲಿ ಜಿಲ್ಲೆ, ಮಹಾರಾಷ್ಟ್ರ
- ಸೇವಾ ರೂರಲ್, ಭರೂಚ್ ಜಿಲ್ಲೆ, ಗುಜರಾತ್
- ಶಹೀದ್ ಹಾಸ್ಪಿಟಲ್, ದುರ್ಗ್ ಜಿಲ್ಲೆ, ಛತ್ತೀಸ್‌ಗಢ
- ಸಾವಿತ್ರಿಬಾಯಿ ಫುಲೆ ಮಹಿಳಾ ಏಕಾತ್ಮ ಸಮಾಜ ಮಂಡಲ್, ಛತ್ರಪತಿ ಸಂಭಾಜಿನಗರ ಜಿಲ್ಲೆ, ಮಹಾರಾಷ್ಟ್ರ
- ಸ್ವಾಮಿ ವಿವೇಕಾನಂದ ಮೆಡಿಕಲ್ ಮಿಷನ್, ಪಾಲಕ್ಕಾಡ್ ಜಿಲ್ಲೆ, ಕೇರಳ
- ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಮೈಸೂರು ಜಿಲ್ಲೆ, ಕರ್ನಾಟಕ
- ಸ್ವಾಸ್ಥ್ಯ ಸ್ವರಾಜ್, ಕಲಹಂಡಿ ಜಿಲ್ಲೆ, ಒಡಿಶಾ
- ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ, ಚಾಮರಾಜನಗರ ಜಿಲ್ಲೆ, ಕರ್ನಾಟ
ಸಂಬಂಧಿಸಿದ ವೈದ್ಯಕೀಯ ಅಧಿಕಾರಿಗಳಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆಯೇ?
ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ, ಭಾಗವಹಿಸುವವರು ಅಜೀಂ ಪ್ರೇಮ್‌ಜಿ ಫೌಂಡೇಷನ್ ಮತ್ತು ಸಹಭಾಗಿತ್ವದ ಸಂಸ್ಥೆಗಳು ಜಂಟಿಯಾಗಿ ನೀಡುವ ‘ಕಾರ್ಯಕ್ರಮ ಪೂರ್ಣಗೊಳಿಸಿದ ಪ್ರಮಾಣಪತ್ರ’ವನ್ನು ಪಡೆಯುತ್ತಾರೆ. ಇದರ ಜೊತೆಗೆ, ಕೋರ್ಸ್‌ನ ಎಲ್ಲಾ ಅಗತ್ಯತೆಗಳನ್ನು ಯಶಸ್ವಿಯಾಗಿ ಪೂರೈಸಿದಲ್ಲಿ, ಸಿಎಂಸಿ (CMC) ವತಿಯಿಂದ ‘ಫೌಂಡೇಶನ್ಸ್ ಇನ್ ಫ್ಯಾಮಿಲಿ ಮೆಡಿಸಿನ್’ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಈ ಕಾರ್ಯಕ್ರಮವು ಫೆಲೊ ಆದವರು ಗ್ರಾಮೀಣ ಪ್ರದೇಶದಲ್ಲಿ ತಂಗಬೇಕೆಂದು ನಿರೀಕ್ಷಿಸಲಾಗಿದೆ. ಅವರ ವಾಸ್ತವ್ಯಕ್ಕೆ ಏನು ವ್ಯವಸ್ಥೆಯನ್ನು ಮಾಡಲಾಗುತ್ತದೆ?
ಫೆಲೋಗಳನ್ನು ನಿಯೋಜಿಸುವ ಸಂಸ್ಥೆಗಳು ಸೂಕ್ತವಾದ ವಾಸದ ವ್ಯವಸ್ಥೆಯನ್ನು (ಒಂಟಿಯಾಗಿ ಅಥವಾ ಕುಟುಂಬದೊಂದಿಗೆ ಇರಲು, ಸಂದರ್ಭಕ್ಕೆ ಅನುಗುಣವಾಗಿ) ಒದಗಿಸುತ್ತವೆ ಅಥವಾ ಅದಕ್ಕೆ ಪೂರಕವಾದ ವ್ಯವಸ್ಥೆ ಮಾಡಿಕೊಡುತ್ತವೆ. ಆದಾಗ್ಯೂ, ಎಲ್ಲಾ ಸ್ಥಳಗಳಲ್ಲಿಯೂ ಇದನ್ನು ಖಚಿತವಾಗಿ ಖಾತರಿಪಡಿಸಲು ಸಾಧ್ಯವಿಲ್ಲ.
ಕಾರ್ಯಕ್ರಮದ ಅವಧಿಯಲ್ಲಿ ಫೆಲೊ ಆದವರನ್ನು ಎಷ್ಟು ಸ್ಥಳಗಳಿಗೆ ನಿಯೋಜಿಸಲಾಗುತ್ತದೆ?
ಪ್ರತಿಯೊಬ್ಬ ಫೆಲೋ ಅನ್ನು ಒಂದು ಮುಖ್ಯ ಸ್ಥಳಕ್ಕೆ ನಿಯೋಜಿಸಲಾಗುತ್ತದೆ ಮತ್ತು ಇದರ ಜೊತೆಗೆ ಇನ್ನೊಂದು ಸ್ಥಳಕ್ಕೆ ಅಲ್ಪಾವಧಿಯ ಭೇಟಿಯ ಅವಕಾಶವಿರುತ್ತದೆ.
ಈ ಕಾರ್ಯಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವುದನ್ನು ಒಳಗೊಂಡಿರುವುದರಿಂದ, ಫೆಲೋಗಳಿಗೆ ವಾಸದ ವ್ಯವಸ್ಥೆ ಹೇಗಿರುತ್ತದೆ?
ಖಂಡಿತ ಇಲ್ಲ. ಈಗಾಗಲೇ ಈ ಪ್ರತಿಯೊಂದು ಸ್ಥಳದಲ್ಲಿಯೂ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ. ಈ ಸಂಸ್ಥೆಗಳು ವರ್ಷಗಳಿಂದ ತಮ್ಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿವೆ. ಈ ಸಂಸ್ಥೆಗಳ ವೆಬ್‌ಸೈಟ್‌ಗಳು ಅಲ್ಲಿನ ವೈದ್ಯಕೀಯ ಸೌಲಭ್ಯಗಳು ಮತ್ತು ಅವುಗಳ ಕೆಲಸದ ವ್ಯಾಪ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತವೆ.
ಕಾರ್ಯಕ್ರಮದ ಅವಧಿಯಲ್ಲಿ ಫೆಲೊ ಆದವರಿಗೆ ರಜೆಯ ಸೌಲಭ್ಯ ಇರುತ್ತದೆಯೇ?
ಹೌದು, ರಜೆಯ ಸೌಲಭ್ಯವಿರುತ್ತದೆ. ರಜೆಯ ನಿರ್ದಿಷ್ಟ ಅವಧಿ ಮತ್ತು ಇತರ ವಿವರಗಳನ್ನು ನಿಮ್ಮ ಕೆಲಸದ ಸ್ಥಳದ ಆಧಾರದ ಮೇಲೆ ಚರ್ಚಿಸಿ ನಿಮಗೆ ತಿಳಿಸಲಾಗುವುದು.
ಒಂದು ಸ್ಥಳದಲ್ಲಿ ಕೇವಲ ಒಬ್ಬರೇ ಫೆಲೊ ಇರುವ ಸಾಧ್ಯತೆ ಇದೆಯೇ?
ಫೆಲೋಗಳು ಆಯಾ ಸ್ಥಳದ ವೈದ್ಯಕೀಯ ತಂಡದ ಭಾಗವಾಗಿ ಕೆಲಸ ಮಾಡುತ್ತಾರೆ. ಅಗತ್ಯತೆ ಮತ್ತು ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆಯನ್ನು ಆಧರಿಸಿ, ಒಂದು ಸ್ಥಳದಲ್ಲಿ ಒಬ್ಬರು ಅಥವಾ ಇಬ್ಬರು ಫೆಲೋಗಳು ಇರಬಹುದು.
ಕಾರ್ಯಕ್ರಮದ ಅಂತ್ಯದ ನಂತರ ವೃತ್ತಿ ನಿಯೋಜನೆ ಇರುತ್ತದೆಯೇ?
ಅಗತ್ಯತೆ ಮತ್ತು ಪರಸ್ಪರ ಹೊಂದಾಣಿಕೆಯ ಆಧಾರದ ಮೇಲೆ, ಕಾರ್ಯಕ್ರಮದ ಮುಕ್ತಾಯದ ಹಂತದಲ್ಲಿ ಉದ್ಯೋಗ ನಿಯೋಜನೆಗೆ ಸಂಬಂಧಿಸಿದ ಚರ್ಚೆಗಳನ್ನು ನಡೆಸಬಹುದು.
ಫೆಲೊ ಆದವರೊಬ್ಬರು ನಡುವಿನಲ್ಲಿ ಕಾರ್ಯಕ್ರಮದಿಂದ ಹೊರ ನಡೆಯಲು ಬಯಸಿದರೆ ಏನಾಗುತ್ತದೆ?
ನಮ್ಮಲ್ಲಿ ಸೀಟುಗಳ ಸಂಖ್ಯೆ ಸೀಮಿತವಾಗಿರುವುದರಿಂದ ಪೂರ್ಣ 12 ತಿಂಗಳ ಅವಧಿಗೆ ಬದ್ಧರಾಗಿರುವ ಅಭ್ಯರ್ಥಿಗಳನ್ನು ನಾವು ಹುಡುಕುತ್ತಿದ್ದೇವೆ. ಆದಾಗ್ಯೂ, ಅನಿವಾರ್ಯ ಕಾರಣಗಳಿಂದ ಫೆಲೋ ಹೊರಹೋಗಬೇಕಾಗಿ ಬಂದರೆ, ಅಗತ್ಯವಿರುವ ನೋಟಿಸ್ ಅವಧಿಯನ್ನು ಪೂರೈಸಿದ ನಂತರ ಅವರು ಹೊರಹೋಗಬಹುದು. ಬಾಕಿ ಇರುವ ಸೌಲಭ್ಯಗಳನ್ನು ಫೆಲೋಗಳಿಗೆ ಅವರು ಕೆಲಸ ಮಾಡಿದ ಅವಧಿಗೆ ಅನುಗುಣವಾಗಿ ಪಾವತಿಸಲಾಗುವುದು. ಗಮನಿಸಿ: ಕಾರ್ಯಕ್ರಮದಿಂದ ಹೊರಹೋದ ನಂತರ ಫೆಲೋ ಸಿಎಂಸಿ ಕಾರ್ಯಕ್ರಮವನ್ನು ಮುಂದುವರಿಸಲು ಸಾಧ್ಯವಿಲ್ಲ.
ಇದು ಒಂದು ವಿಷಯದ ಮೇಲೆ ವಿಶೇಷ ಗಮನ ಹರಿಸುವ ಫೆಲೊಷಿಪ್ ಅಥವಾ ರೆಸಿಡೆನ್ಸಿ ರೀತಿಯ ಕಾರ್ಯಕ್ರಮವೇ?
ಇಲ್ಲ, ಈ ಕಾರ್ಯಕ್ರಮವು ಅವುಗಳಿಗಿಂತ ಭಿನ್ನವಾಗಿದೆ. ನಮ್ಮ ಭಾಗವಹಿಸುವ ಸಂಸ್ಥೆಗಳಲ್ಲಿ ವೈದ್ಯಕೀಯ ಮತ್ತು ಸಮುದಾಯದ ಕೆಲಸದಲ್ಲಿ ಸಮೃದ್ಧ ಅನುಭವವನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಇದು ಅನಾರೋಗ್ಯದ ಕಾರಣಗಳು ಮತ್ತು ಅದರ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ, ವೈದ್ಯಕೀಯ ಜ್ಞಾನವನ್ನು ಕೇವಲ ರೋಗಿಗಳಿಗಷ್ಟೇ ಅಲ್ಲದೆ, ಅವರ ಕುಟುಂಬಗಳು ಮತ್ತು ವಿಶಾಲ ಸಮುದಾಯದ ಪ್ರಯೋಜನಕ್ಕಾಗಿ ಸೂಕ್ತ ತಂತ್ರಜ್ಞಾನ ಮತ್ತು ಔಷಧಿಗಳನ್ನು ಬಳಸಿಕೊಂಡು ಹೇಗೆ ಅನ್ವಯಿಸಬೇಕು ಎಂಬುದನ್ನು ಕಲಿಯಲು ಇದು ಸಹಾಯ ಮಾಡುತ್ತದೆ.
