ಬಾಲವಾಡಿ ಉಪಕ್ರಮ 

Health

ಒಂದು ಮಗುವಿನ ಬದುಕಿನ ಮೊದಲ 1,000 ದಿನಗಳ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಪೌಷ್ಟಿಕಾಂಶದ ಪಾತ್ರ ಮಹತ್ತರವಾದದ್ದು   

ಸಾಕಷ್ಟು ಪೌಷ್ಟಿಕಾಂಶ ಲಭಿಸದಿದ್ದರೆ ಮೆದುಳಿನ ಬೆಳವಣಿಗೆಯು ನಿಧಾನವಾಗುತ್ತದೆ ಮತ್ತು ಒಟ್ಟಾರೆ ದೈಹಿಕ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ಗ್ರಾಮೀಣ ಭಾರತದಲ್ಲಿ, ಮುಖ್ಯವಾಗಿ ತಲುಪಲು ದುಸ್ತರವಾದ ಹಳ್ಳಿಗಳಲ್ಲಿ, ಏಳು ತಿಂಗಳುಗಳಿಂದ ಮೂರು ವರ್ಷ ವಯಸ್ಸಿನ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಈ ಮಕ್ಕಳು ʼಟೇಕ್‌ ಹೋಮ್‌ ರೇಷನ್‌ʼ (ಟಿಎಚ್‌ಆರ್‌), ರೋಗನಿರೋಧಕ ಲಸಿಕೆ ಮತ್ತು ಆರೋಗ್ಯ ಸೇವೆಗಳನ್ನು ಪಡೆಯಲು ಅರ್ಹರಾಗಿದ್ದರೂ ಸಹ, ಅನೇಕ ಕಾರಣಗಳಿಂದ ಅವರು ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಗಳಲ್ಲಿ ಪ್ರಮುಖವಾದುವು ಎಂದರೆ ಭೌಗೋಳಿಕ ಮತ್ತು ಮೂಲಸೌಕರ್ಯಗಳ ಸಮಸ್ಯೆಗಳು ಹಾಗೂ ಮಕ್ಕಳ ಆರೈಕೆದಾರರಲ್ಲಿ ಇರುವ ಅರಿವಿನ ಕೊರತೆ.

ಅಲ್ಲದೆ ಈ ಮಕ್ಕಳ ಪೋಷಕರು ಕೆಲಸಕ್ಕೆ ಹೋಗುವಾಗ ಅವರನ್ನು ದೊಡ್ಡ ಮಕ್ಕಳೊಂದಿಗೆ ಅಥವಾ ಅಜ್ಜ-ಅಜ್ಜಿಯ ಜೊತೆ ಬಿಟ್ಟು ಹೋಗುತ್ತಾರೆ. ಇದು ಮಗುವಿಗೆ ಅವಶ್ಯವಿರುವ ಪೌಷ್ಟಿಕಾಂಶದ ಲಭ್ಯತೆ ಮತ್ತು ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

Keeping the above factors in mind, the Azim Premji Foundation launched creches that seeks to improve the nutritional status of very vulnerable children in the age group of seven months to three years. The key objectives of this initiative include: 

  • ಮಕ್ಕಳಿಗೆ ಸುರಕ್ಷಿತ ಸ್ಥಳಗಳು ಸಿಗುವಂತೆ ಮಾಡುವುದು.
  • ಪ್ರತಿ ದಿನವೂ, ಒಂದು ಮೊಟ್ಟೆ ಸೇರಿದಂತೆ, ಅವರಿಗೆ ಮೂರು ಹೊತ್ತು ಪೌಷ್ಟಿಕ ಆಹಾರ ನೀಡುವುದು.
  • ಹೆಲ್ತ್‌ ರೆಫರಲ್‌ ಮತ್ತು ನಿರಂತರ ಅನುಸರಣೆಯ ಮೂಲಕ ಅಪೌಷ್ಟಿಕತೆಯನ್ನು ಹೊಂದಿರುವ ಮಕ್ಕಳನ್ನು ಗುರುತಿಸಿ, ಅವರಿಗೆ ಅವಶ್ಯವಿರುವ ಸೇವೆಗಳನ್ನು ಒದಗಿಸುವುದು.

ಸದ್ಯಕ್ಕೆ ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್‌ ಮತ್ತು ಒಡಿಶಾ ರಾಜ್ಯಗಳಲ್ಲಿಇಂತಹ 667 ಬಾಲವಾಡಿಗಳು ನಡೆಯುತ್ತಿವೆ. ಈ ಬಾಲವಾಡಿಗಳಲ್ಲಿ ಒಟ್ಟು 9,000ಕ್ಕಿಂತಲೂ ಹೆಚ್ಚಿನ ಮಕ್ಕಳು ದಾಖಲಾಗಿದ್ದಾರೆ. ಈ ಉಪಕ್ರಮವನ್ನು 25 ನಾಗರಿಕ ಸಮಾಜ ಸಂಸ್ಥೆಗಳ ಜೊತೆಗಿನ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ.

ಎಳೆಯ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವ ಸುರಕ್ಷಿತ ಸ್ಥಳಗಳನ್ನು ಒದಗಿಸುವುದು ನಮ್ಮ ಪ್ರಾಥಮಿಕ ಉದ್ದೇಶವಾದರೂ, ಬಾಲವಾಡಿಯಿಂದ ಸಮುದಾಯಗಳ ಅನೇಕ ಪ್ರಯೋಜನಗಳಿವೆ. ಒಂದು ಬಾಲವಾಡಿಯಿದ್ದರೆ, ಯುವ ತಾಯಂದಿರಿಗೆ ಹೆಚ್ಚಿನ ಜೀವನೋಪಾಯ ಮಾರ್ಗಗಳು ತೆರೆದುಕೊಳ್ಳುತ್ತವೆ, ಸರ್ಕಾರದ ಸೌಲಭ್ಯಗಳ ಲಭ್ಯತೆಯು ಉತ್ತಮಗೊಳ್ಳುತ್ತದೆ, ಮತ್ತು ಮಕ್ಕಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.

ಅತ್ಯಂತ ಕಡಿಮೆ ತೂಕ ಇರುವ ಮತ್ತು ಬಹಳ ತೆಳ್ಳಗಿರುವ ಮಕ್ಕಳನ್ನುಹೆಚ್ಚಿನ ಆರೈಕೆಗಾಗಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೋಷಣೆ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಪೋಷಣೆ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

ಅತ್ಯಂತ ಕಡಿಮೆ ತೂಕ ಇರುವ ಮತ್ತು ಬಹಳ ತೆಳ್ಳಗಿರುವ ಮಕ್ಕಳ ಹಸಿವಿನ ಮಟ್ಟವನ್ನು ಆಧರಿಸಿ, ಆಗಾಗ್ಗೆ ಹೆಚ್ಚಿನ ಎಣ್ಣೆಯೊಂದಿಗೆ ಪೂರಕ ಆಹಾರವನ್ನು ನೀಡಲಾಗುತ್ತದೆ.

Meals, Play, Care: A Day with Sreema at the Creche in Odisha

In the remote village of Macchadapanga, Odisha, childhood is being reimagined through care, nutrition, and learning. This short film follows Sreema, a young child whose day unfolds at the creche supported by the Azim Premji Foundation — a safe and nurturing space where children eat three nutritious meals, play and learn together, and are cared for with warmth.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.