ಅತ್ಯಂತ ದುರ್ಬಲ ವರ್ಗಕ್ಕೆ ಸೇರಿದವರ ಮೇಲೆ ಕಾಳಜಿ ಇರುವ ಸ್ನಾತಕೋತ್ತರ ವೈದ್ಯರಿಗೆ ಒಂದು ಕರೆ
Thank you for your interest. Applications are now closed.
ಭಾರತದ, ತಲುಪಲು ಅತ್ಯಂತ ದುಸ್ತರವಾದ ಪ್ರದೇಶಗಳಲ್ಲಿ ಹಾಗೂ ಸಂಪನ್ಮೂಲಗಳ ಕೊರತೆ ಇರುವ ಪ್ರದೇಶಗಳಲ್ಲಿರುವ, ಆಸ್ಪತ್ರೆಗಳಲ್ಲಿ ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ, ಸ್ವಂತ ನೇರ ಅನುಭವವನ್ನು ಪಡೆಯುವ ವಿಶಿಷ್ಟ ಅವಕಾಶಕ್ಕಾಗಿ ನೊಂದಾಯಿಸಿಕೊಳ್ಳಿ.





ಚಿತ್ರ ಕೃಪೆ: ಪುರುಷೋತ್ತಮ ಠಾಕೂರ್

ಆರೋಗ್ಯ ಕ್ಷೇತ್ರದ ಒಂದು ಅತಿ ಮುಖ್ಯ ಸಮಸ್ಯೆ ಎಂದರೆ ಗ್ರಾಮೀಣ ಮತ್ತು ತಲುಪಲು ದುಸ್ತರವಾದ ಸ್ಥಳಗಳಲ್ಲಿ ಇರುವ ಅತ್ಯಂತ ದುರ್ಬಲ ವರ್ಗಗಳಿಗೆ ಸೇರಿದವರೊಂದಿಗೆ ಕೆಲಸ ಮಾಡುವ ಸವಾಲನ್ನು ಸ್ವೀಕರಿಸುವ ಆರೋಗ್ಯ ಸೇವಾ ವೃತ್ತಿಪರರ ತೀವ್ರ ಕೊರತೆ. ಅಂತಹ ವೃತ್ತಿಪರರ ಹುಡುಕಾಟದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ಅಜೀಂ ಪ್ರೇಮ್‌ಜಿ ಹೆಲ್ತ್ ಈಕ್ವಿಟಿ ಫೆಲೊಷಿಪ್‌ಗೆ ಚಾಲನೆ ನೀಡುತ್ತಿದೆ. ಆ ಮೂಲಕ ಯುವ ವೈದ್ಯಕೀಯ ಸೇವಾ ವೃತ್ತಿಪರರಿಗೆ, ತಲುಪಲು ದುಸ್ತರವಾದ, ಸಂಪನ್ಮೂಲಗಳ ಕೊರತೆ ಇರುವ ಭೂಪ್ರದೇಶಗಳಲ್ಲಿ ಇರುವ ದುರ್ಬಲ ವರ್ಗಗಳಿಗೆ ಸೇರಿದವರೊಂದಿಗೆ ವೈದ್ಯವೃತ್ತಿಯನ್ನು ನಡೆಸುವ ಪ್ರಕ್ರಿಯೆಯಲ್ಲಿ ಇರುವ ಸಂಕೀರ್ಣತೆಗಳನ್ನು/ ಅರಿಯುವ ಅವಕಾಶವನ್ನು ನೀಡುತ್ತಿದೆ.
ಈ ಫೆಲೊಷಿಪ್ ವೈದ್ಯರುಗಳಿಗೆ, ಕೆಳಗೆ ಹೇಳಲಾದ ಸಂಗತಿಗಳನ್ನೂ ಒಳಗೊಂಡಂತೆ, ವಿವಿಧ ಅವಕಾಶಗಳನ್ನೂ ಅನುಭವಗಳನ್ನೂ ಒದಗಿಸುತ್ತದೆ:
- ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಅನುಭವಿ ವೈದ್ಯರುಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅವಕಾಶ
- ಸಮಾನ ಮನಸ್ಕ ಫೆಲೊಗಳು ಮತ್ತು ವೈದ್ಯರ ಒಡನಾಟ
- ದೇಶದ, ತಲುಪಲು ಅತ್ಯಂತ ದುಸ್ತರವಾದ ಪ್ರದೇಶಗಳಿಗೆ ಪ್ರವಾಸ ಮಾಡುವ ಅವಕಾಶ
- ಫೆಲೊಷಿಪ್ ಅನ್ನು ಪೂರ್ಣಗೊಳಿಸಿದ್ದಾರೆ ಎಂದು ದೃಢೀಕರಿಸುವ ಪ್ರಮಾಣಪತ್ರ
- ಉದ್ಯೋಗ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ
ಸಹಭಾಗಿತ್ವದ ಕಾರ್ಯಕ್ರಮ
ಈ ಫೆಲೊಷಿಪ್ ದೇಶದ ವಿವಿಧ ಭಾಗಗಳಲ್ಲಿರುವ ಹನ್ನೊಂದು ಪ್ರತಿಷ್ಠಿತ ಸಂಸ್ಥೆಗಳೊಂದಿಗಿನ ಸಹಭಾಗಿತ್ವದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ಕೈಗೊಂಡಿರುವ ಒಂದು ಪ್ರಯತ್ನವಾಗಿದೆ. ಈ ಸಹಭಾಗಿತ್ವದ ಮೂಲಕ, ನಾವು ಫೆಲೊಗಳಿಗೆ ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಒಂದು ಅನನ್ಯ ಅವಕಾಶವನ್ನು ಕಲ್ಪಿಸಲು ಆಶಿಸುತ್ತೇವೆ.
Through this partnership, we hope to offer Fellows a unique opportunity to work with some of the most distinguished institutions in the country. Our 11 partners are as follows:
- ASHWINI (Association for Health Welfare in the Nilgiris) Nilgiris, Tamil Nadu
- Christian Hospital Bisamcuttack, Rayagada District, Odisha
- Chinchpada Christian Hospital, Nandurbar District, Maharashtra
- Herbertpur Christian Hospital, Dehradun District, Uttarakhand
- Jan Swasthya Sahayog, Ganiyari, Bilaspur District, Chhattisgarh
- Madhipura Christian Hospital, Madhepura District, Bihar
- Makunda Christian Leprosy & General Hospital, Karimganj District, Assam
- Shaheed Hospital, Dalli Rajhara, Durg District, Chhattisgarh
- Swasthya Swaraj, Kalahandi District, Odisha
- Sewa Rural, Bharuch District, Gujarat
- SEARCH (Society for Education, Action and Research in Community Health), Shodhgram, Gadchiroli District, Maharashtra.
ಕಾರ್ಯಕ್ರಮದ ಪ್ರಮುಖ ಅಂಶಗಳು
This will be an 18-month-long, site-centred programme.
- ಈ ಕಾರ್ಯಕ್ರಮವು ಹದಿನೆಂಟು ತಿಂಗಳ ಅವಧಿಯದಾಗಿದ್ದು, ಸ್ಥಳ ಕೇಂದ್ರಿತವಾಗಿರುತ್ತದೆ. ಸಂಪನ್ಮೂಲ ಕೊರತೆಯಿರುವ, ತಲುಪಲು ದುಸ್ತರವಾದ, ಗ್ರಾಮೀಣ ಪ್ರದೇಶಗಳಲ್ಲಿರುವ, ದ್ವಿತೀಯ ನೆಲೆಯ, ರೋಗಿಗಳ ಸಂಖ್ಯೆ ಮತ್ತು ಸಮುದಾಯ ಆರೋಗ್ಯದ ಮೇಲೆ ಗಮನವಿರುವ ಸೆಕಂಡರಿ ಆಸ್ಪತ್ರೆಗಳು ಕಾರ್ಯಕ್ಷೇತ್ರಗಳಾಗಿರುತ್ತವೆ.
- ಫೆಲೊಗಳು ಫ್ಯಾಮಿಲಿ ಮೆಡಿಸಿನ್, ಕಮ್ಯೂನಿಟಿ ಮೆಡಿಸಿನ್, ಜನರಲ್ ಮೆಡಿಸಿನ್, ಆಬ್‌ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ, ಪೀಡಿಯಾಟ್ರಿಕ್ಸ್, ಜನರಲ್ ಸರ್ಜರಿ, ಅನೀಸ್ತೇಸಿಯಾ, ಆಫ್‌ಥಾಲ್‌ಮಾಲಜಿ, ಆರ್ಥೋಪೆಡಿಕ್ಸ್ ಮತ್ತು ಸೈಕಯಾಟ್ರಿ – ಈ ಯಾವುದಾದರೂ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
- ಫೆಲೊಗಳು ಈಗ ತಾನೇ ಪದವಿ ಮುಗಿಸಿರುವ ಅಥವಾ ಕೆಲವು ವರ್ಷಗಳ ವೃತ್ತಿ ಅನುಭವವಿರುವ ಸ್ನಾತಕೋತ್ತರ ಪದವೀಧರರಾಗಿರಬೇಕು (ತಮ್ಮ ಸ್ನಾತಕೋತ್ತರ ಪದವಿಯನ್ನು 2018 ರಿಂದ 2025ರ ಅವಧಿಯಲ್ಲಿ ಪಡೆದಿರಬೇಕು).
- ಫೆಲೊಗಳು ಎರಡು ಸ್ಥಳಗಳಲ್ಲಿ ಸರದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಮೊದಲ ಸ್ಥಳದಲ್ಲಿಸುಮಾರು 9 ತಿಂಗಳ ಕಾಲ ಕೆಲಸ ಮಾಡಿ, ಎರಡನೆಯ ಸ್ಥಳದಲ್ಲಿ 7 ತಿಂಗಳ ಅವಧಿಗೆ ಕೆಲಸ ಮಾಡಬೇಕು. ಉಳಿದ 2 ತಿಂಗಳು ದೃಷ್ಟಿಕೋನ ಬೆಳವಣಿಗೆ, ವಿಶ್ರಾಂತಿ ಮತ್ತು ಇತರ ಕಾರ್ಯಗಳಿಗೆ ಮೀಸಲಾಗಿರುತ್ತದೆ.
- ಪ್ರತಿಯೊಬ್ಬ ಫೆಲೊಗೆ ಒಬ್ಬರು ಮಾರ್ಗದರ್ಶಕರು ಇರುತ್ತಾರೆ. ಫೆಲೊ ತಮ್ಮ ಕಾರ್ಯದ ಅವಧಿಯಲ್ಲಿ ಗಮನಹರಿಸಬೇಕಾದ ಕ್ಷೇತ್ರಗಳನ್ನು ಫೆಲೊ ಮತ್ತು ಅವರ ಮಾರ್ಗದರ್ಶಕರು ಒಟ್ಟಿಗೆ ಗುರುತಿಸಿ, ಅದಕ್ಕೆ ಒಂದು ಯೋಜನೆಯನ್ನು ಸಿದ್ಧಪಡಿಸುತ್ತಾರೆ.
ಭಾಷಾ ಪರಿಣತಿ: ಇಂಗ್ಲಿಷ್, ಹಿಂದಿ ಮತ್ತು ಕಾರ್ಯಕ್ಷೇತ್ರದ ಸ್ಥಳೀಯ ಭಾಷೆ.
For a more detailed understanding, please read the FAQs.
ಪುನರುಚ್ಛರಿತ ಪ್ರಶ್ನೆಗಳು
ಫೆಲೊ ಆದವರು ಈ ಕಾರ್ಯಕ್ರಮದ ಅವಧಿಯಲ್ಲಿ ಗೌರವಧನವನ್ನೇನಾದರೂ ಪಡೆಯುತ್ತಾರೆಯೇ?
ಹೌದು. ಅವರಿಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ ಗೌರವಧನ ದೊರಕುತ್ತದೆ.
ಫೆಲೊಷಿಪ್ ಯಾವಾಗ ಪ್ರಾರಂಭವಾಗುತ್ತದೆ?
ಫೆಲೊಷಿಪ್ ಅನ್ನು ಸೆಪ್ಟೆಂಬರ್ 2025 ರಲ್ಲಿ ಪ್ರಾರಂಭವಾಗುತ್ತದೆ.
ಈ ಕಾರ್ಯಕ್ರಮದ ಅವಧಿ ಎಷ್ಟಿರುತ್ತದೆ?
ಈ ಕಾರ್ಯಕ್ರಮವನ್ನು 18 ತಿಂಗಳ ಅವಧಿಗೆ ವಿನ್ಯಾಸಗೊಳಿಸಲಾಗಿದೆ.
ಈ ಕಾರ್ಯಕ್ರಮದ ರಚನೆ ಹೇಗಿದೆ?
ಈ ಕಾರ್ಯಕ್ರಮವು, ಸಮುದಾಯ ಹಾಗೂ ಸಾಮಾಜಿಕ ಸಂದರ್ಭಗಳಲ್ಲಿ ಸಾಮರ್ಥ್ಯ ಅಭಿವೃದ್ಧಿಯನ್ನೂ ಒಳಗೊಂಡಂತೆ, ಎರಡು ಸ್ಥಳಗಳಲ್ಲಿ ನಿಯೋಜನೆಯನ್ನು ಒಳಗೊಂಡಿರುತ್ತದೆ. ಫೆಲೊಗಳು ಒಂದು ಸ್ಥಳದಲ್ಲಿ9 ತಿಂಗಳ ಅವಧಿಗೆ ಮತ್ತು ಇನ್ನೊಂದು ಸ್ಥಳದಲ್ಲಿ 7 ತಿಂಗಳ ಅವಧಿಗೆ ನಿಯೋಜನೆಗೊಳ್ಳುತ್ತಾರೆ. ಸಾಮರ್ಥ್ಯ ಅಭಿವೃದ್ಧಿಯ ಅಧಿವೇಶನಗಳು ಪೂರ್ವನಿಗದಿತ ಸ್ಥಳದಲ್ಲಿ ಅಥವಾ ಆನ್‌ಲೈನ್‌ನಲ್ಲಿ ನಡೆಯಬಹುದು.
ಈ ಕಾರ್ಯಕ್ರಮಕ್ಕೆ ಯಾರು ಅರ್ಜಿ ಸಲ್ಲಿಸಬಹುದು?
ಎಂಬಿಬಿಎಸ್ ಪದವಿಯೊಂದಿಗೆ ಫ್ಯಾಮಿಲಿ ಮೆಡಿಸಿನ್, ಕಮ್ಯೂನಿಟಿ ಮೆಡಿಸಿನ್, ಜನರಲ್ ಮೆಡಿಸಿನ್, ಆಬ್‌ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ, ಪೀಡಿಯಾಟ್ರಿಕ್ಸ್, ಜನರಲ್ ಸರ್ಜರಿ, ಅನಸ್ತೇಸಿಯಾ, ಆಫ್ತಾಲ್‌ಮಾಲಜಿ, ಆರ್ಥೋಪೆಡಿಕ್ಸ್ ಮತ್ತು ಸೈಕಯಾಟ್ರಿ ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಅಭ್ಯರ್ಥಿಗಳು, 2018 ರಿಂದ 2025ರ ಅವಧಿಯಲ್ಲಿ, ಭಾರತ ಸರಕಾರದಿಂದ ಅಂಗೀಕೃತವಾದ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
ಫೆಲೊ ಆದವರಿಗೆ ಕಾರ್ಯಕ್ರಮದಿಂದ ಹೇಗೆ ಪ್ರಯೋಜನವಾಗುತ್ತದೆ?
ಫೆಲೊ ಆದವರು ವಿವಿಧ ಸ್ವರೂಪದ ರೋಗಿಗಳನ್ನು ನೋಡುವುದರೊಂದಿಗೆ, ನೇರವಾಗಿ ಮತ್ತು ಸ್ವತಂತ್ರವಾಗಿ ಚಿಕಿತ್ಸಕ/ಶಸ್ತ್ರಕ್ರಿಯಾತ್ಮಕ ಅನುಭವವನ್ನು ಪಡೆಯಬಹುದು. ಅಲ್ಲದೆ ಫೆಲೊ ಆದವರು ಭಾರತದ ವಿವಿಧ ಭಾಗಗಳ ಆರೋಗ್ಯ ಕೇಂದ್ರಗಳಲ್ಲಿರುವ ಅನುಭವೀ ವೈದ್ಯರಿಂದ ಮಾರ್ಗದರ್ಶನ ಪಡೆಯಬಹುದು. ಇದು ಅವರಿಗೆ ಕಾರ್ಯಾನುಭವದೊಂದಿಗೆ ಸಾಮುದಾಯಿಕ ಆರೋಗ್ಯದ ಅರಿವನ್ನೂ ಬೆಳೆಸುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಂಸ್ಥೆಗಳು ಯಾವುವು?
ಸಮುದಾಯಗಳಲ್ಲಿ ವ್ಯಾಪಕ ಆರೋಗ್ಯ ಸೇವೆಯನ್ನು ಸಲ್ಲಿಸುತ್ತಿರುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಿರುವ ಈ ಕೆಳಗಿನ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ.
ಅಶ್ವಿನಿ (ASHWINI -Association of Health Welfare in the Nilgiris) ನೀಲಗಿರಿ ಜಿಲ್ಲೆ, ತಮಿಳುನಾಡು.
ಕ್ರಿಶ್ಚಿಯನ್ ಹಾಸ್ಪಿಟಲ್, ಬಿಸಮ್ ಕಟಕ್, ರಾಯ್ಘಡ ಜಿಲ್ಲೆ, ಒರಿಸ್ಸಾ
ಚಿಂಚ್‌ಪಾದ ಕ್ರಿಶ್ಚಿಯನ್ ಹಾಸ್ಪಿಟಲ್, ನಂದೂರ್ಬಾರ್ ಜಿಲ್ಲೆ, ಮಹಾರಾಷ್ಟ್ರ
ಹರ್ಬರ್ಟ್ ಪುರ್ ಕ್ರಿಶ್ಚಿಯನ್ ಹಾಸ್ಪಿಟಲ್, ಡೆಹ್ರಾಡೂನ್ ಜಿಲ್ಲೆ, ಉತ್ತರಾಖಂಡ್
ಜನ ಸ್ವಾಸ್ಥ್ಯ ಸಹಯೋಗ್, ಗನಿವಾರಿ, ರಾಯ್ ಪುರ ಜಿಲ್ಲೆ, ಛತ್ತೀಸ್‌ಘಡ
ಮದಿಪುರ ಕ್ರಿಶ್ಚಿಯನ್ ಹಾಸ್ಪಿಟಲ್, ಮಾದೆಪುರ ಜಿಲ್ಲೆ, ಬಿಹಾರ
ಮಾಕುಂಡ ಕ್ರಿಶ್ಚಿಯನ್ ಲೆಪ್ರಸಿ ಮತ್ತು ಜನರಲ್ ಹಾಸ್ಪಿಟಲ್, ಕರೀಂ ಗಂಜ್ ಜಿಲ್ಲೆ, ಅಸ್ಸಾಂ
ಶಹೀದ್ ಹಾಸ್ಪಿಟಲ್, ದಲ್ಲಿ ರಾಜ್ ಹರ, ದುರ್ಗ್ ಜಿಲ್ಲೆ ಛತ್ತೀಸ್‌ಘಡ
ಸ್ವಾಸ್ಥ್ಯ ಸ್ವರಾಜ್, ಕಾಳಹಂದಿ ಜಿಲ್ಲೆ, ಒರಿಸ್ಸಾ
ಈ ಕಾರ್ಯಕ್ರಮವು ಫೆಲೊ ಆದವರು ಗ್ರಾಮೀಣ ಪ್ರದೇಶದಲ್ಲಿ ತಂಗಬೇಕೆಂದು ನಿರೀಕ್ಷಿಸಲಾಗಿದೆ. ಅವರ ವಾಸ್ತವ್ಯಕ್ಕೆ ಏನು ವ್ಯವಸ್ಥೆಯನ್ನು ಮಾಡಲಾಗುತ್ತದೆ?
ಅವರನ್ನು ನಿಯೋಜಿಸಲಾಗುವ ಸಂಸ್ಥೆಗಳು ಅವರಿಗೆ ಸಮರ್ಪಕವಾದ ವಾಸದ ವ್ಯವಸ್ಥೆಯನ್ನು (ಒಬ್ಬರಿಗೆ ಅಥವಾ ಕುಟುಂಬಕ್ಕೆ) ಒದಗಿಸುತ್ತವೆ, ಅಥವಾ ಅಂತಹ ವ್ಯವಸ್ಥೆಯನ್ನು ದೊರಕಿಸಿಕೊಡುತ್ತವೆ.
ಕಾರ್ಯಕ್ರಮದ ಅವಧಿಯಲ್ಲಿ ಫೆಲೊ ಆದವರನ್ನು ಎಷ್ಟು ಸ್ಥಳಗಳಿಗೆ ನಿಯೋಜಿಸಲಾಗುತ್ತದೆ?
ಪ್ರತಿಯೊಬ್ಬರಿಗೂ ಸರದಿಯಲ್ಲಿ ಎರಡು ಸ್ಥಳಗಳಲ್ಲಿ ನಿಯೋಜನೆ ಇರುತ್ತದೆ.
ಸಂಬಂಧಿಸಿದ ವೈದ್ಯಕೀಯ ಅಧಿಕಾರಿಗಳಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆಯೇ?
ಕಾರ್ಯಕ್ರಮದ ಕೊನೆಯಲ್ಲಿ, ಫೆಲೊಷಿಪ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಗೆಗೆ, ಜೊತೆ ಸೇರಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ಮತ್ತು ಸಹವರ್ತಿ ಸಂಸ್ಥೆಗಳು ಜಂಟಿಯಾಗಿ ಒಂದು ಪ್ರಮಾಣ ಪತ್ರವನ್ನು ನೀಡುತ್ತದೆ.
ಇಲ್ಲಿರುವ ಸ್ಥಳಗಳು ತಲುಪಲು ದುಸ್ತರವಾದ, ಗ್ರಾಮೀಣ ಪ್ರದೇಶಗಳಾದುದರಿಂದ ಫೆಲೊ ಆದವರಿಗೆ ತಮ್ಮ ಕಾರ್ಯನಿರ್ವಹಣೆಯ ಅವಧಿಯಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆ ಇರುತ್ತದೆಯೇ?
ಇಲ್ಲಿರುವ ಪ್ರತಿಯೊಂದು ಸ್ಥಳಗಳಲ್ಲಿಯೂ ಗುಣಮಟ್ಟದ ವೈದ್ಯಕೀಯ ಸೌಲಭ್ಯವಿರುತ್ತದೆ. ಈ ಸಂಸ್ಥೆಗಳು ಅನೇಕ ವರ್ಷಗಳಿಂದ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಿರುತ್ತವೆ. ಈ ಸಂಸ್ಥೆಗಳು ಮಾಡಿರುವ ಕಾರ್ಯದ ವಿಸ್ತಾರ ಹಾಗೂ ಅಲ್ಲಿ ದೊರೆಯುವ ಸೌಲಭ್ಯಗಳ ಕುರಿತಾಗಿ ಕುರಿತಾಗಿ ತಿಳಿಯಲು ಅವುಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.
ಕಾರ್ಯಕ್ರಮದ ಅವಧಿಯಲ್ಲಿ ಫೆಲೊ ಆದವರಿಗೆ ರಜೆಯ ಸೌಲಭ್ಯ ಇರುತ್ತದೆಯೇ?
ಹೌದು. ರಜೆಯ ಸೌಲಭ್ಯ ಇರುತ್ತದೆ. ರಜೆಯ ಅವಧಿ ಹಾಗೂ ಇತರ ವಿವರಗಳನ್ನು ಸಂಸ್ಥೆಗಳಿಗೆ ನಿಯೋಜಿಸುವಾಗ ಚರ್ಚೆಯ ಮೂಲಕ ತಿಳಿಯಬಹುದು.
ಒಂದು ಸ್ಥಳದಲ್ಲಿ ಕೇವಲ ಒಬ್ಬರೇ ಫೆಲೊ ಇರುವ ಸಾಧ್ಯತೆ ಇದೆಯೇ?
ಫೆಲೊ ಆದವರು ಒಂದು ಸ್ಥಳದಲ್ಲಿರುವ ವೈದ್ಯಕೀಯ ತಂಡದ ಭಾಗವಾಗಿ ಕಾರ್ಯ ನಿರ್ವಹಿಸುತ್ತಾರೆ. ವಿಶೇಷ ವೈದ್ಯಕೀಯ ವಿಭಾಗಗಳ ಸಂಖ್ಯೆ ಹಾಗೂ ಆಯ್ಕೆಯಾಗುವ ಫೆಲೊ ಆಗುವವರ ಸಂಖ್ಯೆಯನ್ನು ಆಧರಿಸಿ ಒಂದು ಸ್ಥಳದಲ್ಲಿ ಒಬ್ಬರು ಅಥವಾ ಇಬ್ಬರು ಫೆಲೊಗಳಿರುವ ಸಾಧ್ಯತೆ ಇದೆ.
ಕಾರ್ಯಕ್ರಮದ ಅಂತ್ಯದ ನಂತರ ವೃತ್ತಿ ನಿಯೋಜನೆ ಇರುತ್ತದೆಯೇ?
ಅಗತ್ಯ ಹಾಗೂ ಪರಸ್ಪರ ಸೂಕ್ತತೆ ಯನ್ನು ಆಧರಿಸಿ, ಕಾರ್ಯಕ್ರಮ ಮುಗಿದ ನಂತರ ವೃತ್ತಿ ನಿಯೋಜನೆಯ ಕುರಿತು ಚರ್ಚಿಸಬಹುದು.
ಫೆಲೊ ಆದವರೊಬ್ಬರು ನಡುವಿನಲ್ಲಿ ಕಾರ್ಯಕ್ರಮದಿಂದ ಹೊರ ನಡೆಯಲು ಬಯಸಿದರೆ ಏನಾಗುತ್ತದೆ?
ಅಂತಹ ಸಂದರ್ಭದಲ್ಲಿ ಒಂದು ಸೂಕ್ತ ಪೂರ್ವ ಸೂಚನೆಯ ಅವಧಿಯನ್ನು ಫೆಲೊ ಆದವರು, ಅವರು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್ ಇವರ ನಡುವಿನ ಚರ್ಚೆಯಲ್ಲಿ ನಿರ್ಧರಿಸಬಹುದು. ಸಂಬಂಧಪಟ್ಟ ಫೆಲೊ ಅವರಿಗೆ ಬರಬೇಕಾದ ವೇತನ ಇತ್ಯಾದಿಗಳಿದ್ದರೆ ಅದನ್ನು ಅವಧಿಯಾಧಾರದಲ್ಲಿ( pro- rata basis) ಸಂದಾಯ ಮಾಡಲಾಗುತ್ತದೆ.
ಇದು ಒಂದು ವಿಷಯದ ಮೇಲೆ ವಿಶೇಷ ಗಮನ ಹರಿಸುವ ಫೆಲೊಷಿಪ್ ಅಥವಾ ರೆಸಿಡೆನ್ಸಿ ರೀತಿಯ ಕಾರ್ಯಕ್ರಮವೇ?
ಈ ಕಾರ್ಯಕ್ರಮವು ಒಂದು ವಿಷಯದ ಮೇಲೆ ವಿಶೇಷ ಗಮನ ಹರಿಸುವ ಫೆಲೊಷಿಪ್ ಅಥವಾ ರೆಸಿಡೆನ್ಸಿ ರೀತಿಯ ಕಾರ್ಯಕ್ರಮಕ್ಕಿಂತ ಭಿನ್ನವಾದುದು. ನಾವು ಫೆಲೊಗಳಿಗೆ ನಮ್ಮ ಸಹವರ್ತಿಗಳು ಕೆಲಸ ಮಾಡುವ ಸ್ಥಳಗಳಲ್ಲಿ ವೈದ್ಯಕೀಯ ಸೇವೆ ನೀಡುವ ಮತ್ತು ಸಮುದಾಯದೊಂದಿಗೆ ಕೆಲಸ ಮಾಡುವ ಒಂದು ಅನನ್ಯ ಅನುಭವವನ್ನು ನೀಡಲು ಇಚ್ಛಿಸುತ್ತೇವೆ. ಇದು ಅನಾರೋಗ್ಯದ ಕಾರಣಗಳು ಮತ್ತು ಅವುಗಳನ್ನು ವಿವರಿಸುವ ರೀತಿ – ಇವುಗಳನ್ನು ಅರ್ಥಮಾಡಿಕೊಳ್ಳಲು ಸಹಕರಿಸುತ್ತವೆ. ಅಲ್ಲದೇ, ಸೂಕ್ತವಾದ ತಂತ್ರಜ್ಞಾನ ಮತ್ತು ಔಷಧಿಗಳನ್ನು ಬಳಕೆಯಿಂದ, ರೋಗಿಗಳಿಗೆ ಮಾತ್ರವಲ್ಲ, ಅವರ ಕುಟುಂಬ ಮತ್ತು ಸಮುದಾಯಕ್ಕೆ ಅನುಕೂಲವಾಗುವಂತೆ ವೈದ್ಯಕೀಯ ಜ್ಞಾನವನ್ನು ಆ ಸಂದರ್ಭೀಕರಿಸುವುದನ್ನು ಕೂಡ ಅರ್ಥಮಾಡಿಕೊಳ್ಳಲು ನಮ್ಮ ಕಾರ್ಯಕ್ರಮವು ನೆರವಾಗುತ್ತದೆ.
ಇನ್ನೂ ಹೆಚ್ಚಿನ ಪ್ರಶ್ನೆಗಳಿದ್ದರೆ ಸಂಪರ್ಕಿಸಬೇಕಾದ ಈಮೇಲ್ ವಿಳಾಸ:
