‘ಕಥಾವನ’ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು 2012ರಿಂದ ಆಯೋಜಿಸುತ್ತಿರುವ ಮಕ್ಕಳ ವಾರ್ಷಿಕ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ್) ಸಾಹಿತ್ಯೋತ್ಸವ. 2023ನೇ ಸಂಚಿಕೆಯ ʼಕಥಾವನʼದಲ್ಲಿ ಅಲೆದಾಡಿ, ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಕ್ಕಳ ಸಾಹಿತ್ಯವು ಲಭ್ಯವಾಗುವಂತೆ ಮಾಡಿದ ಮೂರು ಆಸಕ್ತಿಕರ ಕಾರ್ಯಕ್ರಮಗಳ ಬಗ್ಗೆ ತಿಳಿಯೋಣ.