ಜಾರ್ಖಂಡ್‌ನಲ್ಲಿ ನಮ್ಮ ಕೆಲಸವು 2022 ರಲ್ಲಿ ಪ್ರಾರಂಭವಾಯಿತು.

ನಾವು ಪ್ರಸ್ತುತ ಗುಮ್ಲಾ, ರಾಂಚಿ, ಸಿಮ್ಡೆಗಾ ಮತ್ತು ಖುಂಟಿ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಶಿಕ್ಷಣ, ಆರೋಗ್ಯ, ಜೀವನೋಪಾಯಗಳು ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತೇವೆ.

Jharkhand-Map fig a1
Jharkhand-Map fig a2

ಶಿಕ್ಷಣ

ನಾವು ಬ್ಲಾಕ್ ಮತ್ತು ಕ್ಲಸ್ಟರ್ ಮಟ್ಟದ ಕಾರ್ಯಾಗಾರಗಳು, ಬಾಲ್ ಶೋಧ್ ಮೇಳ, ಸ್ವಯಂಪ್ರೇರಿತ ಶಿಕ್ಷಕರ ವೇದಿಕೆ ಹಾಗೂ ಬೃಹತ್ ಮಟ್ಟದ ಬೇಸಿಗೆ ಮತ್ತು ಚಳಿಗಾಲದ ಶಿಬಿರಗಳಂತಹ ವಿವಿಧ ವಿಧಾನಗಳ ಮೂಲಕ ಸುಮಾರು 3,500 ಶಿಕ್ಷಕರೊಂದಿಗೆ ತೊಡಗಿಸಿಕೊಂಡಿದ್ದೇವೆ. 2026 ರಲ್ಲಿ, ರಾಂಚಿಯ ಇಟ್ಕಿ ಬ್ಲಾಕ್‌ನಲ್ಲಿರುವ ಅಜೀಂ ಪ್ರೇಮ್‌ಜೀ ಶಾಲೆ ಕಾರ್ಯಾರಂಭ ಮಾಡಲಿದೆ.

6

ಶಿಕ್ಷಕ ಕಲಿಕಾ ಕೇಂದ್ರಗಳು

1000

ಅಂಗನವಾಡಿ ಶಿಕ್ಷಕರೊಡನೆ ನೇರವಾಗಿ ತೊಡಗಿಸಿಕೊಂಡಿದ್ದೇವೆ

3,500 +

ಪ್ರಾಥಮಿಕ ಶಾಲಾ ಶಿಕ್ಷಕರೊಡನೆ ನೇರವಾಗಿ ತೊಡಗಿಸಿಕೊಂಡಿದ್ದೇವೆ

700

ಮುಖ್ಯ ಶಿಕ್ಷಕರೊಡನೆ ತೊಡಗಿಸಿಕೊಂಡಿದ್ದೇವೆ

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯನ್ನು 2010 ರಲ್ಲಿ ಸ್ಥಾಪಿಸಲಾಯಿತು. ಇದರ ಮೂರನೇ ಕ್ಯಾಂಪಸ್ ರಾಂಚಿಯ ಹೊರವಲಯದಲ್ಲಿರುವ ಇಟ್ಕಿಯಲ್ಲಿದೆ. 150 ಎಕರೆ ಪ್ರದೇಶದಲ್ಲಿ ಹರಡಿರುವ ಈ ವಿಶ್ವವಿದ್ಯಾಲಯದ ಆವರಣದಲ್ಲಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಕೂಡ ಇರಲಿದೆ. ಇದರ ನಿರ್ಮಾಣ ಕಾರ್ಯವು ಐದರಿಂದ ಏಳು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ನಡೆಯಲಿದ್ದು, ಮೊದಲ ಹಂತದ ಕಾಮಗಾರಿಯು ಜುಲೈ 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಪ್ಲೈಡ್ ಎಕನಾಮಿಕ್ಸ್‌ನಲ್ಲಿ MA ಮತ್ತು ಡೆವಲಪ್‌ಮೆಂಟ್‌ನಲ್ಲಿ MA – ಇವು ಈ ಕ್ಯಾಂಪಸ್‌ನಲ್ಲಿ ನೀಡಲಾಗುವ ಮೊದಲ ಎರಡು ಕೋರ್ಸ್‌ಗಳಾಗಿರುತ್ತವೆ.

ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್

ಅವಕಾಶವಂಚಿತ ಹಿನ್ನೆಲೆಯಿಂದ ಬಂದ ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣವನ್ನು ಮುಂದುವರಿಸಲು ಬೆಂಬಲ ನೀಡುವ ಉದ್ದೇಶದಿಂದ ಈ ವಿದ್ಯಾರ್ಥಿವೇತನ ಯೋಜನೆಯನ್ನು 2024ರಲ್ಲಿ ಪ್ರಾರಂಭಿಸಲಾಯಿತು. ಈ ಉಪಕ್ರಮವು ಈಗ ಜಾರ್ಖಂಡ್‌ನ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದೆ.

ಆರೋಗ್ಯ

ಜಾರ್ಖಂಡ್‌ನಲ್ಲಿ ನಾವು, ನಮ್ಮ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳನ್ನು ಜನವರಿ 2024 ರಲ್ಲಿ ಪ್ರಾರಂಭಿಸಿದೆವು. ನಮ್ಮ ಗಮನವು ತಾಯಿ ಮತ್ತು ಮಗುವಿನ ಆರೋಗ್ಯ, ಪ್ರೌಢಾವಸ್ಥೆಯಲಿರುವ ಮಕ್ಕಳ ಆರೋಗ್ಯ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ಕಾಯಿಲೆಗಳು ಹಾಗೂ ಕುಟುಂಬ ಯೋಜನೆಯ ಮೇಲೆ ಕೇಂದ್ರೀಕೃತವಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಅಗತ್ಯ ಸೇವೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಸುಧಾರಿಸುವುದು ನಮ್ಮ ಗುರಿ.

5

ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಸಹಯೋಗ

40

ಉಪ ಆರೋಗ್ಯ ಕೇಂದ್ರಗಳೊಂದಿಗೆ ಸಹಯೋಗ

3

ಜನರಿಗೆ ಆರೋಗ್ಯ ಸೇವೆ

ಬಾಲವಾಡಿಗಳು

ಸೆಪ್ಟೆಂಬರ್ 2023 ರಲ್ಲಿ ಜಾರ್ಖಂಡ್‌ನಲ್ಲಿ ಬಾಲವಾಡಿಗಳನ್ನು ಪ್ರಾರಂಭಿಸಲಾಯಿತು. ಇವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ಹಿನ್ನೆಲೆಯುಳ್ಳ ಏಳು ತಿಂಗಳಿಂದ ಮೂರು ವರ್ಷದೊಳಗಿನ ವಯಸ್ಸಿನ ಮಕ್ಕಳ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ‘ಶಿಶು ಘರ್’ ಎಂದು ಕರೆಯಲ್ಪಡುವ ಈ ಬಾಲವಾಡಿಗಳು ದೈನಂದಿನ ಆರೈಕೆ, ಬಿಸಿ ಅಡುಗೆಯ ಊಟ, ಆರಂಭಿಕ ಪ್ರಚೋದನೆ (early stimulation) ಮತ್ತು ಬೆಳವಣಿಗೆಯ ಮೇಲ್ವಿಚಾರಣೆಯನ್ನು ಒದಗಿಸುತ್ತವೆ. ನಾವು ರಾಂಚಿ, ಗುಮ್ಲಾ, ಸಿಮ್ಡೆಗಾ, ಖುಂಟಿ, ಪಶ್ಚಿಮ ಸಿಂಗ್‌ಭೂಮ್ ಮತ್ತು ಪಾಕುರ್ ಜಿಲ್ಲೆಗಳ 18 ಬ್ಲಾಕ್‌ಗಳಲ್ಲಿ ಬಾಲವಾಡಿಗಳನ್ನು ನಡೆಸುತ್ತಿದ್ದೇವೆ.

367

ಬಾಲವಾಡಿಗಳು ಕಾರ್ಯಾಚರಣೆಯಲ್ಲಿವೆ

7,500+

ದಾಖಲಾಗಿರುವ ಮಕ್ಕಳು

ಜೀವನೋಪಾಯಗಳು

ಜೀವನೋಪಾಯ ಕ್ಷೇತ್ರದಲ್ಲಿ ನಮ್ಮ ಕೆಲಸವು 2023 ರಲ್ಲಿ ಗುಮ್ಲಾ ಮತ್ತು ಸಿಮ್ಡೆಗಾ ಜಿಲ್ಲೆಗಳಲ್ಲಿ ಸರ್ಕಾರದ ಸಹಯೋಗದೊಂದಿಗೆ ಪ್ರಾರಂಭವಾಯಿತು. ವಿಶೇಷವಾಗಿ ‘ಸೆಂಟ್ರಲ್ ಆದಿವಾಸಿ ಬೆಲ್ಟ್’ನಲ್ಲಿ, ಯಾವುದೇ ಅಪಾಯಗಳನ್ನು ಹೆಚ್ಚಿಸದೆ ಮನೆಯ ಆದಾಯದಲ್ಲಿ ಗಮನಾರ್ಹ ಮತ್ತು ಸುಸ್ಥಿರ ಸುಧಾರಣೆಯನ್ನು ತರುವುದು ನಮ್ಮ ಗುರಿಯಾಗಿದೆ.

10

ಗ್ರಾಮ ಪಂಚಾಯತಿಗಳೊಡನೆ ಸಹಯೋಗ

4,900

ಕುಟುಂಬಗಳು

12,000

ಜನರು

ಇತರ ಕ್ಷೇತ್ರಗಳು

ಅನುದಾನಗಳು

ನಾವು ಜಾರ್ಖಂಡ್‌ನಲ್ಲಿ 113 ಭಾಗೀದಾರ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಸಂಸ್ಥೆಗಳು ಮಕ್ಕಳು, ಸಾಂವಿಧಾನಿಕ ಮೌಲ್ಯಗಳು, ಲಿಂಗ ನ್ಯಾಯ, ಆಡಳಿತ, ಭೂಮಿ ಮತ್ತು ಅರಣ್ಯ ಅವಲಂಬಿತ ದುರ್ಬಲ ವರ್ಗಗಳು, ನಾಗರಿಕ ಸಮಾಜದ ಬಲವರ್ಧನೆ ಮತ್ತು ನಗರ ಉಪಕ್ರಮಗಳಂತಹ ವಿಷಯಾಧಾರಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ನಮ್ಮೊಂದಿಗೆ ಕೆಲಸ ಮಾಡಿ

ನಮ್ಮ ಹೊಸ ಉದ್ಯೋಗಾವಕಾಶಗಳ ಪಟ್ಟಿಯಿಂದ ನಿಮ್ಮ ಕೌಶಲ ಮತ್ತು ಉದ್ದೇಶಕ್ಕೆ ಸರಿಹೊಂದುವ ಸೂಕ್ತವಾದ ಕೆಲಸವನ್ನು ಕಂಡುಕೊಳ್ಳಿ.

ಅಂಕಿಅಂಶಗಳನ್ನು ಏಪ್ರಿಲ್‌ 2025ರಲ್ಲಿ ಪಡೆಯಲಾಗಿದೆ. ಇವುಗಳನ್ನು ವರ್ಷಕ್ಕೊಮ್ಮೆ ಪರಿಷ್ಕರಿಸಲಾಗುವುದು.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.