ಆಗಸ್ಟ್ 2024ರಲ್ಲಿ, ಕರ್ನಾಟಕದಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ನೆರವು ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್, ಕರ್ನಾಟಕ ಸರ್ಕಾರದೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿತು.
ಕರ್ನಾಟಕದ ಎಲ್ಲಾ 31 ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಗಳವರೆಗಿನ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ಒದಗಿಸಲು ಫೌಂಡೇಷನ್, ಮೂರು ವರ್ಷಗಳ ಕಾಲ ರೂ. 1,500 ಕೋಟಿ ನೆರವು ನೀಡಲು ಒಪ್ಪಿಕೊಂಡಿದೆ.

ಈ ಕಾರ್ಯಕ್ರಮಕ್ಕೆ 2024ರ ಸೆಪ್ಟೆಂಬರ್ 25ರಂದು ಮಾನ್ಯ ಶಿಕ್ಷಣ ಸಚಿವರು ಯಾದಗಿರಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಇದೇ ವೇಳೆ ಕರ್ನಾಟಕದಾದ್ಯಂತ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಈ ಉಪಕ್ರಮದಡಿಯಲ್ಲಿ, ಸುಮಾರು 55 ಲಕ್ಷ ವಿದ್ಯಾರ್ಥಿಗಳಿಗೆ, ವಾರದ ಎಲ್ಲಾ ಆರು ಶಾಲಾ ದಿನಗಳಲ್ಲಿ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಇದಕ್ಕೆ ಮುನ್ನ ವಾರದಲ್ಲಿ ಎರಡು ದಿನಗಳಂದು ಮೊಟ್ಟೆಗಳನ್ನು ನೀಡಲಾಗುತ್ತಿತ್ತು. ಫೌಂಡೇಷನ್‌ನ ಅನುದಾನವು, ಉಳಿದ ನಾಲ್ಕು ದಿನಗಳ ವೆಚ್ಚವನ್ನು ಭರಿಸುತ್ತಿದೆ.
Currently, the mid-day meal programme in each state has two parts: a standard meal (e.g., rice and dal/ sambhar or roti and vegetables), and a supplement of fruit, milk or eggs on some or all days. Eggs have a strong nutritional value and can improve health outcomes in children. Including eggs in the mid-day meal programme will significantly benefit a student’s health and well-being.
