ಅನುದಾನಗಳು

Philanthropy

ನಮ್ಮ ಅನುದಾನ ಕಾರ್ಯವು, ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜಕ್ಕಾಗಿ ಕೊಡುಗೆ ನೀಡುವ ನಮ್ಮ ಕಾಣ್ಕೆಯಿಂದ ಹೊರಹೊಮ್ಮಿದೆ.

ನಾವು, ಸಣ್ಣ ಮತ್ತು ಆರಂಭಿಕ ಹಂತದಲ್ಲಿರುವ ಸಂಸ್ಥೆಗಳು, ಸಾಕಷ್ಟು ದೊಡ್ಡದಾಗಿ ಬೆಳೆದಿರುವ ಹಾಗೂ ಪಕ್ವವಾಗಿರುವ ಸಂಸ್ಥೆಗಳು – ಹೀಗೆ ಹಲವು ಗಾತ್ರದ ಸಂಸ್ಥೆಗಳಿಗೆ ಬೆಂಬಲ ನೀಡುತ್ತೇವೆ. ನಮ್ಮ ಅನುದಾನದ ಮೊತ್ತವು ಕೆಲವು ಲಕ್ಷ ರೂಪಾಯಿಗಳಿಂದ ಹತ್ತಾರು ಕೋಟಿಯ ತನಕ ಇದ್ದು, ಅನುದಾನ ಕಾಲಾವಧಿಯು 1ರಿಂದ 10 ವರ್ಷಗಳವರೆಗೆ ಇರುತ್ತದೆ. ಆದರೆ, ಹೆಚ್ಚಿನ ಅನುದಾನಗಳ ಕಾಲಾವಧಿಯು 3ರಿಂದ 4 ವರ್ಷಗಳ ತನಕ ಇದೆ.

ನಮ್ಮ ಸಹವರ್ತಿ ಸಂಸ್ಥೆಗಳ ಕೆಲಸವು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಿದೆ. ಈ ಕೆಲವು ಕ್ಷೇತ್ರಗಳನ್ನು ನಾವು ʻಕ್ಷೇತ್ರವಿಷಯʼಗಳಾಗಿ (ಥೀಮ್‌) ಸಂಯೋಜಿಸಿದ್ದೇವೆ. ದುರ್ಬಲ ವರ್ಗದ ಮತ್ತು ಅವಕಾಶವಂಚಿತ ಜನರ ಬದುಕಿನಲ್ಲಿ ನಿಜವಾದ ಬದಲಾವಣೆಯನ್ನು ತರುವ ಹೊಸ ಕ್ಷೇತ್ರಗಳನ್ನು ನಾವು ನಿರಂತರವಾಗಿ ಸೇರಿಸಿಕೊಳ್ಳುತ್ತಿದ್ದೇವೆ.

ಅಂತಹ ದುರ್ಬಲ ವರ್ಗದ ಮತ್ತು ಅವಕಾಶ ವಂಚಿತ ಜನರ ಕೆಲವು ಉದಾಹರಣೆಗಳೆಂದರೆ: ಅಂಗ ವೈಕಲ್ಯವನ್ನು ಹೊಂದಿರುವ ವ್ಯಕ್ತಿಗಳು, ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರು, ಅಪಾಯದಲ್ಲಿರುವ ಹದಿಹರೆಯದ ಹುಡುಗಿಯರು ಮತ್ತು ಮಕ್ಕಳು, ನಿರಾಶ್ರಿತ ವೃದ್ಧರು, ಮಲ ಹೊರುವವರು ಮತ್ತು ಚಿಂದಿ ಆಯುವವರು, ವಲಸಿಗ ಮತ್ತು ಅನೌಪಚಾರಿಕ ವಲಯದ ಕಾರ್ಮಿಕರು, ತೀರಾ ಅಲ್ಪ ಭೂಮಿಯನ್ನು ಹೊಂದಿರುವ ರೈತರು, ಮುಖ್ಯವಾಗಿ ದುರ್ಬಲ ಆದಿವಾಸಿ ಗುಂಪುಗಳು ಮತ್ತು ನೀರಿನ ಕೊರತೆ ಎದುರಿಸುತ್ತಿರುವ ಸಮುದಾಯಗಳು.

Health
university
Health
livelihoods
Health
university
Health
livelihoods
Health
livelihoods
Grants

ಚಿತ್ರ ಕ್ರೆಡಿಟ್ - ಪುರುಸೊತ್ತಮ್ ಠಾಕೂರ್

ನಮ್ಮ ಪಾಲುದಾರರೊಂದಿಗೆ ನಾವು ಮಾಡುತ್ತಿರುವ ಕೆಲಸವನ್ನು ಒಂಬತ್ತು ವಿಷಯಗಳಾಗಿ ವಿಂಗಡಿಸಬಹುದು. ಅವೆಂದರೆ:

ನಮ್ಮ ಅನುದಾನಗಳು, ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವುದು, ಸಾರ್ವಜನಿಕ ವ್ಯವಸ್ಥೆಗಳನ್ನು ತಲುಪಿಸುವುದು ಮುಂತಾದ ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲು ನಮ್ಮ ಸಹವರ್ತಿಗಳಿಗೆ ನೆರವಾಗುತ್ತವೆ. ನಾವು, ದೇಶದ ಅಭಿವೃದ್ಧಿಯಲ್ಲಿ ನಾಗರಿಕ ಸಮಾಜ ಸಂಸ್ಥೆಗಳ ಪಾತ್ರವನ್ನು ಕೂಡ ಗುರುತಿಸುತ್ತೇವೆ.

ಕೆಲವು ನಿರ್ದಿಷ್ಟ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ನಾವು ಅನೇಕ ಸಹವರ್ತಿಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಿದ್ದೇವೆ. ಇವುಗಳಲ್ಲಿ ಕೆಲವು ಹೀಗಿವೆ:

ನಾವು ನಮ್ಮ ಸಹವರ್ತಿಗಳಿಗೆ ಸಮೀಪದಲ್ಲಿರುವಂತೆ ತಂಡಗಳನ್ನು ರೂಪಿಸುತ್ತಿದ್ದು, ಇದು ನಾವು ಈಗಾಗಲೇ ಸಾಂಸ್ಥಿಕವಾಗಿ ಕೆಲಸ ಮಾಡುತ್ತಿರುವ ರಾಜ್ಯಗಳಿಂದ ಆಚೆಗಿನ ಕೆಲವು ಪ್ರದೇಶಗಳ ಮೇಲೆ ಗಮನ ನೀಡಲು ಸಾಧ್ಯವಾಗಿಸುತ್ತದೆ. ಇದು ಆಂಧ್ರ ಪ್ರದೇಶ, ಬಿಹಾರ, ಉತ್ತರ ಪ್ರದೇಶದ ಪೂರ್ವ ಭಾಗ, ಈಶಾನ್ಯ ಭಾರತ, ಒಡಿಶಾ ಮತ್ತು ತೆಲಂಗಾಣವನ್ನು ಒಳಗೊಂಡಿದೆ.

ಎಚ್ಚರಿಕೆ: ಹಣ ಅಥವಾ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಕೇಳುವ ವಂಚನೆಯ ಈಮೇಲ್‌ಗಳು ಮತ್ತು ಸಂದೇಶಗಳ ಮೇಲೆ ಎಚ್ಚರವಿರಲಿ. ನಿಮಗೆ ಅಂತಹ ಸಂದೇಶ ಬಂದಲ್ಲಿ, ಅದನ್ನು ಕೂಡಲೇ [email protected] ಗೆ ಈಮೇಲ್‌ ಮಾಡಿ.

 

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.